ಮಂಗಳವಾರ, ಏಪ್ರಿಲ್ 29, 2025
HomeCrimeತಾಳಿಕಟ್ಟುವ ವೇಳೆಯಲ್ಲಿ ವಧುವಿಗೆ ಹೃದಯಾಘಾತ : ಮಂಟಪದಲ್ಲಿ ಕುಸಿದು ಬಿದ್ದು ಸಾವು

ತಾಳಿಕಟ್ಟುವ ವೇಳೆಯಲ್ಲಿ ವಧುವಿಗೆ ಹೃದಯಾಘಾತ : ಮಂಟಪದಲ್ಲಿ ಕುಸಿದು ಬಿದ್ದು ಸಾವು

- Advertisement -

ಲಕ್ನೋ: (Bride Collapses On Stage Dies) ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ವರ ಕೈಯಲ್ಲಿ ತಾಳಿ ಹಿಡಿದು ಕಟ್ಟುವುದಕ್ಕೆ ಸಿದ್ದನಾಗಿದ್ದ, ಇನ್ನೇನು ಹಾರವಿನಿಮಯ ಮಾಡಿಕೊಂಡು ತಾಳಿಕಟ್ಟಬೇಕು ಅನ್ನುವಷ್ಟರಲ್ಲೇ ವಧು ಮಂಟಪದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಪ್ರಾಥಮಿಕ ವರದಿಯ ಪ್ರಕಾರ ವಧು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದರು ತಿಳಿಸಿದ್ದಾರೆ.

ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ ಭದ್ವಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಂಗಿ ಶರ್ಮಾ ( 21 ವರ್ಷ ) ಎಂಬಾಕೆಯೇ ಸಾವನ್ನಪ್ಪಿದ ದುರ್ದೈವಿ. ರಾಜ್‌ಪಾಲ್ ಎಂಬವರ ಮಗಳು 21 ವರ್ಷದ ಶಿವಂಗಿ ಶರ್ಮಾ ಅವರ ವಿವಾಹ ನಿಗದಿಯಾಗಿತ್ತು. ವರ ಕಡೆಯವರು ತಡರಾತ್ರಿಯೇ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಸಂಬಂಧಿಕರು ಮದುವೆಗಾಗಿ ಆಗಮಿಸಿದ್ದು, ಎಲ್ಲೆಲ್ಲೂ ಮದುವೆಯ ಸಂಭ್ರಮ ಮನೆ ಮಾಡಿರುವ ಹೊತ್ತಲೇ ವಧು ಶಿವಂಗಿ ಶರ್ಮಾ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ಇದರಿಂದಾಗಿ ನೆರೆದವರು ಅರೆಕ್ಷಣ ಆತಂಕಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಆಕೆ ಸಾವನ್ನಪ್ಪಿರುವ ಕುರಿತು ಖಚಿತ ಪಡಿಸಿದ್ದಾರೆ.

ಶಿವಾಂಗಿ ಶರ್ಮಾ ಕಳೆದ 15-20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಕೆಗೆ ಜ್ವರ ಬಾಧಿಸಿತ್ತು. ಅಲ್ಲದೇ ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಮದುವೆಗೆ ಒಂದು ವಾರದ ಮೊದಲು ಆಕೆ ಚೇತರಿಸಿಕೊಂಡಿದ್ದಳು. ಆಕೆಗೆ ಮಲಿಹಾಬಾದ್ ಸಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ರಕ್ತದೊತ್ತಡ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಔಷಧಿ ಕೊಟ್ಟು ಬಿಪಿ ನಾರ್ಮಲ್ ಆದಾಗ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮದುವೆ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ವಧುವಿನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದರು. ಆದರೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ವಧು ಮತ್ತು ವರನ ಎರಡೂ ಕುಟುಂಬಗಳು ಪ್ರಕರಣದಲ್ಲಿ ಯಾವುದೇ ರೀತಿಯ ವಿಚಾರಣೆಯನ್ನು ಬಯಸಲಿಲ್ಲ. ಘಟನೆಯ ಕುರಿತು ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದಿದ್ದು, ನಂತರ ಪೊಲೀಸ್ ತಂಡವನ್ನು ಭಡ್ವಾನಾ ಗ್ರಾಮಕ್ಕೆ ವಿಚಾರಣೆಗೆ ಕಳುಹಿಸಲಾಗಿದೆ ಎಂದು ಮಲಿಹಾಬಾದ್ ಎಸ್‌ಎಚ್‌ಒ ಸುಭಾಸ್ ಚಂದ್ರ ಸರೋಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Old lady murder: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ

ಇದನ್ನೂ ಓದಿ : Murder mystery: ಸೊಸೆಯ ಮೇಲೆ ಕಣ್ಣು ಹಾಕಿದ್ದ ಮಾವ ಹೆಣವಾದ; ಸುಪಾರಿ ಕೊಟ್ಟು ಬೀಗರಿಂದಲೇ ಮರ್ಡರ್..!

Bride Collapses On Stage Dies at Lucknow

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular