ಬಿಹಾರ: Bihar student sanitary pad : ಕೆಲವು ದಿನಗಳ ಹಿಂದೆಯಷ್ಟೇ ಉಚಿತ ಸ್ಯಾನಿಟರಿ ಪ್ಯಾಡ್ಗಳನ್ನು ಕೇಳಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕಾಂಡೋಮ್ ಉಚಿತವಾಗಿ ಬೇಕೆ ಎಂದು ಕೇಳಿ ಮಹಿಳಾ ಅಧಿಕಾರಿಯೊಬ್ಬರು ವ್ಯಾಪಕ ವಿರೋಧವನ್ನು ಎದುರಿಸಿದ್ದು ನೆನಪಿದ್ದಿರಬಹುದು. ಈ ರೀತಿ ಸಭೆಯಲ್ಲಿ ಅಧಿಕಾರಿಯ ಬಳಿ ಉಚಿತ ಸ್ಯಾನಿಟರಿ ಪ್ಯಾಡ್ ಕೇಳಿ ಅವಮಾನಕ್ಕೊಳಗಾಗಿದ್ದ 20 ವರ್ಷದ ವಿದ್ಯಾರ್ಥಿನಿ ರಿಯಾ ಕುಮಾರಿ ಇನ್ಮುಂದೆ ಒಂದು ವರ್ಷಗಳ ಕಾಲ ಉಚಿತ ಸ್ಯಾನಿಟರಿ ಪ್ಯಾಡ್ನ್ನು ಪಡೆಯುವುದು ಮಾತ್ರವಲ್ಲದೇ ತನ್ನ ಶಿಕ್ಷಣಕ್ಕಾಗಿ ಧನಸಹಾಯವನ್ನೂ ಪಡೆಯಲಿದ್ದಾಳೆ.
ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ತ್ರೀಲಿಂಗ ನೈರ್ಮಲ್ಯ ಸಂಸ್ಥೆಯು ಶುಕ್ರವಾರದಂದು ರಿಯಾ ಕುಮಾರಿ ಪದವಿ ಶಿಕ್ಷಣ ಪೂರೈಸಲು ಧನಸಹಾಯ ಮಾಡುವುದಾಗಿ ಹೇಳಿದೆ. ಪ್ರಸ್ತುತ ರಿಯಾ ಕುಮಾರಿ ವೈಶಾಲಿಯ ಹಾಜಿಪುರದ ರಾಮ್ ವಿಲಾಸ್ ರಾಯ್ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡ್ತಿದ್ದಾರೆ. ಇದರ ಜೊತೆಯಲ್ಲಿ ಒಂದು ವರ್ಷಗಳ ಕಾಲ ರಿಯಾ ಕುಮಾರಿಗೆ ಎವರ್ಟೀಸ್ ಕಂಪನಿಯಿಂದ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ ಆಗಲಿದೆ.
ಸೆಪ್ಟೆಂಬರ್ 27ರಂದು ಪಾಟ್ನಾದಲ್ಲಿ ನಡೆದಿದ್ದ ಕಾರ್ಯಾಗಾರದಲ್ಲಿ ಬಿಹಾರದ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಬಳಿ ರಿಯಾ ಕುಮಾರಿ ಉಚಿತ ಸ್ಯಾನಿಟರಿ ಪ್ಯಾಡ್ಗಳನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ.ಇದಕ್ಕೆ ಕಟುವಾಗಿ ಉತ್ತರಿಸಿದ ಹರ್ಜೋತ್ ಕೌರ್ ಇಂದು ಉಚಿತ ಸ್ಯಾನಿಟರಿ ಪ್ಯಾಡ್ ಕೇಳುತ್ತೀರಿ ಮುಂದಿನ ದಿನಗಳಲ್ಲಿ ಉಚಿತ ಕಾಂಡೋಮ್ ಕೂಡ ಕೇಳುತ್ತೀರಿ ಎಂದು ನಿಂದಿಸಿದ್ದರು.
ನಾಳೆ ನೀವು ಸರ್ಕಾರದ ಬಳಿ ಜೀನ್ಸ್ ಸ್ವಲ್ಪ ದಿನದ ಬಳಿಕ ಸುಂದರವಾದ ಜೀನ್ಸ್ ಉಚಿತವಾಗಿ ನೀಡುವಂತೆ ಸರ್ಕಾರದ ಬಳಿ ಕೇಳುತ್ತೀರಿ. ಇದಾದ ಬಳಿಕ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಉಚಿತ ಕಾಂಡೋಮ್ ನೀಡಿ ಅಂತಲೂ ಸರ್ಕಾರವನ್ನೇ ಕೇಳುತ್ತೀರಿ. ಎಂದು ಕಿಡಿಕಾರಿದ್ದರು. ಮಹಿಳಾ ಅಧಿಕಾರಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಗುರುವಾರದಂದು ಕ್ಷಮೆಯಾಚಿಸಿದ್ದರು.
ಇದನ್ನು ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್
ಇದನ್ನೂ ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ
Bihar student who raised sanitary pad question gets sponsor for education, pads