ಹಿಂದೂಗಳು ಕೈಕೊಳ್ಳುವ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ ಯಾತ್ರೆಯೂ (Char Dham Yatra) ಒಂದು. ಈ ವರ್ಷದ ಚಾರ್ ಧಾಮ್ ಯಾತ್ರೆಯು ಕೊನೆಯ ಹಂತದಲ್ಲಿದೆ. ಉತ್ತರಾಖಂಡದ ಗಂಗೋತ್ರಿ , ಯಮುನೋತ್ರಿ ಮತ್ತು ಕೇದಾರನಾಥ ದೇಗುಲದ ಪೋರ್ಟಲ್‌ಗಳನ್ನು ಚಳಿಗಾಲಕ್ಕಾಗಿ ಮುಚ್ಚಲಾಗುತ್ತಿದೆ. ಅತಿಯಾದ ಚಳಿ ಮತ್ತು ಹಿಮಪಾತದ ಕಾರಣ ಪ್ರತಿವರ್ಷ 6 ತಿಂಗಳುಗಳ ಕಾಲ ದೇವಾಲಯದ ಪೋರ್ಟಲ್‌ಗಳನ್ನು ಮುಚ್ಚುಲಾಗುತ್ತದೆ. ಏತನ್ಮಧ್ಯೆ, ಬದರಿನಾಥ ದೇಗುಲದ ಪೋರ್ಟಲ್‌ಗಳು ನವೆಂಬರ್ 19 ರಂದು ಮುಚ್ಚಲ್ಪಡುತ್ತಿದೆ. ಇಂದು ಕೇದಾರನಾಥ ಯಾತ್ರೆಯು ಕೊನೆಗೊಳ್ಳಲಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಬಿಡುಗಡೆಯಾದ ಮಾಹಿತಿಯ ಪ್ರಕಾರ ಇದುವರೆಗೆ 6,24,371 ಯಾತ್ರಾರ್ಥಿಗಳು ಗಂಗೋತ್ರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ. ಆರು ತಿಂಗಳ ಕಾಲ ಗಂಗೋತ್ರಿ ದೇಗುಲವನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ, ಭಕ್ತರು ಮುಖ್ಬಾ ಗ್ರಾಮದಲ್ಲಿ ಗಂಗಾ ದೇವಿಯನ್ನು ಪೂಜಿಸಲು ಸಾಧ್ಯವಾಗುತ್ತದೆ. ವೇದಘೋಷಗಳ ನಡುವೆ ದೇವಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಮಧ್ಯಾಹ್ನ 12.01 ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗುವುದು ಎಂದು ಗಂಗೋತ್ರಿ ದೇವಾಲಯ ಸಮಿತಿಯ ಮೂಲಗಳು ತಿಳಿಸಿವೆ.
ಯಮುನೋತ್ರಿ ಪೋರ್ಟಲ್‌ಗಳನ್ನು ಮುಚ್ಚಿದ ನಂತರ, ಯಮುನೋತ್ರಿ ದೇವತೆಯ ವಿಗ್ರಹವು ಚಳಿಗಾಲದ ನಿವಾಸಕ್ಕಾಗಿ ಖರ್ಸಾಲಿ ಗ್ರಾಮಕ್ಕೆ ಹೊರಡಲಿದೆ. ಕೇದಾರನಾಥದಲ್ಲಿ, ದೇವರ ಪಲ್ಲಕ್ಕಿಯು ಅದರ ಚಳಿಗಾಲದ ವಾಸಸ್ಥಾನವಾದ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಹೊರಡುತ್ತದೆ ಮತ್ತು ಆರು ತಿಂಗಳ ಕಾಲ ಅಲ್ಲಿಯೇ ಇರುತ್ತದೆ.
ಉತ್ತರಾಖಂಡದ ಎತ್ತರದ ಗರ್ವಾಲ್ ಹಿಮಾಲಯ ಪ್ರದೇಶದಲ್ಲಿ ನೆಲೆಗೊಂಡಿರುವ ಕೇದಾರನಾಥ ಧಾಮದ ಪವಿತ್ರ ಪೋರ್ಟಲ್‌ಗಳನ್ನು ಚಳಿಗಾಲಕ್ಕಾಗಿ ಅಕ್ಟೋಬರ್ 27, 2022, ಗುರುವಾರದಂದು ಮುಚ್ಚಲಾಯಿತು.
ಈ ವರ್ಷ ನವೆಂಬರ್ 19 ರಂದು ಮಧ್ಯಾಹ್ನ 3.35 ಕ್ಕೆ ಬದರಿನಾಥ ದೇವಾಲಯದ ದ್ವಾರವನ್ನು ಮುಚ್ಚಲಾಗುವುದು ಮತ್ತು ಬದರಿನಾಥನ ಉತ್ಸವ ಮೂರ್ತಿಯನ್ನು ಚಮೋಲಿ ಜಿಲ್ಲೆಯ ಜೋಶಿಮಠದ ನರಸಿಂಹ ದೇವಾಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಬದರಿನಾಥ ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದರ್ ಅಜಯ್ ಹೇಳಿದ್ದಾರೆ.
ಇದನ್ನೂ ಓದಿ : WhatsApp: ವಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯ : ಇದು ಡೆಸ್ಕ್‌ಟಾಪ್ ಬೀಟಾ ಬಳಕೆದಾರರಿಗೆ ಮಾತ್ರ
(Char Dham Yatra Portals of Gangotri, Yamunotri, Badrinath, and Kedarnath Shrine Closes for Winters)