ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಏಪ್ರಿಲ್ 10ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ 19 ಬೂಸ್ಟರ್ ಡೋಸ್ (Covid-19 booster dose) ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಕೊರೊನಾ ಲಸಿಕಾ ಅಭಿಯಾನದ ಅಡಿಯಲ್ಲಿ ಮೊದಲ ಹಾಗೂ ಎರಡನೇ ಡೋಸ್‌ಗಳನ್ನು ಲಸಿಕೆಗಳನ್ನು ಉಚಿತವಾಗಿ ನೀಡಲಾಗಿತ್ತು. ಇನ್ನು ಮೂರನೇ ಡೋಸ್ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಸಿಗಲಿದೆ ಎನ್ನಲಾಗಿದೆ.
18 ಅಥವಾ ಅದಕ್ಕಿಂತ ಮೇಲ್ಪಟ್ಟವರು ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿ 9 ತಿಂಗಳುಗಳನ್ನು ಪೂರೈಸಿದ್ದರೆ ಅಂಥವರು ಬೂಸ್ಟರ್ ಡೋಸ್ಗೆ ಅರ್ಹರಿರಲಿದ್ದಾರೆ. ಭಾನುವಾರದಿಂದ ಎಲ್ಲಾ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ.
ಇಲ್ಲಿಯವರೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60+ ಜನಸಂಖ್ಯೆಯ ಗುಂಪಿಗೆ 2.4 ಕೋಟಿಗೂ ಹೆಚ್ಚು ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದೆ.
ದೇಶದಲ್ಲಿ 15 ವರ್ಷ ಮೇಲ್ಪಟ್ಟ 96 ಪ್ರತಿಶತ ಜನರು ಕನಿಷ್ಟ 1 ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಹಾಗೂ 15 ವರ್ಷ ಮೇಲ್ಪಟ್ಟ 83 ಪ್ರತಿಶತ ಮಂದಿ ಎರಡೂ ಡೋಸ್ ಲಸಿಕೆಗಳನ್ನು ಸ್ವೀಕರಿಸಿದ್ದಾರೆ.
ಏಪ್ರಿಲ್ 6 ರಂದು, ಮುಂಬೈನ ನಾಗರಿಕ ಸಂಸ್ಥೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಗರದಲ್ಲಿ ಹೊಸ XE ರೂಪಾಂತರದ ಕರೋನವೈರಸ್ ಪ್ರಕರಣ ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ. ಆದರೆ, ಕೇಂದ್ರ ಆರೋಗ್ಯ ಸಚಿವಾಲಯದ ನಿಕಟ ಮೂಲಗಳು ರೋಗಿಯ ಮಾದರಿಯ ಜಿನೋಮ್ ಅನುಕ್ರಮವು XE ರೂಪಾಂತರದ ಉಪಸ್ಥಿತಿಯನ್ನು ಸೂಚಿಸುವುದಿಲ್ಲ ಎಂದು ಹೇಳಿದೆ.
ಇದನ್ನು ಓದಿ : Shashi Tharoor : ಸಂಸತ್ತಿನಲ್ಲಿ ಸುಪ್ರಿಯಾ ಸುಳೆ ಜೊತೆಗಿನ ಸಂಭಾಷಣೆಗೆ ತರೂರ್ ಸ್ಪಷ್ಟನೆ
ಇದನ್ನೂ ಓದಿ : Zameer Ahmed Khan : ರಾಹುಲ್ ಕಾರ್ಯಕ್ರಮಕ್ಕೂ ಗೈರಾದ್ರು ಜಮೀರ್ : ಸದ್ಯದಲ್ಲೇ ಕಾಂಗ್ರೆಸ್‌ಗೆ ಗುಡ್‌ಬೈ
Covid-19 booster dose for all above 18 years at private hospitals from April 10