ಕೊರೊನಾ ಕರ್ಪ್ಯೂ ಬೆನ್ನಲ್ಲೇ ಲಾಕ್ ಡೌನ್  ಜಾರಿ..!! ಸರಕಾರಕ್ಕೆ ಸಲಹೆ ಕೊಟ್ಟ ಕೋವಿಡ್ ತಾಂತ್ರಿಕ ಸಮಿತಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲೀಗ ಕೊರೊನಾ ಕರ್ಪ್ಯೂ ಜಾರಿ ಮಾಡಲಾಗಿದೆ. ಇದೀಗ ಕರ್ಪ್ಯೂ ಬೆನ್ನಲ್ಲೇ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಯಾಗುವುದು ಖಚಿತ.

ಕೊರೊನಾ ಎರಡನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ತುರ್ತು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ನಡೆಯಿತು. ರಾಜ್ಯದಲ್ಲಿ ಎಪ್ರಿಲ್ ಅಂತ್ಯಕ್ಕೆ ದಿನವೊಂದಕ್ಕೆ ಬರೋಬ್ಬರಿ 20 ಸಾವಿರಕ್ಕು ಅಧಿಕ ಪ್ರಕರಣ ದಾಖಲಾಗಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ 10 ದಿನ ಲಾಕ್ ಡೌನ್ ಘೋಷಣೆ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಸದ್ಯ ರಾಜ್ಯದ 8 ನಗರಗಳಲ್ಲಿ ಕೊರೊನಾ ಕರ್ಪ್ಯೂ ಜಾರಿಯಲ್ಲಿದ್ದು ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಮತ್ತೆ 10 ದಿನ ಲಾಕ್ ಡೌನ್ ಜಾರಿ ಮಾಡಬೇಕೆಂಬ ಮಾತು ತಜ್ಞರಿಂದ ಕೇಳಿಬಂದಿದೆ. ಆದರೆ ಲಾಕ್ ಡೌನ್ ಮಾಡಲು ಮುಖ್ಯಮಂತ್ರಿಗಳಿಗೆ ಮನಸಿಲ್ಲ. ಸರಕಾರ ಕೂಡ ಸಿದ್ದವಿಲ್ಲ. ಹೀಗಾಗಿ ಲಾಕ್ ಡೌನ್ ಹೊರತಾಗಿ ಕೊರೋನಾ ನಿಯಂತ್ರಣಕ್ಕಾಗಿ ಅಗತ್ಯ ಸಲಹೆ ನೀಡುವಂತೆ ಸಚಿವ ಡಾ.ಕೆ.ಸುಧಾಕರ್ ಅವರು ತಜ್ಞರಿಗೆ ತಿಳಿಸಿದ್ದಾರೆ.

Comments are closed.