Honey Trap : ಒಂದೇ ವರ್ಷದಲ್ಲಿ 300 ಮಂದಿಗೆ ಹನಿಟ್ರ್ಯಾಪ್‌, 20 ಕೋಟಿ ರೂ. ದೋಚಿದ ದಂಪತಿ ಅರೆಸ್ಟ್‌

ಗಾಜಿಯಾಬಾದ್ : ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ಹುಡುಗಿಯರನ್ನು ಬಳಸಿಕೊಂಡು ಉದ್ಯಮಿಗಳು, ಶ್ರೀಮಂತರನ್ನು ಹನಿಟ್ರ್ಯಾಪ್‌ ಬಲೆಗೆ ಬೀಸಿಕೊಂಡು, ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಿರುವ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.

ಯೋಗೇಶ್ ಮತ್ತು ಸಪ್ನಾಗೌತಮ್ ದಂಪತಿಯೇ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದವರು. ಗಾಜಿಯಾಬಾದ್‌ ಮೂಲದ ಯೋಗೀಶ್‌ ಹಾಗೂ ಸ್ವಪ್ನಾ ಗೌತಮ್‌ ಕೇವಲ ಒಂದೇ ಒಂದು ವರ್ಷದ ಅವಧಿಯಲ್ಲಿ ದೇಶದಾದ್ಯಂತ ಸುಮಾರು 300 ಮಂದಿಯನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿಕೊಂಡು ಒಂದೇ ವರ್ಷದಲ್ಲಿ ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ವಸೂಲಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ ದಂಪತಿ, ಆರಂಭದಲ್ಲಿ ಹನಿಟ್ರ್ಯಾಪ್‌ಗೆ ಬಳಸಿಕೊಳ್ಳುವವರ ಸಂಪೂರ್ನ ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ಆರಂಭದಲ್ಲಿ ಯೋಗೀಶ್‌ ಉದ್ಯಮಿಗಳು, ಶ್ರೀಮಂತರ ಬ್ಯಾಂಕ್‌ ಖಾತೆಯಲ್ಲಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ನಂತರದ ಅವರ ಮೊಬೈಲ್‌ ಸಂಖ್ಯೆಯನ್ನು ಕಲೆಕ್ಟ್‌ ಮಾಡಿ ಪತ್ನಿ ಸ್ವಪ್ನಾಗೆ ನೀಡುತ್ತಿದ್ದ.

ಉದ್ಯಮಿಗಳು, ಶ್ರೀಮಂತರ ಮೊಬೈಲ್‌ ನಂತರ ಸಿಕ್ಕ ನಂತರದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅವರನ್ನು ಸಂಪರ್ಕಿಸುವ ಕಾರ್ಯವನ್ನು ಸ್ವಪ್ನಾ ಮಾಡುತ್ತಿದ್ದಳು. ನಕಲಿ ಖಾತೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸಿ ಕ್ಲೋಸ್‌ ಆಗಿ ಚಾಟ್‌ ಮಾಡುತ್ತಾ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ನಂತರ ಯುವತಿಯರನ್ನು ಬಳಸಿಕೊಂಡು ವಿಡಿಯೋಗಳನ್ನು ಮಾಡಿಕೊಂಡು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದರು.

ಸ್ವಪ್ನಾ ಹಾಗೂ ಯೊಗೀಶ್‌ ದಂಪತಿ ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದಾರೆ. ಇನ್ನು ಈ ದಂಪತಿ ವೆಬ್‌ಸೈಟ್‌ ವೊಂದರಲ್ಲಿ ಸೆಕ್ಸ್‌ ಚಾಟ್‌ ಮಾಡಿಯೂ ಹಣ ಸಂಪಾದನೆ ಮಾಡುತ್ತಿದ್ದರು ಅನ್ನೋದು ತನಿಖೆಯಿಂದ ಬಯಲಾಗಿದೆ. ಇದೀಗ ದಂಪತಿಯಿಂದ ವಿಡಿಯೋ, ಪೋಟೋಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಅಶ್ಲೀಲ ಚಿತ್ರ ವೀಕ್ಷಣೆಗೆ ನಿರಾಕರಣೆ, ಅಪ್ತಾಪ್ತ ಬಾಲಕರಿಂದ 6 ವರ್ಷ ಬಾಲಕಿ ಹತ್ಯೆ

ಇದನ್ನೂ ಓದಿ :  ಯುವತಿಗೆ ಡ್ರಗ್ಸ್‌ ನೀಡಿ ಸಾಮೂಹಿಕ ಅತ್ಯಾಚಾರ

( Honeytrap for 300 people in a single year, Rs 20 crore Arrest the couple who grab )

Comments are closed.