ಭಾನುವಾರ, ಏಪ್ರಿಲ್ 27, 2025
HomeNationalBudget 2022 TDS : ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ತೆರಿಗೆ...

Budget 2022 TDS : ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ತೆರಿಗೆ ವಿನಾಯಿತಿ ಕೊಟ್ಟ ಕೇಂದ್ರ

- Advertisement -

ನವದೆಹಲಿ : ಕೇಂದ್ರ ಸರಕಾರದ ಮಹತ್ವದ ಬಜೆಟ್‌ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಅದ್ರಲ್ಲೂ ಕೇಂದ್ರ, ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತ (Budget 2022 TDS) ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ನೌಕರರಿಗೆ ತೆರಿಗೆ ರಿಲೀಫ್‌ ಸಿಕ್ಕಂತಾಗಿದೆ.

ಕೇಂದ್ರ ಬಜೆಟ್‌ ಮಂಡನೆಯ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿ 10% ರಿಂದ 14% ಹೆಚ್ಚಳವಾಗಲಿದೆ. ಇದರಿಂದಾಗಿ ನೌಕಆದ್ರೆ ಆದಾಯ ತೆರಿಗೆ ವಿಚಾರದಲ್ಲಿ ಉದ್ಯೋಗಿಗಳಿಗೆ ಸ್ವಲ್ಪಮಟ್ಟಿನ ರಿಲ್ಯಾಕ್ಸ್‌ ನೀಡಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಪಿಂಚಣಿ ನಿಧಿಗಾಗಿ ಪಾವತಿಸುತ್ತಿದ್ದ ಮೊತ್ತದಲ್ಲಿ ಸಿಗುತ್ತಿದ್ದ ತೆರಿಗೆ ವಿನಾಯ್ತಿಯ ಮಿತಿಯನ್ನು ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಕೇಂದ್ರ ಸರ್ಕಾರಿ ಮಾಡುವ ಹೂಡಿಕೆಗೆ ಈವರೆಗೆ ಶೇ 18ರಷ್ಟು ತೆರಿಗೆ ವಿನಾಯ್ತಿ ಸಿಗುತ್ತಿತ್ತು. ಈ ಮೊತ್ತವನ್ನು ಇದೀಗ ಶೇ 15ಕ್ಕೆ ಇಳಿಸಲಾಗಿದೆ.

ಆದರೆ ಆದಾಯ ತೆರಿಗೆ ವಿಚಾರದಲ್ಲಿ ಕೇಂದ್ರ ಸರಕಾರ ಯಾವುದೇ ಬದಲಾವಣೆಯನ್ನೇ ಮಾಡಿಲ್ಲ. ಅದ್ರಲ್ಲೂ ಆದಾಯ ತೆರಿಗೆಯ ವಿನಾಯಿತಿಯ ಮೂಲ ಮಿತಿಯನ್ನು ವಾರ್ಷಿಕ 2.5 ಲಕ್ಷ ರೂ. ದಿಂದ 3 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆಯಲ್ಲಿದ್ದ ವೇತನದಾರರಿಗೆ ನಿರಾಸೆಯಾಗಿದೆ. 2.5 ಲಕ್ಷದವರೆಗಿನ ಆದಾಯ ಹೊಸ ಹಾಗೂ ಹಳೆಯ ಪದ್ದತಿಗಳಲ್ಲಿ ಸಂಪೂರ್ಣ ವಿನಾಯಿತಿ ಇದೆ. ಅಲ್ಲದೇ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಎರಡೂ ಪದ್ಧತಿಗಳಲ್ಲಿ ಶೇ 5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. 5 ಲಕ್ಷದಿಂದ 7.5 ಲಕ್ಷದವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಡಿ ಶೇ 20ರಷ್ಟು ಆದಾಯ ತೆರಿಗೆ ವಿಧಿಲಾಗುತ್ತಿದೆ. ಹೊಸ ಪದ್ಧತಿಯಡಿ ಶೇ 10 ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ. 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಡಿ ಶೇ 20 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೊಸ ಪದ್ಧತಿಯಡಿ ಶೇ 15ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ.

ಕೇಂದ್ರ ಸರಕಾರ ತೆರಿಗೆ ಪದ್ಧತಿಯಲ್ಲಿ ಕೆಲ ವಿನಾಯ್ತಿ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ವಿತ್ತ ಸಚಿವರು ತೆರಿಗೆ ಮಂಡನೆ ವೇಳೆಯಲ್ಲಿ ಇಂತಹ ಯಾವುದೇ ಬದಲಾವಣೆಯ ಬಗ್ಗೆ ತಿಳಿಸಿಲ್ಲ. ತೆರಿಗೆಗೆ ಈ ಬಾರಿ ಯಾವುದೇ ಹೊಸ ಸೆಸ್ ಅಥವಾ ಸರ್​ಚಾರ್ಜ್ ಸೇರಿಲ್ಲ ಎನ್ನುವುದು ಸಮಾಧಾನ ತಂದಿದೆ.

ಇದನ್ನೂ ಓದಿ : ಹೆಣ್ಣು ಮಗು ಬೇಕೆಂದು ದೇವರಿಗೆ ಪತ್ರ ಬರೆದ ಭಕ್ತ

ಇದನ್ನೂ ಓದಿ : ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಕಡಿತ : ಎಷ್ಟಾಗುತ್ತೆ ಗೊತ್ತಾ ಎಲ್‌ಪಿಜಿ ದರ

( Budget 2022 TDS: central and state government Employees Tax deduction Limit to be increasing)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular