ಆಂಧ್ರ ಸಿಎಂ ಜಗಮೋಹನ್ ರೆಡ್ಡಿ ವಿರುದ್ದ ಹೈಕೋರ್ಟ್ ನಲ್ಲಿ 11 ಸುಮೋಟೋ ಪ್ರಕರಣ ದಾಖಲು

ವಿಜಯವಾಡ : ಆಂಧ್ರಪ್ರದೇಶಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ವಿರೋಧ ಪಕ್ಷದಲ್ಲಿದ್ದ ವೇಳೆ ನ್ಯಾಯಾಲಯ ದ ವಿರುದ್ದ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಆಂಧ್ರ ಪ್ರದೇಶ ಹೈಕೋರ್ಟ್ 11 ಸುಮೋಟೋ  ಪ್ರಕರಣ ದಾಖಲಿಸಿಕೊಂಡಿದೆ.

2016 ರಲ್ಲಿ ಜಗನ್ ಮೋಹನ್ ರೆಡ್ಡಿ ವಿರೋಧ ಪಕ್ಷದಲ್ಲಿದ್ದಾಗ ಅಂದು ಮುಖ್ಯಮಂತ್ರಿಯಾಗಿದ್ದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ವಿರುದ್ಧ ಅಮರಾವತಿ ಭೂಮಿ ಅಕ್ರಮದ ಆರೋಪ ಮಾಡಿದ್ದರು. ಈ ವೇಳೆ ನ್ಯಾಯಾಲಯದ ವಿರುದ್ದ ಹೇಳಿಕೆ ನೀಡಿದ್ದರು.

ಈ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ಕಣ್ಣಂಗೇಟಿ ಲಲಿತಾ ಅವರು ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದಾರೆ‌,  ಹೈಕೋರ್ಟ್ ಆಡಳಿತಾತ್ಮಕ ಸಮಿತಿ ಶಿಫಾರಸ್ಸಿನಂತೆ ಜಗಮೋಹನ್ ರೆಡ್ಡಿ ಅವರ ವಿರುದ್ದ ಸುಮೊಟು ಕೇಸ್ ದಾಖಲಿಸಿಕೊಳ್ಳಲಾಗಿದೆ

ಹೈಕೋರ್ಟ್ ತನ್ನ ಅಧಿಕಾರವನ್ನು ಬಳಸಿಕೊಂಡು ಸಿಆರ್ ಪಿಸಿ ಸೆಕ್ಷನ್ 397, 401, 482 ಮತ್ತು 483 ರ ಅಡಿಯಲ್ಲಿ ಸುಮೊಟೋ ಕೇಸ್ ದಾಖಲಿಸಲು ಸಾಧ್ಯವಿಲ್ಲ ಎಂದು ಅಡ್ವೊಕೇಟ್ ಜನರಲ್ ಶ್ರೀರಾಮ್ ವಾದಿಸಿದರು. ಆದರೆ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತಾತ್ಮಕ ನಿರ್ಧಾರವನ್ನು ಆಧರಿಸಿ ಸುಮೊಟು ಕೇಸ್ ದಾಖಲಿಸ ಲಾಗಿದೆ ಎಂದು ಹೇಳಿದ್ದಾರೆ.

Comments are closed.