ನವದೆಹಲಿ : ಆಟವಾಡುತ್ತಿದ್ದ ವೇಳೆಯಲ್ಲಿ ಒಂದೂವರೆ ವರ್ಷದ ಮಗುವಿನ ತಲೆಯೊಳಗೆ ಪ್ರೆಷರ್ ಕುಕ್ಕರ್ ಸಿಲುಕಿಕೊಂಡಿರುವ ಘಟನೆ ಆಗ್ರಾದ ಲೋಹಮಂಡಿಯ ಖಾಟಿಪುರ ಎಂಬಲ್ಲಿ ನಡೆದಿದೆ.
ಮನೆಯ ಹೊರಗೆ ಮಗು ಆಟವಾಡುತ್ತಿತ್ತು. ಅಡುಗೆ ಮಾಡಿದ ನಂತರದಲ್ಲಿ ಕುಕ್ಕರ್ ಅನ್ನು ಮನೆ ಹೊರಗೆ ಇಟ್ಟಿದ್ದರು. ಕುಕ್ಕರ್ ನೋಡಿದ ಮಗು ತನ್ನ ತಲೆಯನ್ನು ಕುಕ್ಕರ್ ಒಳಗೆ ಹಾಕಿದೆ. ಮನೆಯವರೆಲ್ಲಾ ಎಷ್ಟೇ ಸರ್ಕಸ್ ಮಾಡಿದ್ರೂ ಕೂಡ ಮಗುವಿನ ತಲೆಯನ್ನು ಹೊರಗೆ ತೆಗೆಯಲು ಸಾಧ್ಯವಾಗಲೇ ಇಲ್ಲ.
ಕೂಡಲೇ ವೈದ್ಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಯಂತ್ರದೊಂದಿಗೆ ಮನೆಗೆ ಬಂದ ವೈದ್ಯರು ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಕುಕ್ಕರ್ ಮಗುವಿನ ತಲೆಗೆ ಕಟ್ಟಿಯಾಗಿ ಹಿಡಿದಿತ್ತು ಇದರಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ವೈದ್ಯರು ಪರದಾಡಿದ್ದಾರೆ. ಕೊನೆಗೆ ಗ್ರೈಂಡರ್ ಯಂತ್ರದ ಮೂಲಕ ಕುಕ್ಕರ್‌ನ್ನು ಕಟ್ ಮಾಡುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : ಭೂಮಿ ಅಡಿಯಿಂದ ವಿಚಿತ್ರ ಸದ್ದು! ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ
ಇದನ್ನೂ ಓದಿ : ರೈತರಿಗೆ ಗುಡ್‌ನ್ಯೂಸ್ : ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರದ ಬದಲು ಸಿಗುತ್ತೆ12 ಸಾವಿರ ರೂ.