BBC documentary screening: ದೆಹಲಿ ಜಾಮಿಯಾ ವಿವಿಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಸ್ಕ್ರೀನಿಂಗ್‌: ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್‌

ದೆಹಲಿ: (BBC documentary screening) ದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘಟನೆಯು ಸಮೂಹ ಸಂವಹನ ವಿಭಾಗದಲ್ಲಿ ನರೇಂದ್ರ ಮೋದಿ ಅವರ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯೋಜನೆ ಹಾಕಿಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ವಶಪಡಿಸಿಕೊಳ್ಳಲಾಗಿದೆ.

2002 ರ ಗಲಭೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಆಧರಿಸಿದ ಸಾಕ್ಷ್ಯಚಿತ್ರವು ಬಿರುಗಾಳಿ ಎಬ್ಬಿಸಿದ್ದು, ಸರಕಾರವು ಚಲನಚಿತ್ರವನ್ನು ನಿಷೇಧಿಸಿತು ಮತ್ತು ನಂತರ ಸಾಮಾಜಿಕ ಮಾಧ್ಯಮಗಳಿಂದ ಅದರ ಲಿಂಕ್‌ ಗಳನ್ನು ತೆಗೆದುಹಾಕುವಂತೆ ಕೇಳಿದೆ. ಜವಾಹರಲಾಲ್‌ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪು ಬಿಬಿಸಿಯನ್ನು ಪ್ರದರ್ಶಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ವಿದ್ಯಾರ್ಥಿಗಳ ಒಕ್ಕೂಟದ ಕಚೇರಿಯಲ್ಲಿ ಇಂಟರ್ನೆಟ್‌ ಮತ್ತು ವಿದ್ಯುತ್‌ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ತನ್ನ ಮೊಬೈಲ್‌ ಹಾಗೂ ಲ್ಯಾಪ್‌ ಟಾಪ್‌ ನಲ್ಲಿ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಿದ್ದಾರೆ. ನಂತರದಲ್ಲಿ ಸಂಜೆ ಪ್ರತಿಭಟನಾ ಮೆರವಣಿಗೆಯನ್ನು ಕೂಡ ಮಾಡಿದ್ದಾರೆ.

ಅನುಮತಿ ನಿರಾಕರಣೆಯ ಮಧ್ಯೆಯೂ ಡಾಕ್ಯುಮೆಂಟರಿ ವೀಕ್ಷಣೆಗೆ ಮುಂದಾಗಿದ್ದು, ಇದರಿಂದ ಆಡಳಿತ ಮಂಡಳಿ ವಿದ್ಯುತ್‌ ಸ್ಥಗಿತಗೊಳಿಸಿದೆ. ಈ ವೇಳೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಲ್ಲು ತೂರಿ ಗಲಾಟೆ ಮಾಡಿದ್ದಾರೆ ಎಂದು ವರದಿಯಾಗಿದೆ. ನಂತರದಲ್ಲಿ ತಮ್ಮ ಮೊಬೈಲ್‌ ಹಾಗೂ ಲ್ಯಾಪ್‌ ಟಾಪ್‌ ಗಳಲ್ಲೇ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಿದ್ದಾರೆ.

ಇದೀಗ ಬಿಬಿಸಿ ಸಾಕ್ಷ್ಯಾ ಚಿತ್ರವನ್ನು ಪ್ರದರ್ಶನಕ್ಕೆ ಯೋಜನೆ ರೂಪಿಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಸ್ಟೂಡೆಂಟ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ ಫೇಸ್‌ ಬುಕ್‌ ನಲ್ಲಿ ಸ್ಕ್ರೀನಿಂಗ್‌ ಅನ್ನು ಹಂಚಿಕೊಂಡ ನಂತರ ಕ್ಯಾಂಪಸ್‌ ನಲ್ಲಿ ಯಾವುದೇ ಅನಧಿಕೃತ ಕೂಟಗಳಿಗೆ ಅವಕಾಶ ನೀಡುವುದಿಲ್ಲ ಎಂದು ಜಾಮಿಯಾ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : Rocks fell on highway: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಬಂಡೆಕಲ್ಲುಗಳು: 1 ಸಾವು, 2 ಮಂದಿಗೆ ಗಾಯ

ಇದನ್ನೂ ಓದಿ : Architect Balkrishna Doshi: ವಿಶ್ವಪ್ರಸಿದ್ಧ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ ಇನ್ನಿಲ್ಲ

ಇದನ್ನೂ ಓದಿ : Building collapse-3 dead: 4 ಅಂತಸ್ತಿನ ಕಟ್ಟಡ ಕುಸಿತ: 3 ಸಾವು, 12 ಮಂದಿಯ ರಕ್ಷಣೆ

BBC documentary screening: BBC documentary screening at Delhi Jamia University: Two students arrested

Comments are closed.