Kerala High Court :‘ಮಗಳ ಮದುವೆಗೆ ಪೋಷಕರು ನೀಡುವ ಉಡುಗೊರೆ ವರದಕ್ಷಿಣೆಯಲ್ಲ’ : ಕೇರಳ ಹೈಕೋರ್ಟ್​ ಮಹತ್ವದ ಆದೇಶ

ತಿರುವನಂತಪುರ : ಮದುವೆಯ ಸಂದರ್ಭದಲ್ಲಿ ವಧುವಿನ ಪೋಷಕರು ಆಕೆಗೆ ಉಡುಗೊರೆಯ ರೂಪದಲ್ಲಿ ನೀಡುವ ಯಾವುದೇ ವಸ್ತುಗಳನ್ನು ( Presents gifted by parents ) ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ವರದಕ್ಷಿಣೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಮಹತ್ವದ ಆದೇಶವನ್ನು ನೀಡಿದೆ.

ವಧುವಿನ ಪೋಷಕರು ಮದುವೆ ದಿನದಂದು ಉಡುಗೊರೆ ರೂಪದಲ್ಲಿ ನೀಡಿದ್ದ ಚಿನ್ನಾಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸುವಂತೆ ಆದೇಶ ನೀಡಿದ್ದ ಕೊಲ್ಲಂ ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿ ನೀಡಿದ್ದ ಆದೇಶವನ್ನು ಪ್ರಶ್ನಿಸಿದ ತೊಡಿಯೂರು ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​ನ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ.

ವರದಕ್ಷಿಣೆ ನಿಷೇಧ ಕಾಯ್ದೆಯ ಪ್ರಕಾರ, ಪೋಷಕರು ಸ್ವ ಇಚ್ಛೆಯಿಂದ ಮದುವೆಯ ದಿನದಂದು ವಧುವಿಗೆ ನೀಡುವ ಚಿನ್ನದ ಆಭರಣಗಳನ್ನು ವರದಕ್ಷಿಣೆಯ ಅಡಿಯಲ್ಲಿ ತರಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಬಳಕೆ ಮಾಡಲು ಸಾಧ್ಯವೇ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ವರದಕ್ಷಿಣೆ ರೂಪದಲ್ಲಿ ವರನ ಕಡೆಯವರು ಚಿನ್ನಾಭರಣ ಪಡೆದಿದ್ದಾರೆ ಎಂಬುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಗೋಚರವಾಗದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ.ಆರ್​ ಅನಿತಾ ವರದಕ್ಷಿಣೆ ನಿಷೇಧ ಅಧಿಕಾರಿ ನೀಡಿದ ಆದೇಶವನ್ನು ರದ್ದುಗೊಳಿಸಿದ್ದಾರೆ.

ಮದುವೆಯ ಸಂದರ್ಭದಲ್ಲಿ ತಾನು ಉಡುಗೊರೆ ರೂಪದಲ್ಲಿ ಪಡೆದದ್ದ ಚಿನ್ನಾಭರಣಗಳನ್ನು ವಾಪಸ್​ ನೀಡಬೇಕೆಂದು ಮಹಿಳೆ ಆಗ್ರಹಿಸಿದ್ದರು. ಆಭರಣಗಳನ್ನು ಕೋ ಆಪರೇಟಿವ್​ ಬ್ಯಾಂಕ್​ನ ಲಾಕರ್​ನಲ್ಲಿ ಇಡಲಾಗಿದೆ ಎಂದೂ ಮಹಿಳೆ ಮಾಹಿತಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರ ಲಾಕರ್​ನಲ್ಲಿರುವ ಚಿನ್ನಾಭರಣ ಹಾಗೂ ಮದುವೆ ದಿನದಂದು ಪೋಷಕರು ನೀಡಿದ್ದ ಸರವನ್ನು ಹಿಂದಿರುಗಿಸುವುದಾಗಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಮಹಿಳೆ ಒಪ್ಪಿದ ಕಾರಣ ಕೇಸ್​ ಕೂಡ ಇತ್ಯರ್ಥವಾಗಿದೆ.

ಇದನ್ನು ಓದಿ: Manaohari gold tea : ಬರೋಬ್ಬರಿ 99,999 ರೂಪಾಯಿಗೆ ಮಾರಾಟವಾಯ್ತು ಮನೋಹರಿ ಟೀ ಪುಡಿ..!

ಇದನ್ನು ಓದಿ : Pet Dog Died :ಪೊಲೀಸರ ವಿರುದ್ಧ ಸಾಕು ನಾಯಿ ಕೊಂದ ಆರೋಪ ಹೊರಿಸಿದೆ ಈ ಕುಟುಂಬ..!

ಇದನ್ನೂ ಓದಿ : Google Puneeth Record : ನಿಧನದಂದೇ ಪುನೀತ್ ಬರೆದ್ರು ಹೊಸ ದಾಖಲೆ : ಗೂಗಲ್ ನಲ್ಲಿ ಅಪ್ಪು ರೆಕಾರ್ಡ್

Presents gifted by parents for daughter’s wedding cannot be considered dowry: Kerala High Court

Comments are closed.