ನಟ ಸುದೀಪ್ ಜಾಹೀರಾತು, ಸಿನಿಮಾ ನಿಲ್ಲಿಸಿ : ಚುನಾವಣಾ ಆಯೋಗಕ್ಕೆ ವಕೀಲರ ಮನವಿ

ಶಿವಮೊಗ್ಗ : (Ban actor Sudeep) ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ನಿಯುಕ್ತಿಗೊಂಡು ಸಿಎಂ ಪರ ಪ್ರಚಾರ ಮಾಡೋದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಕಿಚ್ಚ ಸುದೀಪ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುದೀಪ್ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರೋದರಿಂದ ಸುದೀಪ್ ಸಿನಿಮಾ, ಜಾಹಿರಾತು, ಶೋ ನಿಲ್ಲಿಸಲು ಆಯೋಗಕ್ಕೆ ಮನವಿ ಸಲ್ಲಿಕೆಯಾಗಿದೆ.

ನಟ ಸುದೀಪ್ ಸ್ಟಾರ್ ಪ್ರಚಾರಕರಾಗಿ ಸಿಎಂ ಬೊಮ್ಮಾಯಿ ಹಾಗೂ ಅವರು ಸೂಚಿಸಲು ಅಭ್ಯರ್ಥಿಗಳ ಪರ ಪ್ರಚಾರ ಮಾಡೋದಾಗಿ ಬುಧವಾರ ಘೋಷಿಸಿದ್ದಾರೆ. ಇದುವರೆಗೂ ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಆಕ್ಟಿವ್ ಆಗಿದ್ದರೂ ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಳ್ಳದೇ ತಟಸ್ಥವಾಗಿದ್ದ ಸುದೀಪ್ ಬಿಜೆಪಿಗೆ ಬೆಂಬಲ ನೀಡುತ್ತಿದ್ದಂತೆ ಸುದೀಪ್ ಗೂ ಹಲವು ಸಮಸ್ಯೆಗಳು ಎದುರಾಗಿವೆ.

ಸುದೀಪ್ ಕೇವಲ ಸಿನಿಮಾ ಮಾತ್ರವಲ್ಲದೇ ಜಾಹೀರಾತು, ರಿಯಾಲಿಟಿ ಶೋ ಹಾಗೂ ಹಲವು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಸುದೀಪ್ ಬಿಜೆಪಿಗೆ ಬೆಂಬಲ ನೀಡಿರೋದರಿಂದ ಚುನಾವಣೆ ಮುಗಿಯುವರೆಗೂ ಸುದೀಪ್ ಅಭಿನಯದ ಎಲ್ಲ ಜಾಹೀರಾತು, ಸಿನಿಮಾ ಹಾಗೂ ಇತರ ಶೋಗಳನ್ನು ಟಿವಿ, ಥಿಯೇಟರ್ ಸೇರಿದಂತೆ ಎಲ್ಲಿಯೂ ಪ್ರಸಾರಕ್ಕೆ ಅವಕಾಶ ನೀಡದಂತೆ ಆಯೋಗಕ್ಕೆ ಮನವಿ ಸಲ್ಲಿಕೆಯಾಗಿದೆ. ಶಿವಮೊಗ್ಗ ಮೂಲದ ವಕೀಲ, ಶ್ರೀಪಾಲ್ ಎಂಬುವವರು ಈ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಅಧಿಕಾರಿಗೆ ಮೇಲ್ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ : ನರೇಂದ್ರ ಮೋದಿ ಟೀಕಿಸದೇ ಕಾಂಗ್ರೆಸ್ ಪ್ರಚಾರ ಮಾಡಿ, ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ

ಪತ್ರದಲ್ಲಿ ಸುದೀಪ್ ಅವರು ಒಂದು ಪಕ್ಷದ ಪರ ಪ್ರಚಾರ ಮಾಡಲು ಒಪ್ಪಿಕೊಂಡಿರೋದರಿಂದ ಅವರ ಸಿನಿಮಾ, ರಿಯಾಲಿಟಿ ಶೋ ಹಾಗೂ ಜಾಹೀರಾತುಗಳು ಮತದಾರರ ಮೇಲೆ ಪ್ರಭಾವ ಬೀರಲಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ಹೀಗಾಗಿ ಚುನಾವಣಾ ಪ್ರಕ್ರಿಯೆಗಳು ಮುಗಿಯುವ ತನಕ ಸುದೀಪ್ ಸಿನಿಮಾ, ಆ್ಯಡ್ ಬ್ಯಾನ್ (Ban actor Sudeep) ಮಾಡುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ. ಸುದೀಪ್ ಈ ಹಿಂದೆಯೂ ಹಲವು ರಾಜಕೀಯ ನಾಯಕರ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿ ದ್ದಾರೆ. ಆದರೆ ಯಾವುದೇ ಪಕ್ಷದೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಸ್ನೇಹಿತರನ್ನು ಹೊಂದಿದ್ದರೂ ಎಲ್ಲ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಸಿಎಂ ಬೊಮ್ಮಾಯಿ ಮೇಲಿನ ಪ್ರೀತಿಗಾಗಿ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡೋದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಸುದೀಪ್ ಗೂ ಹಲವು ನಿಯಮಗಳ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ : ಸುದೀಪ್‌ ಬಿಜೆಪಿಯ ಸ್ಟಾರ್‌ ಪ್ರಚಾರಕ; ನಾನು ಬೊಮ್ಮಾಯಿ ಮಾಮ ಅವರಿಗೆ ಬೆಂಬಲ ಕೊಡ್ತೇನೆ : ನಟ ಕಿಚ್ಚ ಸುದೀಪ್‌

Comments are closed.