PFI organization:ದಕ್ಷಿಣಕನ್ನಡ ಜಿಲ್ಲೆಯಲ್ಲಿ‌ ನಿಷೇಧಿತ ಪಿಎಫ್ಐ ಸಂಘಟನೆಯ 21 ಕಚೇರಿಗಳು ಸೀಝ್

ಮಂಗಳೂರು :PFI organization : ಪಿಎಫ್ಐ ಸಂಘಟನೆಯ ತರಬೇತಿ ಹಾಗೂ ಮಾಸ್ಟರ್ ಪ್ಲಾನ್ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಫ್ರೀಡಂ ಕಮ್ಯುನಿಟಿ ಹಾಲ್ ಗೆ ಇಂದು‌ ಬೀಗಮುದ್ರೆ ಜಡಿಯಲಾಗಿದೆ. ಈ ಹಾಲ್ ನಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಗಲಭೆಯ ತರಬೇತಿ ನಡೆಯಿತ್ತಿದ್ದ ಬಗ್ಗೆ ಬಂಧಿತ ಪಿಎಫ್ಐ ಕಾರ್ಯಕರ್ತರೇ ಬಾಯಿ ಬಿಟ್ಟಿರೋದ್ರಿಂದ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಬೀಗಮುದ್ರೆ ಹಾಕಲು ಅಧಿಕೃತ ಆದೇಶ ಹೊರಡಿಸಿದ್ದರು. ಹೀಗಾಗಿ ವಿಟ್ಲ ಉಪತಹಶೀಲ್ದಾರ್ ವಿಜಯ್ ವಿಕ್ರಮ್ ಹಾಗೂ ವಿಟ್ಲ ಪೊಲೀಸರು ಇಂದು ಹಾಲ್ ಗೆ ಬೀಗಮುದ್ರೆ ಹಾಕಿದ್ದಾರೆ‌.

ಹಲವು ಹಿಂದೂ ಮುಖಂಡರ ಕೊಲೆ ಸೇರಿದಂತೆ‌ ಕಲ್ಲಡ್ಕ ಗಲಭೆ,ಕೆಜಿ ಹಳ್ಳಿ,ಡಿಜೆ ಹಳ್ಳಿ ಗಲಭೆಗೂ ಇದೇ ಹಾಲ್ ನಲ್ಲಿ ಪ್ಲಾನ್ ಹಾಗೂ ತರಬೇತಿ ನಡೆದಿತ್ತು. ಈ ಹಿನ್ನಲೆಯಲ್ಲಿ ಹಾಲ್ ನ ಟ್ರಸ್ಟಿ ಅಯೂಬ್ ಅಗ್ನಾಡಿಯನ್ನು ಬಂಧಿಸಿ ನಿನ್ನೆ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸಿದ್ದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೇವಲ ಹಾಲ್ ಮಾತ್ರ ಅಲ್ಲದೇ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಾಚರಿಸುತ್ತಿದ್ದ ಒಟ್ಟು 21 ಸ್ಥಳಗಳಿಗೆ ದಾಳಿ ನಡೆಸಿ ಕಚೇರಿ ಮನೆಗಳಲ್ಲಿ ಸಿಕ್ಕ ವಸ್ತುಗಳನ್ನು ವಶಪಡಿಸಿಕೊಂಡು ಸೀಝ್ ಮಾಡಲಾಗಿದೆ.

ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸರಹದ್ದಿನಲ್ಲಿ ಒಟ್ಟು ಒಂಬತ್ತು ಪಿಎಫ್ಐ ಕಚೇರಿಗಳನ್ನು ಸೀಝ್ ಮಾಡಲಾಗಿದೆ. ಇದರಲ್ಲಿ ಎರಡು ಮನೆಯು ಸೇರಿದೆ. ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ 1967(1967ರ 17) ಸೆಕ್ಷನ್ 3(1)ರ ಅಡಿಯಲ್ಲಿ ನಿಷೇಧಿತ ಸಂಘಟನೆಗಳಲ್ಲಿ ತೊಡಗಿಸಿಕೊಂಡವರ ಚಟುವಟಿಕೆಗಳನ್ನು ಮತ್ತು ಅವು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳನ್ನು, ಸಂಘಟನೆಗಳಿಗೆ ಸಂಬಂಧಿಸಿದ ಲೆಕ್ಕ ಪುಸ್ತಕಗಳನ್ನು, ಹಣ ಸಂಗ್ರಹಣೆ ಮಾಹಿತಿಗಳ ಕುರಿತು ಶೋಧಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಕಾಯ್ದೆಯನ್ವಯ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿ ವಸ್ತುಗಳನ್ನು ವಶಪಡಿಸಿ ಕಚೇರಿಗಳನ್ನು ಸೀಝ್ ಮಾಡಲಾಗಿದೆ.

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಜಂಕ್ಷನ್ ನಲ್ಲಿರುವ ಸುಲೈಮಾನ್ ಪ್ಯಾಮಿಲಿ ಕಂಪ್ಲೆಕ್ಸ್ ನ 1ನೇ ಮಹಡಿಯ ನಾಲ್ಕನೆ ಕೊಠಡಿಯಲ್ಲಿರುವ ನಿಷೇಧಿತ ಸಂಘಟನೆ ಫಿಎಫ್ಐ ಕಚೇರಿಯ ಮೇಲೆ ಸೆ.28ರ ರಾತ್ರಿ 10.10ಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ದಾಳಿ ನಡೆಸಿದರು. ಆ ಸಂಧರ್ಭದಲ್ಲಿ ಎಸ್ ಡಿಪಿಐ ಬರಹದ 7 ಬಾವುಟ, ಎಸ್ ಡಿಪಿಐ ಸಂಘಟನೆಗೆ ನೋಂದಣಿ ನಮೂನೆಗಳನ್ನು ಒಳಗೊಂಡ 1 ಪುಸ್ತಕ, 4 ಖಾಲಿ ನೋಟ್ ಬುಕ್, 2 ಮಲಗುವ ಹುಲ್ಲಿನ ಚಾಪೆ, 8 ಪೈಲ್ ರ್ಯಾಪರ್, 7 ಪೈಲ್ ಕವರ್‍ಗಳು, 1 ಪ್ಲಾಸ್ಟ್ಕ್ ಟರ್ಪಾಲ್, 1 ಗೋಡೆ ಗಡಿಯಾರ, 1 ಮೈಕ್, 1 ಎಸ್ ಡಿಪಿಐ ಪಕ್ಷದ ನಾಮಪಲಕ, 2 ಮೇಜು, 25 ಪ್ಲಾಸ್ಟಿಕ್ ಕುರ್ಚಿಗಳು, 1 ಬ್ಲಾಕ್ ಬೋರ್ಡ್, 1 ಚಾಕ್ ಪೀಸ್, 1 ಡಸ್ಟರ್ ಹಾಗೂ 1 ಗೋದ್ರೆಜ್ ಕಪಾಟುಗಳನ್ನು ವಶ ಪಡಿಸಿಕೊಂಡು ಅದೇ ಕೊಠಡಿಯಲ್ಲಿಟ್ಟು, ಬೀಗ ಹಾಕಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸುಪರ್ದಿಗೆ ಒಪ್ಪಿಸಲಾಗಿದೆ.

ಇನ್ನು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿರುವ ಕಚೇರಿ, ಪುತ್ತೂರು ತಾಲೂಕಿನ ಕೆ.ಪಿ ಕಾಂಪ್ಲೆಕ್ಸ್ ನಲ್ಲಿನ ಕಚೇರಿ, ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪರಂಗಿಪೇಟೆಯಲ್ಲಿರುವ ಎಸ್ ಡಿಪಿಐ ಕಚೇರಿ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಜಂಕ್ಷನ್‍ನ ಬದ್ರಿಯ ಕಾಂಪ್ಲೆಕ್ಸ್ ನಲ್ಲಿರುವ ಎಸ್ ಡಿಪಿಐ ಕಚೇರಿ, ಮಂಗಳೂರು ಕಮೀಷನರೇಟ್ ವ್ಯಾಪ್ತಿಯ 12 ಕಚೇರಿ‌ ಸೇರಿದಂತೆ ಒಟ್ಟು 21 ಕಚೇರಿಗಳಿಗೆ ಬೀಗ ಜಡಿಯಲಾಗಿದೆ.

ಇದನ್ನು ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

ಇದನ್ನೂ ಓದಿ : sanitary pad:ಉಚಿತ ಸ್ಯಾನಿಟರಿ ಪ್ಯಾಡ್​ ಕೇಳಿ ಅವಮಾನಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ಇನ್ಮುಂದೆ ಉಚಿತ ಪ್ಯಾಡ್​,ಉಚಿತ ಶಿಕ್ಷಣ

21 offices of banned PFI organization in Dakshina Kannada district are seized

Comments are closed.