ಸೋಮವಾರ, ಏಪ್ರಿಲ್ 28, 2025
Homekarnatakaನರೇಂದ್ರ ಮೋದಿ ಟೀಕಿಸದೇ ಕಾಂಗ್ರೆಸ್ ಪ್ರಚಾರ ಮಾಡಿ, ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ

ನರೇಂದ್ರ ಮೋದಿ ಟೀಕಿಸದೇ ಕಾಂಗ್ರೆಸ್ ಪ್ರಚಾರ ಮಾಡಿ, ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ

- Advertisement -

ನವದೆಹಲಿ : (Karnataka Election) ಚುನಾವಣೆ ಅಂದ್ರೇ ಕೇವಲ ರಾಜಕೀಯ ಮೇಲಾಟವಲ್ಲ. ಒಮ್ಮೊಮ್ಮೆ ಇದು ವೈಯಕ್ತಿಕ ಟೀಕೆಗೂ ತಿರುಗುತ್ತೆ. ಅದರ ಪ್ರಭಾವದಿಂದ ಕೆಲಮೊಮ್ಮೆ ರಾಜಕಾರಣಿಗಳು‌ ಗಂಭೀರ ಸಮಸ್ಯೆಗಳಿಗೂ ಗುರಿಯಾಗುತ್ತಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ರಾಹುಲ್ ಗಾಂಧಿ ನರೇಂದ್ರ ಮೋದಿ (Narendra Modi) ಅವರನ್ನು ಟೀಕಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ ಕಾಂಗ್ರೆಸ್ ಹೈಕಮಾಂಡ್ (congress High Command) ಸದ್ಯ ತನ್ನ ಅಭ್ಯರ್ಥಿಗಳಿಗೆ ಖಡಕ್ ಸೂಚನೆ ನೀಡಿದೆ. ಕರ್ನಾಟಕದಲ್ಲಿ ಚುನಾವಣೆ (Karnataka Election) ಕಣ ರಂಗೇರಿದೆ. ಆದರೆ ಚುನಾವಣೆ ಜೋಶ್ ನಲ್ಲಿ ಬೇಕಾ ಬಿಟ್ಟಿ ಟೀಕಿಸುವ ರಾಜಕಾರಣಿಗಳು ಕೊನೆಗೆ ಕಾನೂನು ಕ್ರಮದಂತಹ ಸಂಕಷ್ಟಕ್ಕೆ ತುತ್ತಾಗುತ್ತಾರೆ. ಇದನ್ನು ತಪ್ಪಿಸಲು ಕಾಂಗ್ರೆಸ್ ಹೈಕಮಾಂಡ್ ತನ್ನ ನಾಯಕರಿಗೆ ವೈಯಕ್ತಿಕ ಟೀಕೆಗೆ ಹೋಗದಂತೆ ಸೂಚಿಸಿದೆ.

ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ವೈಯಕ್ತಿಕ ಟೀಕೆ ಬೇಡ ಎಂದು ಹೈಕಮಾಂಡ್ ಅಭ್ಯರ್ಥಿಗಳಿಗೆ ಕಟ್ಟಪ್ಪಣೆ ಮಾಡಿದೆ. ಯಾಕೆ ಅನ್ನೋದನ್ನು ವಿವರಿಸಿರೋ ಕಾಂಗ್ರೆಸ್ , ಮೋದಿ ಟೀಕೆ ಮಾಡಿದಷ್ಟು ಬಿಜೆಪಿಗೆ ಅನುಕೂಲ.ಹಿಂದೆ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಮೌತ್ ಕಾ ಸೌದಾಗರ್(ಸಾವಿನ ವ್ಯಾಪರಿ) ಎಂದು ಟೀಕೆ ಮಾಡಿದ್ದನ್ನೇ ಅಸ್ತ್ರ ಮಾಡಿಕೊಂಡಿದ್ದ ಮೋದಿ ಅದನ್ನೇ ಬಳಸಿ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸಿದ್ದರು. ಇದನ್ನೂ ಓದಿ :

ಹೀಗಾಗಿ ಈಗ ಮೋದಿ ಜನಪ್ರಿಯತೆ ಈಗಲೂ ಪ್ರಬಲವಾಗಿ ಇರುವುದರಿಂದ ಬಿಜೆಪಿಗೆ ನಾವು ಅಸ್ತ್ರ ಕೊಡಬಾರದು. ಬಿಜೆಪಿ ಬಗ್ಗೆ ಜನರಿಗೆ ಸಿಟ್ಟು ಆಕ್ರೋಶ ಇದ್ದರೂ ಮೋದಿ ಸಾಕಷ್ಟು ಒಲವು ಇಟ್ಟುಕೊಂಡಿದ್ದಾರೆ. ಹೀಗಾಗಿ ಪ್ರಚಾರದ ಸಂದರ್ಭದಲ್ಲಿ ಮೋದಿ ಬಗ್ಗೆ ವೈಯಕ್ತಿಕ ನಿಂದನೆ ಬೇಡ‌.ಬಿಜೆಪಿ ಸರ್ಕಾರದ ಭ್ರಷ್ಟಾಚಾರ , ಕೋಮುವಾದ, ಜಾತಿ ಧ್ರುವೀಕರಣ ಇದರ ಬಗ್ಗೆ ಹೆಚ್ಚು ಪ್ರಸ್ತಾಪಿಸಬೇಕು ಎಂದು ಸೂಚಿಸಿದೆ. ಅಲ್ಲದೇ 40% ಕಮೀಷನ್ ಭ್ರಷ್ಟಾಚಾರ, ಪಿಎಸ್‍ಐ ನೇಮಕಾತಿ ಅಕ್ರಮ, ಕೆಪಿಎಸ್‍ಸಿ ನೇಮಕಾತಿಯಲ್ಲಿ ನಡೆದ ಅವ್ಯವಹಾರ, ಇಲಾಖಾವಾರು ಭ್ರಷ್ಟಾಚಾರ ಪ್ರಸ್ತಾಪಿಸಬೇಕು. ಪ್ರತಿದಿನ ಪಕ್ಷದ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಕಚೇರಿಗಳಲ್ಲಿ ಪತ್ರಿಕಾ ಗೋಷ್ಟಿ ನಡೆಸಬೇಕು ಪ್ರಧಾನಿ ಮೋದಿ ಬರುವ ವೇಳೆಗೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಪ್ರಸ್ತಾಪಿಸಬೇಕು ಎಂದು ಆದೇಶಿಸಿದೆ. ಇದನ್ನೂ ಓದಿ : ಕಾಂಗ್ರೆಸ್ ಎರಡನೇ ಪಟ್ಟಿ ಇಂದು ಬಿಡುಗಡೆ : ಸುರ್ಜೇವಾಲ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆ ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಒಟ್ಟಿನಲ್ಲಿ ರಾಹುಲ್ ಗಾಂಧಿ ಸಂಸದ ಸ್ಥಾನ ಅಮಾನತ್ತುಗೊಂಡಿರೋದು ಕಾಂಗ್ರೆಸ್ ಗೆ ಇನ್ನಿಲ್ಲದ ಆತಂಕ ತಂದಿದ್ದು, ಅದಕ್ಕಾಗಿ ಅಭ್ಯರ್ಥಿಗಳಿಗೆ ಖಡಕ್ ಎಚ್ಚರಿಕೆ ನೀಡಿ ವಿವಾದಕ್ಕೆ ಸಿಲುಕದಂತೆ ಸೂಚಿಸಿದೆ. ಇದನ್ನೂ ಓದಿ : ಆಟೋ ರಿಕ್ಷಾಗಳ ಹಿಂದೆ ಪಕ್ಷಗಳ ಚುನಾವಣಾ ಪ್ರಚಾರ : ಆಟೋ ರಿಕ್ಷಾಗಳು ಪೊಲೀಸ್‌ ವಶಕ್ಕೆ

congress High Command instructs state leaders to promote Karnataka Congress without criticizing Narendra Modi in Karnataka Election

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular