ದೆಹಲಿ: Mulayam Singh Yadav dies : ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಇಂದು ಬೆಳಗ್ಗೆ 8:30ರ ಸುಮಾರಿಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆ.22ರಂದು ಅನಾರೋಗ್ಯದ ಕಾರಣದಿಂದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದ ಮುಲಾಯಂ ಸಿಂಗ್ ಯಾದವ್ ಅಕ್ಟೋಬರ್ 1ರ ರಾತ್ರಿ ಐಸಿಯುವಿಗೆ ಸ್ಥಳಾಂತರಿಸಲಾಗಿತ್ತು. ಮೇದಾಂತ ಆಸ್ಪತ್ರೆಯ ನುರಿತ ವೈದ್ಯರು ಮುಲಾಯಂ ಸಿಂಗ್ ಯಾದವ್ರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು.
ಸಮಾಜವಾದಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮುಲಾಯಂ ಸಿಂಗ್ ಯಾದವ್ರ ಪುತ್ರ ಅಖಿಲೇಶ್ ಯಾದವರ್ರ ಹೇಳಿಕೆಯನ್ನು ಶೇರ್ ಮಾಡಲಾಗಿದೆ. ‘ನನ್ನ ಗೌರವಾನ್ವಿತ ತಂದೆ ಹಾಗೂ ಪ್ರತಿಯೊಬ್ಬರ ಪಾಲಿನ ನಾಯಕ ಇನ್ನಿಲ್ಲ. – ಅಖಿಲೇಶ್ ಯಾದವ್ ’ ಹೇಳಿಕೆಯನ್ನು ಶೇರ್ ಮಾಡಲಾಗಿದೆ. ಸಮಾಜವಾದಿ ಪಕ್ಷವು ಮುಲಾಯಂ ಸಿಂಗ್ ಯಾದವ್ರ ಆರೋಗ್ಯ ಚಿಂತಾಜನಕವಾಗಿದೆ ಎಂದು ಭಾನುವಾರ ಮಾಹಿತಿಯನ್ನು ನೀಡಿತ್ತು. ಅಲ್ಲದೇ ಅವರು ಲೈವ್ ಸೇವಿಂಗ್ ಡ್ರಗ್ಸ್ ಮೇಲಿದ್ದಾರೆ ಎಂದೂ ಹೇಳಿತ್ತು.
ನೇತಾಜಿ ಎಂದು ಕರೆಯಲ್ಪಡುತ್ತಿದ್ದ ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಎಂಬ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಪ್ರಸ್ತುತ ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಮೈನ್ಪುರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷದ ಜುಲೈ ತಿಂಗಳಲ್ಲಿ ಮುಲಾಯಂ ಸಿಂಗ್ ಯಾದವ್ ಪತ್ನಿ ಸಾಧನಾ ಗುಪ್ತಾ ನಿಧನರಾಗಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಾಧನಾ ಗುಪ್ತಾ ಮುಲಾಯಂ ಸಿಂಗ್ ಯಾದವ್ರ ಎರಡನೇ ಪತ್ನಿಯಾಗಿದ್ದರು. ಇವರ ಮೊದಲ ಪತ್ನಿ ಮಾಲತಿ ದೇವಿ 2003ರಲ್ಲಿ ನಿಧನರಾಗಿದ್ದರು. ಅಖಿಲೇಶ್ ಯಾದವ್ ಮುಲಾಯಂ ಸಿಂಗ್ ಯಾದವ್ರ ಮೊದಲ ಪತ್ನಿ ಮಾಲತಿ ದೇವಿಯ ಪುತ್ರನಾಗಿದ್ದಾರೆ.
ನವೆಂಬರ್ 22, 1939 ರಂದು ಜನಿಸಿದ ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಅವರು ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿ : Road Accident : ಸಂಕೇಶ್ವರದಲ್ಲಿ ಸರಣಿ ಅಪಘಾತ; ತಾಯಿ, ಮಗು ಸಾವು, ಹಲವರಿಗೆ ಗಾಯ
ಇದನ್ನೂ ಓದಿ : Prithvi Shaw: “ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡ್ಬೇಕು ಹೇಳಿ..” ಬಿಸಿಸಿಐ ವಿರುದ್ಧ ಪೃಥ್ವಿ ಶಾ ಆಕ್ರೋಶ ಸ್ಫೋಟ
BREAKING: SP supremo Mulayam Singh Yadav dies at 82