ಮಾದರಿ ಬಾಡಿಗೆ ಕಾಯ್ದೆ ಜಾರಿಗೆ ಕೇಂದ್ರ ಅಸ್ತು : ಬಾಡಿಗೆದಾರರಿಗೆ, ಮಾಲೀಕರಿಗೂ ಅನುಕೂಲ

ನವದೆಹಲಿ: ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಕಾಯ್ದೆ ರೂಪಿಸಿದೆ. ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾದರಿ‌ ಬಾಡಿಗೆ ಕಾಯ್ದೆ ಜಾರಿಗೆ ತರಲಾಗಿದೆ. ಕಾಯ್ದೆಯಿಂದ ಮಾಲೀಕರಿಗೆ ಹಾಗೂ ಬಾಡಿಗೆದಾರರಿಗೂ ಅನುಕೂಲ ವಾಗಲಿದೆ.

ಹೊಸ ಕಾಯ್ದೆಯ ಪ್ರಕಾರ ಮಾಸಿಕ ಮನೆ ಬಾಡಿಗೆ ಮೊತ್ತದ ಎರಡು ತಿಂಗಳ ಹಣವನ್ನು ಮಾತ್ರವೇ ಭದ್ರತಾ ಠೇವಣಿಯಾಗಿ ಅಡ್ವಾನ್ಸ್ ಪಡೆಯಬಹುದು. ವಾಣಿಜ್ಯ ಕಟ್ಟಡಗಳಿಗೆ ಬಾಡಿಗೆ ಮೊತ್ತದ 6 ತಿಂಗಳ ಹಣ ಮಾತ್ರ ಅಡ್ವಾನ್ಸ್ ಪಡೆಯಲು‌ ಅವಕಾಶ ಕಲ್ಪಿಸಲಾಗಿದೆ.

ಬಾಡಿಗೆ ಪ್ರಾಧಿಕಾರ ರಚನೆ ಮಾಡಲಿದ್ದು, ಮನೆ ಮತ್ತು ವಾಣಿಜ್ಯ ಕಟ್ಟಡ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರ ಎಲ್ಲಾ ವ್ಯಾಜ್ಯಗಳ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಲಿದೆ.

ಇನ್ಮುಂದೆ ಬಾಡಿಗೆ ಒಪ್ಪಂದ ಮುಗಿದ ನಂತರ ಮನೆ ಖಾಲಿ ಮಾಡದಿದ್ರೆ ಮನೆ ಮಾಲೀಕರು 2 ತಿಂಗಳ ಅವಧಿಗೆ ಬಾಡಿಗೆ ಹೆಚ್ಚಿಸ ಬಹುದು. ಎರಡು ತಿಂಗಳ ನಂತರ ಖಾಲಿ ಮಾಡದಿದ್ದರೆ ನಾಲ್ಕು ಪಟ್ಟು ಬಾಡಿಗೆ ಹೆಚ್ಚಳ ಮಾಡಬಹುದು. ಬಾಡಿಗೆ ದಾರನ ಮನೆಗೆ ಮಾಲೀಕ ಏಕಾಏಕಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ.

Comments are closed.