LUNAR ECLIPSE : ನ.19 ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ : 600 ವರ್ಷಗಳ ಬಳಿಕ ಸುದೀರ್ಘ ಗ್ರಹಣ

ನವದೆಹಲಿ : ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 19 ರಂದು ಸಂಭವಿಸಲಿದೆ. ಸುಮಾರು 600 ವರ್ಷಗಳ ಬಳಿಕ ಸಂಭವಿಸಲಿರುವ ಸುದೀರ್ಘ ಚಂದ್ರಗ್ರಹಣ (LUNAR ECLIPSE)ಇದಾಗಲಿದೆ. ಅಲ್ಲದೇ ಇದೇ ವರ್ಷದಲ್ಲಿ ಸಂಭವಿಸುತ್ತಿರುವ ಎರಡನೇ ಚಂದ್ರ ಗ್ರಹಣವೂ ಹೌದು. ಗ್ರಹಣ ಈ ಬಾರಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಗೋಚರಿಸಲಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಚಂದ್ರಗ್ರಹಣವು ಶುಕ್ರವಾರ ಬೆಳಗ್ಗೆ11:34ಕ್ಕೆ ಆರಂಭಗೊಂಡು, ಸಂಜೆ 05:33 ಕ್ಕೆ ಕೊನೆಗೊಳ್ಳಲಿದೆ. ಭಾರತ ಮಾತ್ರವಲ್ಲದೇ ಏಷ್ಯಾ, ಆಸ್ಟ್ರೇಲಿಯಾ, ಪಶ್ಚಿಮ ಅಮೇರಿಕಾ, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಪಶ್ಚಿಮ ಏಷ್ಯಾ, ಪೆಸಿಫಿಕ್‌ ಸಾಗರ ಹಾಗೂ ಅಟ್ಲಾಂಟಿಕ್‌ ಸಾಗರವನ್ನು ಒಳಗೊಂಡಿರುವ ಪ್ರದೇಶಗಳಲ್ಲಿ ಈ ಗ್ರಹಣವು ಗೋಚರಿಸಲಿದೆ. ಇನ್ನು ಭಾರತದ ಅರುಣಾಚಲ ಪ್ರದೇಶ, ಅಸ್ಸಾಂ ರಾಜ್ಯಗಳಲ್ಲಿ ಗ್ರಹಣ ಗೋಚರಿಸಲಿದೆ.

ಸುಮಾರು 600 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಸುದೀರ್ಘ ಅವಧಿಯ ಚಂದ್ರಗ್ರಹಣ ಇದಾಗಲಿದೆ, ಅದ್ರಲ್ಲೂ ಈ ಬಾರಿ ಗ್ರಹಣ ಹುಣ್ಣಿಮೆಯ ದಿನವೇ ಗೋಚರ ವಾಗುತ್ತಿರುವುದು ಮತ್ತೊಂದು ವಿಶೇಷ. ಕಳೆದ ಮೇ 26ರಂದು ಸೂಪರ್‌ ಫ್ಲವರ್‌ ಬ್ಲಡ್‌ ಮೂನ್‌ ಚಂದ್ರಗ್ರಹಣ ಗೋಚರಿಸಿತ್ತು. ಇದರ ಬೆನ್ನಲ್ಲೇ ಈ ವರ್ಷದಲ್ಲಿ ಎರಡನೇ ಬಾರಿಗೆ ಗ್ರಹಣ ಎದುರಾಗಿದೆ. ಇನ್ನು ನಾಸಾ ಹೇಳಿರುವ ಪ್ರಕಾರ ನವೆಂಬರ್ 18 ಮತ್ತು 19 ರಂದು ರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸಸಲಿದೆ. ಮುಂದಿನ ಬಾರಿ ಈ ಗ್ರಹಣ ಫೆಬ್ರವರಿ 8, 2669 ರಂದು ಇದನ್ನುಸಂಭವಿಸಲಿದೆ ಎಂದಿದೆ.

ಇದನ್ನೂ ಓದಿ : Bitcoin : ಬಿಟ್‌ಕಾಯಿನ್‌ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ

ಇದನ್ನೂ ಓದಿ :  ಹರ್‌ ಘರ್‌ ದಸ್ತಕ್‌ ಅಭಿಯಾನ ಕೈಗೊಂಡ ಆರೋಗ್ಯ ಇಲಾಖೆ

( The last eclipse of the year for November 19, The longest Lunar Eclipse after 600 years )

Comments are closed.