Bulls Beat Paltan : ಪುಣೇರಿ ಪಲ್ಟನ್ ವಿರುದ್ಧ ಸೋಲಿನಿಂದ ಬೆಂಗಳೂರು ಬುಲ್ಸ್ ಗ್ರೇಟ್ ಎಸ್ಕೇಪ್

ಬೆಂಗಳೂರು: (Bulls Beat Paltan)ಆತಿಥೇಯ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಭಾನುವಾರ ತನ್ನ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ತಂಡ ಪುಣೇರಿ ಪಲ್ಟನ್ ತಂಡವನ್ನು 41-39 ಅಂತರದಿಂದ ರೋಚಕವಾಗಿ ಮಣಿಸಿತು.

ಭರ್ಜರಿಯಾಗಿಯೇ ಆಟ ಆರಂಭಿಸಿದ ಬೆಂಗಳೂರು ಬುಲ್ಸ್ (Bengaluru Bulls)ಮೊದಲಾರ್ಧದಲ್ಲಿ 28-14ರಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. ಪುಟಿದೆದ್ದು ನಿಂತ ಪುಣೇರಿ ಪಲ್ಟನ್ ರೇಡರ್’ಗಳು ಬುಲ್ಸ್ ಕೋಟೆಯೊಳಗೆ ನುಗ್ಗಿ ಸತತವಾಗಿ ಅಂಕ ಗಳಿಸುತ್ತಾ ಸಾಗಿದರು. 2ನೇ ಅವಧಿಯಲ್ಲಿ ಪಲ್ಟನ್ 25 ಅಂಕ ಕಲೆ ಹಾಕಿ ಪಂದ್ಯಕ್ಕೆ ರೋಚಕ ಸ್ಪರ್ಶ ನೀಡಿತು. ಈ 25 ಅಂಕಗಳಲ್ಲಿ 13 ಅಂಕಗಳು ರೇಡ್ ಮೂಲಕವೇ ಬಂದವು. ಪ್ರಥಮಾರ್ಧದಲ್ಲಿ 28 ಅಂಕ ಗಳಿಸಿದ್ದ ಬೆಂಗಳೂರು ಬುಲ್ಸ್ ದ್ವಿತೀಯಾರ್ಧದಲ್ಲಿ ಕೇವಲ 13 ಅಂಕ ಸಂಪಾದಿಸಿತು. ಅಂತಿಮವಾಗಿ ಪುಣೇರಿ ಪಲ್ಟನ್’ನ ಹೋರಾಟವನ್ನು 41-39ರಲ್ಲಿ ಮೆಟ್ಟಿ ನಿಂತ ಆತಿಥೇಯ ತಂಡ ಲೀಗ್’ನಲ್ಲಿ ಸತತ 2ನೇ ಗೆಲುವು ತನ್ನದಾಗಿಸಿಕೊಂಡಿತು.

ಬೆಂಗಳೂರು ಬುಲ್ಸ್’ (Bengaluru Bulls)ನ ಪ್ರಮುಖ ರೇಡರ್ ವಿಕಾಸ್ ಖಂಡೋಲ 11 ಅಂಕಗಳನ್ನು ಗಳಿಸಿದರೆ, ಭರತ್ 12 ಅಂಕ ಗಳಿಸಿ ಬುಲ್ಸ್ ಗೆಲುವಿಗೆ ಕಾರಣರಾದರು. (Bulls Beat Paltan)ಪುಣೇರಿ ಪಲ್ಟನ್ ಪರವಾಗಿ ಅಸ್ಲಾಂ ಇನಾಮ್ದಾರ್ 12 ರೇಡ್ ಪಾಯಿಂಟ್ಸ್ ಸಂಪಾದಿಸಿದರು. ಮತ್ತೊಬ್ಬ ಯುವ ರೇಡರ್ ಮೋಹಿತ್ ಗೊಯಾಟ್ 11 ಪಾಯಿಂಟ್ಸ್ ಕಲೆ ಹಾಕಿದರು.

ಇದನ್ನೂ ಓದಿ : Pawan Sehrawat Injured : ಪ್ರೊ ಕಬಡ್ಡಿ ಲೀಗ್: ಮಾಜಿ “ಗೂಳಿ” ಪವನ್ ಸೆಹ್ರಾವತ್‌ಗೆ “ಪ್ರಥಮ ಚುಂಬನಂ ದಂತಭಗ್ನಂ

ಇದನ್ನೂ ಓದಿ : Pro Kabaddi League : ಪ್ರೊ ಕಬಡ್ಡಿ ಲೀಗ್‌ನ ಮೊದಲ ದಿನ ಇರಾನ್ ಆಟಗಾರರು ಕಾಣಲಿಲ್ಲವೇಕೆ..? ಇಲ್ಲಿದೆ ಅಸಲಿ ಗುಟ್ಟು

ಇದನ್ನೂ ಓದಿ : Pro Kabaddi League 2022 : ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ತವರು ನೆಲದಲ್ಲಿ ಎಷ್ಟು ಪಂದ್ಯಗಳು?.. ಇಲ್ಲಿದೆ “ಕೆಂಪು ಗೂಳಿ”ಗಳ ಕಂಪ್ಲೀಟ್ ಮ್ಯಾಚ್ ಶೆಡ್ಯೂಲ್

ಇದನ್ನೂ ಓದಿ : PLK 2022 Bengaluru Bulls : “ಗೂಳಿ” ಇಲ್ಲದೆ ಮೊದಲ ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್

ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ 20 ಅಂಕಗಳ (45-25) ಭರ್ಜರಿ ಗೆಲುವು ದಾಖಲಿಸಿದ ಬೆಂಗಾಲ್ ವಾರಿಯರ್ಸ್ ಲೀಗ್’ನಲ್ಲಿ ಶುಭಾರಂಭ ಮಾಡಿದ್ರೆ, ಪಾಟ್ನಾ ಪೈರೇಟ್ಸ್ ತಂಡವನ್ನು 35-30 ಅಂಕಗಳಿಂದ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರಸಕ್ತ ಲೀಗ್’ನಲ್ಲಿ ಮೊದಲ ಗೆಲುವು ಕಂಡಿತು.

Bangalore Bulls great escape from defeat against Puneri Paltan

Comments are closed.