ನವದೆಹಲಿ : ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಈ ನಡುವಲ್ಲೇ ಲಸಿಕೆ ಪಡೆದುಕೊಂಡವರಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಭರ್ಜರಿ ಆಫರ್ ಘೋಷಣೆ ಮಾಡಿದೆ.
ಕೊರೊನಾ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ಭಾರತದಲ್ಲಿ ವಯಸ್ಕರೆಲ್ಲರಿಗೂ ಲಸಿಕೆ ಹಾಕಲು ಸರ್ಕಾರ ಉದ್ದೇಶಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಲಸಿಕೆ ಪಡೆಯಲು ಜನ ಹಿಂಜರಿಯುತ್ತಿದ್ದಾರೆ, ಅಲ್ಲಿ ಹರಡಿರುವ ವದಂತಿಗಳಿಂದ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದೆ.
ಹೀಗಾಗಿ ಲಸಿಕೆ ಪಡೆಯುವುದನ್ನು ಉತ್ತೇಜೀಸಲು ಅನೇಕ ಆಫರ್ ಗಳನ್ನು ನೀಡಲಾಗುತ್ತಿದೆ. ಈ ನಡುವೆ ಇಂಡಿಗೋ ವಿಮಾನ ಸಂಸ್ಥೆ ಲಸಿಕೆ ಪಡೆದು ಪ್ರಯಾಣಿಸುವವರಿಗೆ ಶೇ 10ರಷ್ಟು ರಿಯಾಯತಿ ಘೋಷಿಸಿದೆ. ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಪ್ರಯಾಣಿಸುವ ದೇಶಿಯ ಪ್ರಯಾಣಿಕರಿಗೆ ಮಾತ್ರ ಈ ಆಫರ್ ಲಭ್ಯವಿದ್ದು, ಒಂದು ಹಾಗೂ ಎರಡು ಡೋಸ್ ಪಡೆದವರಿಗೆ ಈ ರಿಯಾಯತಿ ಸಿಗಲಿದೆ.