ಸೋಮವಾರ, ಏಪ್ರಿಲ್ 28, 2025
HomeNationalBIG BREAKING : ಯಾವುದೇ ಕ್ಷಣದಲ್ಲಿ ರಾಜೀನಾಮೆ : ಸಿಎಂ ಉದ್ಬವ್‌ ಠಾಕ್ರೆ

BIG BREAKING : ಯಾವುದೇ ಕ್ಷಣದಲ್ಲಿ ರಾಜೀನಾಮೆ : ಸಿಎಂ ಉದ್ಬವ್‌ ಠಾಕ್ರೆ

- Advertisement -

ಮುಂಬೈ : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೈಡ್ರಾಮಾಕ್ಕೆ ಸಿಎಂ ಉದ್ಬವ್‌ ಠಾಕ್ರೆ (Uddhav Thackeray) ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ನನ್ನ ರಾಜೀನಾಮೆ ರೆಡಿಯಾಗಿದೆ. ನೀವೆಲ್ಲರೂ ಬನ್ನಿ ಒಟ್ಟಿ ರಾಜ್ಯಪಾಲರ ಬಳಿಗೆ ಹೋಗಿ ರಾಜೀನಾಮೆ ನೀಡೋಣಾ. ರಾಜೀನಾಮೆಯ ಕುರಿತು ಈಗಾಗಲೇ ರಾಜ್ಯಪಾಲರ ಜೊತೆಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ ಲೈವ್‌ ನಲ್ಲಿ ಮಾತನಾಡಿದ ಅವರು, ನಿಮ್ಮ ಕಾರ್ಯವೈಖರಿ ಸರಿಯಿಲ್ಲ ಎಂದಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ. ಯಾವೊಬ್ಬ ಶಾಸಕರು ಬಯಸಿದ್ರೂ ರಾಜೀನಾಮೆ ನೀಡಲು ಸಿದ್ದವಾಗಿದ್ದೇನೆ. ರಾಜೀನಾಮೆ ಪತ್ರವನ್ನು ಬರೆದು ಇಟ್ಟಿದ್ದೇನೆ. ನೀವೆಲ್ಲರೂ ಇಲ್ಲಿಗೆ ಬನ್ನಿ ಒಟ್ಟಿಗೆ ತೆರಳಿ ರಾಜೀನಾಮೆ ನೀಡೋಣಾ. ಎಲ್ಲೋ ಕುಳಿತು ಉದ್ಬವ್‌ ಠಾಕ್ರೆ ಸರಿಯಿಲ್ಲ ಎನ್ನೋದನ್ನು ಬಿಟ್ಟು, ಎದುರಲ್ಲಿ ಕುಳಿತು ಸರಿಯಿಲ್ಲ ಎಂದು ಹೇಳಿ. ನಾನು ಯಾವುದೇ ಕ್ಷಣದಲ್ಲಿಯೂ ರಾಜೀನಾಮೆಗೆ ಸಿದ್ದನಾಗಿದ್ದೇನೆ ಎಂದಿದ್ದಾರೆ.

ಶಿಂಧೆ ನನ್ನ ಜೊತೆಯೇ ಚರ್ಚಿಸಬೇಕಿತ್ತು. ಅವರು ಯಾಕೆ ಸೂರತ್‌ಗೆ ಹೋದ್ರು. ನಾನು ಅನಿರೀಕ್ಷಿತವಾಗಿ ಸಿಎಂ ಹುದ್ದೆಗೆ ಬಂದವನು. ನನಗೆ ಹುದ್ದೆ ಮುಖ್ಯವಲ್ಲ, ಬದಲಾಗಿ ಶಿವಸೇನೆ ಸಂಘಟನೆ ಮುಖ್ಯ. ಶಿವಸೇನೆಯ ಒಬ್ಬ ಶಾಸಕರ ಬೇಡ ಎಂದರೂ ರಾಜೀನಾಮೆ ನೀಡುವ ಎಂದಿದ್ದಾರೆ. ಒಂದೆಡೆ ಬಂಡಾಯ ಶಾಸಕರು ರೆಸಾರ್ಟ್‌ ಸೇರಿಕೊಂಡಿದ್ದರೆ, ಇನ್ನೊಂದೆಡೆ ಯಲ್ಲಿ ಸಿಎಂ ಉದ್ಬವ್‌ ಠಾಕ್ರೆ ರಾಜೀನಾಮೆ ನೀಡುತ್ತೇನೆ ಎನ್ನುವ ಮೂಲಕ ಬಿಗ್‌ ಶಾಕ್‌ ಕೊಟ್ಟಿದ್ದಾರೆ. ಸರಕಾರ ವಿಸರ್ಜಿಸಿ ಠಾಕ್ರೆ ಚುನಾವಣೆಗೆ ಹೋಗವ ಸುಳಿವನ್ನು ಸುದ್ದಿಗೋಷ್ಠಿಯ ಮೂಲಕ ಕೊಟ್ಟಿದ್ದಾರೆ.

ಮಹಾರಾಷ್ಟ್ರದ ಈ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಕಾರಣವಾಗಿದ್ದು, ಅವರು ತಮಗೆ 46 ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ. ಇನ್ನೊಂದೆಡೆ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಏಕನಾಥ್ ಶಿಂಧೆ, ಶಿವಸೇನಾದ 40 ಹಾಗೂ ಪಕ್ಷೇತರ 6 ಒಟ್ಟು 46 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ.

ಸರ್ಕಾರದಿಂದ ಬಂಡಾಯ ಎದ್ದಿರುವ ಶಾಸಕರ ಜೊತೆ ಸಿಎಂ ಉದ್ಧವ್ ಠಾಕ್ರೆ 10 ನಿಮಿಷಗಳ ಕಾಲ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಈ ಪ್ರಯತ್ನ ಸಫಲವಾಗಿರಲಿಲ್ಲ. ಬಳಿಕ ಶಿವಸೇನೆ ಸೇರಿದಂತೆ ಮಹಾರಾಷ್ಟ್ರದ ಬಂಡಾಯ ಶಾಸಕರು ಗುಜರಾತ್ ನ ಸೂರತ್ ನಿಂದ ಆಸ್ಸಾಂನ ಗೌಹಾಟಿಗೆ ಆಗಮಿಸಿದ್ದರು. ಹೀಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಡಾಯ ಎದ್ದಿರೋ ಶಾಸಕರಿಗೆ ಅಸ್ಸಾಂನಲ್ಲಿ ಬಿಜೆಪಿ ನಾಯಕರಿಂದ ಸ್ವಾಗತ ಸಿಕ್ಕಿದ್ದು, ಗೌಹಾಟಿಯ ಐಷಾರಾಮಿ ಹೊಟೇಲ್ ಗಳಲ್ಲಿ 50 ಕ್ಕೂ ಹೆಚ್ಚು ಶಾಸಕರಿಗೆ ವಾಸ್ತವ್ಯ ಕಲ್ಪಿಸಲಾಗಿದೆ.

ಮಾತ್ರವಲ್ಲ ಈ ಬಂಡಾಯದ ಗುಂಪನ್ನು ಇನ್ನಷ್ಟು ಶಿವಸೇನೆಯ ಶಾಸಕರು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಹಾವಿಕಾಸ ಅಘಾಡಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿರೋ ಏಕನಾಥ್ ಶಿಂಧೆ ಈ ಎಲ್ಲ ರಾಜಕೀಯ ಪಲ್ಲಟಗಳಿಗೆ ಕಾರಣವಾಗಿದ್ದಲ್ಲದೇ ತಮ್ಮೊಂದಿಗೆ ಶಾಸಕರನ್ನು ಕರೆದುಕೊಂಡು ಆಸ್ಸಾಂ ನ ಗೌಹಾಟಿಯಲ್ಲಿ ಬೀಡು ಬಿಟ್ಟಿದ್ದಾರೆ .

ಇದನ್ನೂ ಓದಿ : Maharashtra Politics : ಮಹಾ ಸರ್ಕಾರದ ಪತನಕ್ಕೆ ಕರ್ನಾಟಕದ ಮಾಸ್ಟರ್ ಮೈಂಡ್ : ಆಫರೇಶನ್ ಕಮಲದ ಹಿಂದೆ ರಮೇಶ್‌ ಜಾರಕಿಹೊಳಿ ?

ಇದನ್ನೂ ಓದಿ : Ubhav Thackeray Government : ಮಹಾಪತನದತ್ತ ಶಿವಸೇನಾ ಸರ್ಕಾರ : ಬಂಡಾಯ ಸಾರಿದ 50 ಕ್ಕೂ ಅಧಿಕ ಶಾಸಕರು

BIG BREAKING: Uddhav Thackeray said i am ready to Resigns as Maharashtra CM

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular