ನವದೆಹಲಿ : ರಾಜ್ಯದಲ್ಲಿ ಬಿಟ್ ಕಾಯಿನ್ (Bitcoin ) ಹಗರಣ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ವಿರುದ್ದ ಗಂಭೀರ ಆರೋಪವನ್ನು ಮಾಡುತ್ತಿರುವ ಕಾಂಗ್ರೆಸ್ ಇದೀಗ ಬಿಟ್ ಕಾಯಿನ್ (Bitcoin ) ಪ್ರಕರಣ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅದ್ರಲ್ಲೂ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೇ ಟಾರ್ಗೇಟ್ ಮಾಡಿದೆ. ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ವೇಳೆಯಲ್ಲಿಯೇ ಈ ಹಗರಣ ನಡೆದಿದ್ದು, ಬಹುಕೋಟಿ ಹಗರಣದಲ್ಲಿ ಸರಕಾರವೇ ಭಾಗಿಯಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲ್ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸ್ವತಂತ್ರ ಭಾರತದ ಬಳಿಕದ ಅತಿದೊಡ್ಡ ಹಗರಣ ಇದಾಗಿದೆ. ಕರ್ನಾಟಕ ಸರಕಾರ ಕೂಡ ಈ ಹಗರಣದಲ್ಲಿ ಭಾಗಿಯಾಗಿದೆ. ಈ ಹಗರಣದಲ್ಲಿ ತನಿಖಾ ಸಂಸ್ಥೆಗಳ ದಾರಿಯನ್ನೇ ತಪ್ಪಿಸಲಾಗುತ್ತಿದೆ. ನವೆಂಬರ್ 14 ರಂದು ಹ್ಯಾಕರ್ ಶ್ರೀಕಿ ಬಂಧನವಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಒಂದು ಬಿಟ್ ಕಾಯಿನ್ ವರ್ಗಾವರಣೆಯನ್ನು ಮಾಡಿದ್ದಾನೆ. ಇದುವರೆಗೆ ಒಟ್ಟು 5,240 ಕೋಟಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹಗರಣ ನಡೆದಿದ್ದರೂ ಕೂಡ ಎನ್‌ಐಎ, ಇಡಿ, ಇಂಟರ್ ಪೋಲ್ ಎಲ್ಲವೂ ಸುಮ್ಮನಾಗಿವೆ. ಸರಕಾರ ಈ ಪ್ರಕರಣವನ್ನು ಮುಚ್ಚಿಡುವ ಕಾರ್ಯವನ್ನು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಏಕ್ ಮೌನವಾಗಿದ್ದಾರೆ. ಪ್ರಕರಣದ ಕುರಿತು ಸಿಎಂಗೆ ಪ್ರಧಾನಿ ಯಾಕೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ ಎಂದು ಸುರ್ಜೇವಾಲ್ ಪ್ರಶ್ನಿಸಿದ್ದಾರೆ.
India’s biggest ever “Bitcoin Scam Coverup” under the Karnataka BJP Government!
— Randeep Singh Surjewala (@rssurjewala) November 13, 2021
Intrigue, Whitewash, Concealment, Deception smack of a deep-rooted conspiracy!
Why were Interpol/NIA/ED/SFIO kept in the dark till the very end?
Our Statement-: pic.twitter.com/l9BeIZU436
ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕೀಯದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದ್ರಲ್ಲೂ ಕಾಂಗ್ರೆಸ್, ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಈ ನಡುವಲ್ಲೇ ಕಾಂಗ್ರೆಸ್ ಸಿಎಂ ಬೊಮ್ಮಾಯಿ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ. ಬಿಜೆಪಿ ಅದ್ಯಾವ ರೀತಿಯಲ್ಲಿ ಆರೋಪಗಳಿಗೆ ಉತ್ತರ ನೀಡುತ್ತೆ ಅನ್ನೋದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ : ಬಿಟ್‌ಕಾಯಿನ್ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ
ಇದನ್ನ ಓದಿ : Bitcoin ಕೇಸಲ್ಲಿ ಬಿಜೆಪಿ ನಾಯಕರ ವಿರುದ್ದ ಮುನಿಸು : ಮೋದಿ, ಅಮಿತ್ ಶಾಗೆ ದೂರು ಕೊಟ್ಟ ಸಿಎಂ ಬೊಮ್ಮಾಯಿ
(Bitcoin case congress Randeep singh Surjewala Pressmeet Aligation Against CM Basavaraj Bommai )