Dinesh Karthik : 18 ವರ್ಷ 10 ಮಂದಿಯ ನಾಯಕತ್ವದಲ್ಲಿ ಆಡಿದ ದಿನೇಶ್‌ ಕಾರ್ತಿಕ್


ಬೆಂಗಳೂರು : 37ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ಭಾರತ ತಂಡದ ಹೊಸ ಫಿನಿಷರ್ ದಿನೇಶ್ ಕಾರ್ತಿಕ್ (Dinesh Karthik), ತಮ್ಮ 18 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 10 ಮಂದಿಯ ನಾಯಕತ್ವದಲ್ಲಿ (10 Captains Dinesh Karthik) ಆಡಿದ್ದಾರೆ.

ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್”ಮನ್ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದು 2004ರಲ್ಲಿ. ಕ್ರಿಕೆಟ್ ಕಾಶಿ ಲಾರ್ಡ್ಸ್”ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಇಂಟರ್”ನ್ಯಾಷನಲ್ ಕ್ರಿಕೆಟ್”ಗೆ ಡಿಕೆ ಕಾಲಿಟ್ಟಿದ್ದರು. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದವರು ಬಂಗಾಳದ ಹುಲಿ ಸೌರವ್ ಗಂಗೂಲಿ.

2004ರ ನವೆಂಬರ್’ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ದಿನೇಶ್ ಕಾರ್ತಿಕ್ ಟೆಸ್ಟ್ ಕ್ರಿಕೆಟ್”ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಭಾರತ ತಂಡದ ನಾಯಕರಾಗಿದ್ದವರು “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್.

ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ನಂತರ ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ, ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ನಾಯಕತ್ವದಲ್ಲಿ ದಿನೇಶ್ ಕಾರ್ತಿಕ್ ಆಡಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿರುವ ದಿನೇಶ್ ಕಾರ್ತಿಕ್, ಅಲ್ಲಿಗೆ ಒಟ್ಟು 11 ಮಂದಿ ನಾಯಕರ ನಾಯಕತ್ವದಲ್ಲಿ ಆಡಿದಂತಾಗಲಿದೆ.

ದಿನೇಶ್ ಕಾರ್ತಿಕ್ (10 Captains Dinesh Karthik)’ಗೆ ನಾಯಕತ್ವ ವಹಿಸಿದವರು

  1. ಸೌರವ್ ಗಂಗೂಲಿ
  2. ರಾಹುಲ್ ದ್ರಾವಿಡ್
  3. ವೀರೇಂದ್ರ ಸೆಹ್ವಾಗ್
  4. ಅನಿಲ್ ಕುಂಬ್ಳೆ
  5. ಎಂ.ಎಸ್ ಧೋನಿ
  6. ವಿರಾಟ್ ಕೊಹ್ಲಿ
  7. ಸುರೇಶ್ ರೈನಾ
  8. ರೋಹಿತ್ ಶರ್ಮಾ,
  9. ಅಜಿಂಕ್ಯ ರಹಾನೆ
  10. ರಿಷಭ್ ಪಂತ್.

ಭಾರತ ಪರ ಇಲ್ಲಿಯವರೆಗೆ 26 ಟೆಸ್ಟ್ ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, ಒಂದು ಶತಕ ಹಾಗೂ 7 ಅರ್ಧಶತಕಗಳ ಸಹಿತ 1,025 ರನ್ ಗಳಿಸಿದ್ದಾರೆ. 94 ಏಕದಿನ ಪಂದ್ಯಗಳಿಂದ 9 ಅರ್ಧಶತಕಗಳ ಸಹಿತ 1,752 ರನ್ ಕಲೆ ಹಾಕಿದ್ದಾರೆ. ಭಾರತ ಪರ 37 ಟಿ20 ಪಂದ್ಯಗಳನ್ನಾಡಿರುವ ಕಾರ್ತಿಕ್ 491 ರನ್ ಗಳಿಸಿದ್ದಾರೆ.

ಇದನ್ನೂ ಓದಿ : BCCI warnings : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ವಾರ್ನಿಂಗ್‌

ಇದನ್ನೂ ಓದಿ : Karnataka cricket team : ಕರ್ನಾಟಕ ಕ್ರಿಕೆಟನ್ನು ಹಳ್ಳ ಹಿಡಿಸಿದ್ದು ಇದೇ ವ್ಯಕ್ತಿನಾ ?

18 years..10 Captains Dinesh Karthik Played in 10 Captains

Comments are closed.