big news : ದೇಶದ ಜನತೆಗೆ ಬಿಗ್​ ಶಾಕ್​ : ಶೀಘ್ರದಲ್ಲೇ ಏರಲಿದೆ ವಿದ್ಯುತ್​ ದರ

ದೆಹಲಿ : big news : ದೇಶದಲ್ಲಿ ದಿನಬಳಕೆಯ ವಸ್ತುಗಳ ದರವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್​ – ಡೀಸೆಲ್​ ದರ ಏರಿಕೆ, ಹಣ್ಣು – ತರಕಾರಿಗಳ ಬೆಲೆ ಏರಿಕೆ, ಗೃಹೋಪಯೋಗಿ ವಸ್ತುಗಳ ದರ ಏರಿಕೆ , ಹಾಲು ಉತ್ಪನ್ನಗಳು ಹೀಗೆ ಪ್ರತಿಯೊಂದರ ದರ ಏರಿಕೆಯಿಂದಾಗಿ ಶ್ರೀ ಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದಾಗಿ ಕಂಗೆಟ್ಟಿರುವ ಜನಸಾಮಾನ್ಯನಿಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಶಾಕ್​ ನೀಡಲು ಮುಂದಾಗಿದೆ.ಹೌದು..! ಶೀಘ್ರದಲ್ಲಿಯೇ ದೇಶದ ಜನತೆ ಕರೆಂಟ್​ಗೆ ಹೆಚ್ಚಿನ ದರ ಪಾವತಿ ಮಾಡಬೇಕು.

ದೇಶದಲ್ಲಿ ವಿದ್ಯುತ್​ ದರ ಹೆಚ್ಚಳ ಮಾಡಲು ಕಾರಣ ಕಲ್ಲಿದ್ದಲಿನ ಆಮದು. ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರವು ಸರಿ ಸುಮಾರು 76 ಮಿಲಿಯನ್​ ಟನ್​ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ಯೋಜನೆಯಲ್ಲಿದೆ. ಆದರೆ ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ದರ ಹೆಚ್ಚಿರುವ ಕಾರಣ ದೇಶದಲ್ಲಿ ವಿದ್ಯುತ್​ ದರ ಏರಿಕೆಯಾಗುವುದು ಪಕ್ಕಾ ಎನ್ನಲಾಗಿದೆ . ಅದರಲ್ಲೂ ಯಾವ ರಾಜ್ಯಗಳು ಬಂದರಿನ ಪ್ರದೇಶದಿಂದ ಹೆಚ್ಚು ದೂರದಲ್ಲಿ ಇವೆಯೋ ಅಂತಹ ರಾಜ್ಯಗಳ ಜನತೆಗೆ ಕರೆಂಟ್​ ದರ ಮತ್ತಷ್ಟು ಬರೆ ಎಳೆಯಲಿದೆ. ಉನ್ನತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಪ್ರತಿ ಯುನಿಟ್​ 80 ಪೈಸೆಯಷ್ಟು ದರ ಏರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


ದೇಶದ ಅತೀದೊಡ್ಡ ವಿದ್ಯುತ್​ ಉತ್ಪಾದಕ ಸಂಸ್ಥೆಗಳಾದ NTPC ಲಿಮಿಟೆಡ್ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ (DVC) ಸರಿ ಸುಮಾರು 23 ಟನ್​ಗಳಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತವೆ. ಕೋಲ್​ ಇಂಡಿಯಾ ಲಿಮಿಟೆಡ್​​ ವಿದ್ಯುತ್​ ಉತ್ಪಾದನೆಗಾಗಿ 15 ಮಿಲಿಯನ್​ ಟನ್​ ಕಲ್ಲಿದ್ದಲಿನ ಆಮದನ್ನು ಪಡೆಯುತ್ತದೆ. ರಾಜ್ಯದ ವಿದ್ಯುತ್​ ಉತ್ಪಾದನಾ ಕಂಪನಿ ಜೆನ್​ಕೋಸ್​ ಹಾಗೂ ಸ್ವತಂತ್ರ ವಿದ್ಯುತ್​ ಉತ್ಪಾದಕರು 39 ಮಿಲಿಯನ್​ ಟನ್ಗಳಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ತಾರೆ. ಈ ಎಲ್ಲಾ ಕಲ್ಲಿದ್ದಲಿನ ಆಮದಿನಿಂದಾಗಿ ವಿದ್ಯುತ್​ ಕಂಪನಿಗಳ ಮೇಲೆ ಆರ್ಥಿಕ ಹೊರೆ ಅಧಿಕಗೊಳ್ಳುವ ಹಿನ್ನೆಲೆಯಲ್ಲಿ ದೇಶದ ಜನತೆಗೆ ವಿದ್ಯುತ್​ಗೆ ಹೆಚ್ಚಿನ ದರ ಪಾವತಿ ಮಾಡಬೇಕಾಗಿ ಬರಲಿದೆ.


ದೇಶದಲ್ಲಿ ವಿದ್ಯುತ್​​ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜೂನ್​ 9ರಂದು ವಿದ್ಯುತ್​ ಬೇಡಿಕೆ ಬರೋಬ್ಬರಿ 211 GW ಆಗಿತ್ತು. ಆದರೆ ಈಗೀಗ ಈ ಬೇಡಿಕೆಯು ಕೊಂಚ ತಗ್ಗಿದ್ದು ಜುಲೈ 20ರಂದು ವಿದ್ಯುತ್​ ಬೇಡಿಕೆಯು 185. 65GW ಆಗಿದೆ. ಆಗಸ್ಟ್ – ಸೆಪ್ಟೆಂಬರ್​ ತಿಂಗಳಿನಿಂದ ವಿದ್ಯುತ್​ ಬಿಲ್​ಗಳಲ್ಲಿ ಏರಿಕೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನು ಓದಿ : Anganwadi workers : ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಗೆ ಕರೆನ್ಸಿ ಇಲ್ಲ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಜವಾಬ್ದಾರಿಯಿಲ್ಲ

ಇದನ್ನೂ ಓದಿ : KL Rahul Health Report : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ ರಾಹುಲ್ ?

big news electricity price hiked by 80 paise by central government

Comments are closed.