Group Captain Varun Singh : ಹೆಲಿಕಾಪ್ಟರ್​ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ನಿಧನ

ಬೆಂಗಳೂರು : ಡಿಸೆಂಬರ್​ 8ರಂದು ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಇತರೆ 12 ಮಂದಿಯನ್ನು ಬಲಿತೆಗೆದುಕೊಂಡಿದ್ದ ಹೆಲಿಕಾಪ್ಟರ್​ ( Chopper Crash ) ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾನಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್(Group Captain Varun Singh)​ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್​ ದುರಂತದಲ್ಲಿ ರಕ್ಷಿಸಲ್ಪಟ್ಟಿದ್ದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​ರನ್ನು ಮೊದಲು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮಿಲಿಟರಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ವರುಣ್​ ಸಿಂಗ್​​ರನ್ನು ಲೈಫ್​​ ಸಪೋರ್ಟ್​ನಲ್ಲಿ ಇಡಲಾಗಿತ್ತು.

ಡಿಸೆಂಬರ್​ 8ರಂದು ನಡೆದ ಹೆಲಿಕಾಪ್ಟರ್​ ದುರಂತದಲ್ಲಿ ಗಾಯಗೊಂಡು ಇಂದು ಬೆಳಗ್ಗೆ ನಿಧನರಾದ ಕೆಚ್ಚೆದಯ ವೀರ ಗ್ರೂಪ್​ ಕ್ಯಾಪ್ಟನ್​​ ವರುಣ್​ ಸಿಂಗ್​​ ಅವರ ನಿಧನ ವಾರ್ತೆಯನ್ನು ತಿಳಿಸಲು ಭಾರತೀಯ ವಾಯುಪಡೆಯು ದುಃಖಿತವಾಗಿದೆ. ವರುಣ್​ ಸಿಂಗ್​ ನಿಧನಕ್ಕೆ ಭಾರತೀಯ ವಾಯುಪಡೆ ಸಂತಾಪ ಸೂಚಿಸುತ್ತಿದೆ. ಹಾಗೂ ದುಃಖತೃಪ್ತ ಕುಟುಂಬದವರ ಜೊತೆಯಲ್ಲಿ ಐಎಫ್​ ದೃಢವಾಗಿ ನಿಂತಿದೆ ಎಂದು ಟ್ವೀಟ್​ ಮಾಡಲಾಗಿದೆ. ಶೌರ್ಯ ಚಕ್ರ ಪ್ರಶಸ್ತಿ ವಿಜೇತ ವರುಣ್​ ಸಿಂಗ್​ ಬದುಕುಳಿಯಲೆಂದು ದೇಶದ ಮೂಲೆ ಮೂಲೆಯ ಜನರು ಪ್ರಾರ್ಥಿಸಿದ್ದರು. ಮೊನ್ನೆ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದ ಏಕೈಕ ಸೇನಾನಿ ಇವರಾಗಿದ್ದರು.

ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬಚಾವಾಗಿದ್ದ ಏಕೈಕ ಸೇನಾಧಿಕಾರಿ ವರುಣ್‌ ಸಿಂಗ್‌ !

ಸೇನಾಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ದುರಂತಕ್ಕೀಡಾಗಿದ್ದು ಈ ಅಪಘಾತದಲ್ಲಿ ಜನರಲ್​ ಬಿಪಿನ್​ ರಾವತ್​ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಬಿಪಿನ್​ ರಾವತ್​ ಜೊತೆ ಪ್ರಯಾಣ ಮಾಡುತ್ತಿದ್ದ ಪತ್ನಿ ಮಧುಲಿಕಾ ರಾವತ್​ ಕೂಡ ಈ ಅಪಘಾತದಲ್ಲಿ ನಿಧನರಾಗಿದ್ದಾರೆ,

ವೆಲ್ಲಿಂಗ್ಟನ್​​ನ ಡಿಫೆನ್ಸ್​ ಸರ್ವೀಸ್​ ಸ್ಟಾಫ್​ ಕಾಲೇಜಿಗೆ ಭೇಟಿ ನೀಡಲೆಂದು ಎಂಐ 15 ವಿ5 ಹೆಲಿಕಾಪ್ಟರ್​​ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ತಮಿಳುನಾಡಿನ ನೀಲಗಿರಿ ಅರಣ್ಯ ವ್ಯಾಪ್ತಿಯ ಕುನೂರು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ದುರಂತ ಸ್ಥಳದಲ್ಲಿಯೇ ಸಾಕಷ್ಟು ಮೃತ ದೇಹಗಳು ಪತ್ತೆಯಾಗಿದ್ದವು. ಡಿಎನ್​ಎ ಪರೀಕ್ಷೆ ಮೂಲಕ ಮೃತ ದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಪಿನ್​ ರಾವತ್​​ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ.

14 ಮಂದಿ ಪ್ರಯಾಣಿಸುತ್ತಿದ್ದ ಈ ಹೆಲಿಕಾಪ್ಟರ್​​ನಲ್ಲಿದ್ದ ಏಕೈಕ ಸೇನಾಧಿಕಾರಿ ಮಾತ್ರ ಬದುಕುಳಿದಿದ್ದಾರೆ. ಭಾರತೀಯ ವಾಯುಪಡೆ ನೀಡಿರುವ ಮಾಹಿತಿಯ ಪ್ರಕಾರ ಗ್ರೂಪ್​ ಕ್ಯಾಪ್ಟನ್​​ ವರುಣ್​​​ ಸಿಂಗ್​​ ಎಸ್​ಸಿ ಎಂಬವರು ಮಾತ್ರ ಈ ದುರ್ಘಟನೆಯಿಂದ ಬಚಾವಾಗಿದ್ದಾರೆ. ವರುಣ್​ ಸಿಂಗ್​​ ಗಾಯಗಳಾಗಿದ್ದು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 2020ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತನ್ನ ಎಲ್​ಸಿಎ ತೇಜಸ್​ ಯುದ್ಧ ವಿಮಾನವನ್ನು ಉಳಿಸಿದ್ದಕ್ಕಾಗಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​ರಿಗೆ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಕೇಂದ್ರ ಸರ್ಕಾರ ಶೌರ್ಯ ಚಕ್ರ ನೀಡಿ ಗೌರವಿಸಿದೆ.

ಇದನ್ನು ಓದಿ: Pet Dog Died :ಪೊಲೀಸರ ವಿರುದ್ಧ ಸಾಕು ನಾಯಿ ಕೊಂದ ಆರೋಪ ಹೊರಿಸಿದೆ ಈ ಕುಟುಂಬ..!

ಇದನ್ನೂ ಓದಿ: Jarkiholi master plan : ಬಿಜೆಪಿಗೆ ಅನಿವಾರ್ಯವಾದ್ರಾ ಲಖನ್ : ರಮೇಶ್ ಜಾರಕಿಹೊಳಿ ಪ್ಲ್ಯಾನ್ ಏನು ಗೊತ್ತಾ?!

Group Captain Varun Singh, Injured In Chopper Crash, Dies In Hospital

Comments are closed.