Calling girl ‘item’ is derogatory:ಹುಡುಗಿಯನ್ನು ’ಐಟಂ’ ಎಂದು ಕರೆಯುವುದು ಕೇವಲ ಲೈಂಗಿಕ ಉದ್ದೇಶದಿಂದ : ಮುಂಬೈ ಕೋರ್ಟ್

ಮುಂಬೈ : Calling girl ‘item’ is derogatory : ಬಾಲಕಿಗೆ ಕಿರುಕುಳ ನೀಡಿದ ಕಾರಣಕ್ಕೆ ಓರ್ವ ವ್ಯಕ್ತಿಗೆ ಒಂದೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ಮುಂಬೈನ ವಿಶೇಷ ನ್ಯಾಯಾಲಯವು ಹುಡುಗಿಯರನ್ನು ಐಟಂ ಎಂದು ಕರೆಯುವುದು ಅವಹೇಳನಕಾರಿ ಹೇಳಿಕೆಯಾಗಿದೆ ಹಾಗೂ ಇದು ಲೈಂಗಿಕ ದುರುದ್ದೇಶದಿಂದ ನೀಡುವ ಹೇಳಿಕೆಯಾಗಿದೆ ಎಂದು ಕೋರ್ಟ್ ಹೇಳಿದೆ. ಅಕ್ಟೋಬರ್​ 20ರಂದು ನೀಡಲಾದ ಆದೇಶದಲ್ಲಿ, ನ್ಯಾಯಾಲಯವು ಆರೋಪಿಗಳ ಮೇಲೆ ಮೃದು ಧೋರಣೆಯನ್ನು ತೋರಿಸಲು ನಿರಾಕರಿಸಿದೆ ಹಾಗೂ ಇಂತಹ ರೋಡ್​ ರೋಮಿಯೋಗಳು ಮಹಿಳೆಯರ ಮೇಲೆ ಅನೈತಿಕ ನಡುವಳಿಕೆಯನ್ನು ತೋರದಂತೆ ಮಾಡಲು ಸೂಕ್ತ ಪಾಠ ಕಲಿಸುವ ಅಗತ್ಯವಿದೆ ಎಂದು ಹೇಳಿದೆ.


ವಿಶೇಷ ನ್ಯಾಯಾಧೀಶರಾದ ಎ.ಜೆ ಅನ್ಸಾರಿ ನೇತೃತ್ವದ ಪೀಠವು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. 25 ವರ್ಷದ ಆರೋಪಿಯು ಹದಿನಾರು ವರ್ಷದ ಸಂತ್ರಸ್ತೆಯನ್ನು ಜುಲೈ 2015ರಂದು ಮುಂಬೈನ ತನ್ನ ನಿವಾಸದ ಬಳಿಯಲ್ಲಿ ಐಟಂ ಎಂದು ಕರೆದಿದ್ದ. ಮಾತ್ರವಲ್ಲದೇ ಆಕೆಯ ಜಡೆ ಹಿಡಿದು ಎಳೆದಿದ್ದ. ಬಾಲಕಿಯು ಶಾಲೆಯಿಂದ ಮರಳಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.
ಆರೋಪಿಯು ಉದ್ದೇಶಪೂರ್ವಕವಾಗಿ ಸಂತ್ರಸ್ತೆಯ ಕೂದಲನ್ನು ಹಿಡಿದು ಎಳೆದು ಐಟಂ ಎಂದು ಕರೆದಿದ್ದಾನೆ. ನನ್ನ ಅಭಿಪ್ರಾಯದ ಪ್ರಕಾರ ಈತ ಲೈಂಗಿಕ ದುರುದ್ದೇಶದಿಂದಲೇ ಈ ರೀತಿ ಕರೆದಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಧೀಶ ಎ.ಜೆ ಅನ್ಸಾರಿ ಹೇಳಿದ್ದಾರೆ. ಅಲ್ಲದೇ ಆರೋಪಿಯ ವರ್ತನೆಯು ಸಂಪೂರ್ಣ ಅನುಚಿತವಾಗಿದೆ ಎಂಬುದನ್ನು ಕೋರ್ಟ್ ಗಮನಿಸಿತ್ತು.

ಆರೋಪಿಯು ಸಂತ್ರಸ್ತೆಯನ್ನು ಐಟಂ ಎಂದು ಕರೆದಿದ್ದಾನೆ. ಇದು ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಲೈಂಗಿಕ ರೀತಿಯಲ್ಲಿ ಸಂಬೋಧಿಸಲು ಬಳಕೆ ಮಾಡುವ ಪದವಾಗಿದೆ. ಈ ರೀತಿಯ ಪದವನ್ನು ಬಳಕೆ ಮಾಡಿದಲ್ಲಿ ಆತ ಹೆಣ್ಣನ್ನು ಲೈಂಗಿಕ ದುರುದ್ದೇಶದಿಂದಲೇ ನೋಡುತ್ತಿದ್ದಾನೆ ಎಂದರ್ಥವಾಗಿದೆ. ಇದು ಆಕೆಯನ್ನು ಲೈಂಗಿಕವಾಗಿ ಗುರಿಯಾಗಿಸುತ್ತದೆ. ಯಾವುದೇ ಹುಡುಗಿಗೆ ಐಟಂ ಎಂದು ಕರೆಯುವುದು ಖಂಡಿತವಾಗಿಯೂ ಅವಹೇಳನಕಾರಿಯಾಗಿದೆ ಎಂದು ಕೋರ್ಟ್ ಹೇಳಿದೆ.

ಆರೋಪಿಯು ಈ ಪದ ಬಳಕೆಯನ್ನು ನಿಸ್ಸಂಶಯವಾಗಿ ಲೈಂಗಿಕ ದುರುದ್ದೇಶದಿಂದಲೇ ಮಾಡಿದ್ದಾನೆ. ಏಕೆಂದರೆ ಹುಡುಗಿಯನ್ನ ಐಟಂ ಎಂದು ಕರೆಯುವಾಗ ಲೈಂಗಿಕವಾಗಿ ಆಕ್ಷೇಪಿಸಲು ಮಾತ್ರ ಬಳಕೆ ಮಾಡಲಾಗುತ್ತದೆ ಇದನ್ನು ಬಿಟ್ಟು ಈ ಪದಕ್ಕೆ ಇನ್ಯಾವ ಬೇರೆ ಅರ್ಥವೂ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನು ಓದಿ : Mangaluru Airport : ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ ಟಿಸಿ ಬಸ್‌ ಸಂಚಾರ ಪುನರಾರಂಭ

ಇದನ್ನೂ ಓದಿ : UP Kannauj : ಸರಕಾರಿ ಅತಿಥಿ ಗೃಹದಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Calling girl ‘item’ is derogatory, used to objectify her with sexual intent: Mumbai court

Comments are closed.