CM Jagan Mohan Reddy : ಆಂಧ್ರಪ್ರದೇಶದ ರಾಜಧಾನಿ ವಿಶಾಖಪಟ್ಟಣಂ : ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಆಂಧ್ರಪ್ರದೇಶ : ಸಿಎಂ ಜಗನ್‌ ಮೋಹನ್‌ ರೆಡ್ಡಿ (CM Jagan Mohan Reddy) ವಿಶಾಖಪಟ್ಟಣಂ ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಿದ್ದಾರೆ. ಸಿಎಂ ಜಗನ್‌ ಮೋಹನ್‌ ರೆಡ್ಡಿ ಅಂತರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ಸಿಎಂ ಜಗನ್‌ ಮೋಹನ್‌ ರೆಡ್ಡಿ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಕಪಟ್ಟಣಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ಮುಂದಿನ ತಿಂಗಳುಗಳಲ್ಲಿ ನಾನು ಕೂಡ ವಿಶಾಖಪಟ್ಟಣಕ್ಕೆ ಶಿಫ್ಟ್ ಆಗಲಿದ್ದೇನೆ. ನಾವು ಮಾರ್ಚ್ 3 ಮತ್ತು 4 ರಂದು ಈ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಅಲ್ಲಿ ಆಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡಿದ ಎಲ್ಲರಿಗೂ ಸಿಎಂ ಜಗನ್‌ ಮೋಹನ್‌ ರೆಡ್ಡಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸಲು ಸರಕಾರದ ಪರವಾಗಿ ಯಾವುದೇ ರೀತಿಯ ಬೆಂಬಲ ನೀಡಲು ಸಿದ್ಧ ಎಂದು ಅವರು ಹೂಡಿಕೆದಾರರಿಗೆ ಭರವಸೆ ನೀಡಿದರು. ಆಂಧ್ರಪ್ರದೇಶವು ಸುದೀರ್ಘವಾದ ಕರಾವಳಿ ಬೆಲ್ಟ್ ಅನ್ನು ಹೊಂದಿದ್ದು, ಶೇ.11.43 ರಷ್ಟು ಬೆಳವಣಿಗೆ ದರದೊಂದಿಗೆ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : Former CM Siddaramaiah : ಹಾಡಿನ ರೂಪದಲ್ಲಿ ಬರ್ತಿದೆ ಸಿದ್ಧು ಸಾಧನೆ: ಟಾಲಿವುಡ್ ಗಾಯಕ ಧ್ವನಿಯಲ್ಲಿ ಟಗರು ಗೀತೆ

ಇದನ್ನೂ ಓದಿ : Allegation against D.K.Sivakumar: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದಆರೋಪಗಳ ಸುರಿಮಳೆ‌ಗೈದ ಸಾಹುಕಾರ್‌ : ಏನೆಲ್ಲಾ ಆರೋಪಗಳಿವೆ ಗೊತ್ತಾ?

ಇದನ್ನೂ ಓದಿ : Audio released by Jarakiholi: ಡಿಕೆ ಶಿವಕುಮಾರ್ ಆಡಿಯೋ ರಿಲೀಸ್ ಮಾಡಿದ ರಮೇಶ್ ಜಾರಕಿಹೊಳಿ : ಆಡಿಯೋದಲ್ಲೇನಿದೆ ಗೊತ್ತಾ ?

ಇದನ್ನೂ ಓದಿ : ಸಿಎಂ ಸ್ಥಾನ ಉಳಿಸಿಕೊಳ್ಳಲು ಬೊಮ್ಮಾಯಿ ಕಸರತ್ತು: ಸ್ವಕ್ಷೇತ್ರಕ್ಕೆ ಅನುದಾನ, ಅಧಿಕಾರಿಗಳಿಗೆ ಹೊಣೆ

ಸಿಂಗಲ್ ಡೆಸ್ಕ್ ವ್ಯವಸ್ಥೆಯ ಮೂಲಕ ಆಂಧ್ರಪ್ರದೇಶ ಸರಕಾರ 21 ದಿನಗಳಲ್ಲಿ ಕೈಗಾರಿಕೆಗಳಿಗೆ ಅನುಮತಿ ನೀಡುತ್ತದೆ ಎಂದು ಸಿಎಂ ಹೇಳಿದರು. ವಿಶಾಖಪಟ್ಟಣಂ ಅನ್ನು ರಾಜ್ಯ ಆಡಳಿತದ ಕೇಂದ್ರವನ್ನಾಗಿ ಪ್ರಸ್ತಾಪಿಸಿ, ರಾಜ್ಯದ ಭವಿಷ್ಯ ವಿಕೇಂದ್ರೀಕೃತ ಅಭಿವೃದ್ಧಿಯಲ್ಲಿದೆ ಎಂದು ಈ ಹಿಂದೆ ಸಿಎಂ ಜಗನ್ ಸ್ಪಷ್ಟಪಡಿಸಿದ್ದರು.

Capital of Andhra Pradesh Visakhapatnam : Announcement of CM Jagan Mohan Reddy

Comments are closed.