Namma Metro : ಕೆಂಗೇರಿ – ಮೈಸೂರು ರೋಡ್‌ ಮೆಟ್ರೋ ಮಾರ್ಗ ಉದ್ಘಾಟನೆ

ಬೆಂಗಳೂರು : ಮೈಸೂರು ರಸ್ತೆಯ ನಾಯಂಡಹಳ್ಳಿ- ಕೆಂಗೇರಿ ನಡುವಿನ ವಿಸ್ತರಿತ ನಮ್ಮ ಮೆಟ್ರೊ 2ನೇ ಹಂತದ ಮಾರ್ಗಕ್ಕೆ ಚಾಲನೆ ದೊರೆತಿದೆ. ರೈಲು ಮಾರ್ಗ ನಾಳೆ (ಸೋಮವಾರ) ದಿಂದ ಸಂಚಾರಕ್ಕೆ ಮುಕ್ತವಾಗಲಿದೆ. ಜನ ನಿಬಿಡ ಸಮಯದಲ್ಲಿ 7 ರಿಂದ 8 ನಿಮಿಷಕ್ಕೆ ಒಂದು ರೈಲು ಓಡಾಡಲಿದ್ದು, ಉಳಿದ ಅವಧಿಯಲ್ಲಿ 10 ರಿಂದ 12 ನಿಮಿಷಕ್ಕೊಂದು ರೈಲು ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಡುವೆ ಸಂಚಾರ ಮಾಡಲಿವೆ.

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ.ಮೀ ಮೆಟ್ರೋ ನೇರಳೆ ಮಾರ್ಗ ಇದಾಗಿದ್ದು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾಗೂ ಕೇಂದ್ರ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಬೆಳಗ್ಗೆ ಚಾಲನೆ ನೀಡಿದ್ದಾರೆ. ಈ ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳಿರುವ ಮಾರ್ಗ ಇದಾಗಿದೆ. 2019ರಲ್ಲಿ ಉದ್ಘಾಟನೆಯಾಗಬೇಕಿದ್ದ ಈ ಮೆಟ್ರೊ ಮಾರ್ಗ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ 2 ವರ್ಷ ತಡವಾಗಿ ಸಂಚಾರಕ್ಕೆ ಮುಕ್ತವಾಗಿದೆ.

ಸುಮಾರು 1560 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರೋ ಮಾರ್ಗ ನಿರ್ಮಾಣಗೊಂಡಿದೆ. ನಿತ್ಯವೂ ಸುಮಾರು 75 ಸಾವಿರ ಪ್ರಯಾಣಿಕರು ಇದೇ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ನೇರಳೆ ಮಾರ್ಗವಾಗಿದ್ದು, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ ಮತ್ತು ಕೆಂಗೇರಿ ಬಸ್ ನಿಲ್ದಾಣ ಸೇರಿದಂತೆ ಒಟ್ಟು ಆರು ನಿಲ್ದಾಣಗಳನ್ನು ಹೊಂದಿದೆ. ಆರ್.ಅಶೋಕ್, ವಿ ಮುನಿರತ್ನ, ವಿ ಸೋಮಣ್ಣ, ಸಂಸದ ತೇಜಸ್ವಿನಿ ಸೂರ್ಯ ಸೇರಿದಂತೆ ಮೆಟ್ರೋ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ : ಎದೆ ತುಂಬಿ ಬಂತು ಸೂರ್ಯನ ಹಾಡು ; ಕೈಮುಗಿದಿದೆ ಕರುನಾಡು

ಇದನ್ನೂ ಓದಿ : Ravi Katapadi : ಡಾರ್ಕ್ ಅಲೈಟ್ ವೇಷ ತೊಟ್ಟು 6 ಮಕ್ಕಳ ಜೀವ ಉಳಿಸಲು ಮುಂದಾದ ರವಿ ಕಟಪಾಡಿ

Comments are closed.