ನವದೆಹಲಿ : ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಖರೀದಿ ಮಾಡಿದೆ. ನಷ್ಟದ ಸುಳಿಗೆ ಸಿಲುಕಿದ್ದ ಏರ್ ಇಂಡಿಯಾ ವನ್ನು ಕೇಂದ್ರ ಸರಕಾರ ಬರೋಬ್ಬರಿ 18,000 ಕೋಟಿಗೆ ಮಾರಾಟ ಮಾಡಿದೆ. ಇದೀಗ ಷೇರು ಖರೀದಿ ಒಪ್ಪಂದಕ್ಕೆ ಟಾಟಾ ಸನ್ಸ್ ಹಾಗೂ ಕೇಂದ್ರ ಸರಕಾರ ಸಹಿ ಹಾಕಿವೆ. ಹೀಗಾಗಿ ಏರ್ ಇಂಡಿಯಾ ಇದೀಗ ಟಾಟಾ ಸಂಸ್ಥೆಯ ಪಾಲಾಗಿದೆ.
ಭಾರತದಲ್ಲಿ 2003 – 04ರ ನಂತರದಲ್ಲಿ ನಡೆಯುತ್ತಿರುವ ಮೊದಲ ಖಾಸಗೀಕರಣವಾಗಿದ್ದು, ಟಾಟಾ ಸಂಸ್ಥೆ ಏರ್ ಇಂಡಿಯಾ ವಿಮಾನಯಾನ ಸೇವೆಯನ್ನು ಇನ್ನಷ್ಟು ಉತ್ತಮ ಗೊಳಿಸುವ ಗುರಿಯನ್ನು ಹೊಂದಿದೆ. ಟಾಟಾ ಸಂಸ್ಥೆ ಈಗಾಗಲೇ ಸಿಂಗಾಪುರ್ ಏರ್ ಲೈನ್ಸ್ ನ ಜಂಟಿ ಉದ್ಯಮವಾಗಿರುವ ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ವಿಮಾನಯಾನ ಸೇವೆಯನ್ನು ನಿರ್ವಹಿಸುತ್ತಿದೆ. ಇದೀಗ ನಷ್ಟದ ಸುಳಿಗೆ ಸಿಲುಕಿದ್ದ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಖರೀದಿಸಿದೆ. ಹೀಗಾಗಿ ಏರ್ ಇಂಡಿಯಾ 27 ಬೋಯಿಂಗ್ 787 ಸೇರಿದಂತೆ 43 ವೈಡ್ ಬಾಡಿ ವಿಮಾನಗಳು ಇನ್ಮುಂದೆ ಟಾಟಾ ಸಸ್ಸ್ ಪಾಲಾಗಲಿದೆ.
ಏರ್ ಇಂಡಿಯಾದ ಮರುಹೂಡಿಕೆ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ತನ್ನ ವೈಡ್- ಬಾಡಿ ವಿಮಾನಗಳ ಉತ್ತಮ ಬಳಕೆ ಮತ್ತು ವಿಮಾನಯಾನ ಸೇವೆಗಳ ಉನ್ನತೀಕರಣ ಸೇರಿದಂತೆ ವೃತ್ತಿಪರ ರೀತಿಯಲ್ಲಿ ಮತ್ತಷ್ಟು ಉತ್ತಮ ಸೇವೆಗಳನ್ನು ಏರ್ ಇಂಡಿಯಾ ನೀಡಲಿದೆ. ಜೊತೆಗೆ ವಿಮಾನದ ಹಾರುವ ಗಂಟೆಗಳ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಹೇಳಿದ್ದಾರೆ.
ಟಾಟಾ ಸನ್ಸ್ ಪಾಲಾಗಿರುವ ಏರ್ ಇಂಡಿಯಾ ಮುಂಬರುವ ತಿಂಗಳುಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸುವ ಸಾಧ್ಯತೆಯಿದೆ. ಏರ್ ಇಂಡಿಯಾದ ಕಾರ್ಯತಂತ್ರದ ಮರು ಹೂಡಿಕೆಗಾಗಿ ಟಾಟಾ ಸನ್ಸ್‌ನೊಂದಿಗೆ ಸರಕಾರವು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ( ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಈ ಒಪ್ಪಂದವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಆರ್ಮ್ AISATS ಮಾರಾಟವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
Share Purchase Agreement signed today by Government with Tata Sons for strategic disinvestment of Air India. pic.twitter.com/DRjKODxGbM
— Secretary, DIPAM (@SecyDIPAM) October 25, 2021
ಏರ್ ಇಂಡಿಯಾವನ್ನು ಖರೀದಿ ಮಾಡಲು ಮುಂದಾಗಿದ್ದ ಸ್ಟೈಸ್ ಜೆಟ್ ಪ್ರವರ್ತಕ ಅಜಯ್ ಸಿಂಗ್ ನೇತೃತ್ವದಲ್ಲಿ ಮುಂದಾಗಿತ್ತು. ಆದರೆ ಸರಕಾರ ನಿಗದಿ ಮಾಡಿದ ಬಿಡ್ ಗೆಲ್ಲುವಲ್ಲಿ ಟಾಟಾ ಸನ್ಸ್ ಯಶಸ್ವಿಯಾಗಿದೆ. ಈ ಮೂಲಕ ಆರು ದಶಕಗಳ ಬಳಿಕ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಸಂಸ್ಥಾಪಕ ಟಾಟಾ ಸನ್ಸ್ ಪಾಲಾಗಿದೆ.
ಇದನ್ನೂ ಓದಿ : Sorry Air India : ಟಾಟಾಗೆ ಪತ್ರ ಬರೆದಿದ್ದಇಂದಿರಾ ಗಾಂಧಿ !
ಇದನ್ನೂ ಓದಿ : Welcome back, Air India ಎಂದ ರತನ್ ಟಾಟಾ : 68 ವರ್ಷದ ಬಳಿಕ ಸಂಸ್ಥಾಪಕರ ಮಡಿಲಿಗೆ ಏರ್ ಇಂಡಿಯಾ
(Central Government Share Purchase Agreement with Tata sons for ₹ 18000 cr Air India Deal )