PM Kisan: ರೈತರೇ ! ನಿಮ್ಮ ಹತ್ತಿರದ CSC ಕೇಂದ್ರಗಳಿಗೆ ಭೇಟಿ ಕೊಡಿ : OTP ಮೂಲಕ ದೃಢೀಕರಿಸಲ್ಪಡುತ್ತಿದ್ದ eKYC ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ

ಕಳೆದ ವಾರ ಸರ್ಕಾರವು ಪಿ ಎಮ್‌ ಕಿಸಾನ್‌ ನಿಧಿ (PM Kisan)ಗೆ eKYC ಪ್ರಕ್ರಿಯೆ ಪೂರ್ಣಗೊಳಿಸುವ ಗಡುವನ್ನು 22 ಮೇ 2022 ರವರೆಗೆ ವಿಸ್ತರಿಸಲಾಗಿತ್ತು. ಆದರೆ, ಪಿಎಮ್‌ ಕಿಸಾನ್‌ ಗಡವು ವಿಸ್ತರಿಸಿದ ನಂತರ ಅಧಿಕೃತ ವೆಬ್‌ಸೈಟ್‌ನ eKYC ಆಪ್ಷನ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪಿ ಎಮ್‌ ಕಿಸಾನ್‌ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು 100 ಪ್ರತಿಶತ ಭಾರತ ಸರ್ಕಾರದಿಂದಲೇ ಹಣವನ್ನು ಹೊಂದಿದೆ. ಆ ಹಣವು ರೈತರಿಗೆ ನೇರವಾಗಿ ಅವರ ಬ್ಯಾಂಕ್‌ ಖಾತೆಗೇ ಜಮಾ ಆಗುತ್ತದೆ.

ಪಿ ಎಮ್‌ ಕಿಸಾನ್‌ ವೆಬ್‌ಸೈಟ್‌ ಹೇಳುವುದಾದರೂ ಏನು ?

ಪಿ ಎಮ್‌ ಕಿಸಾನ್‌ ಪೋರ್ಟಲ್‌ನ ಮಾಹಿತಿಯ ಪ್ರಕಾರ ಪಿ ಎಮ್‌ ಕಿಸಾನ್‌ ನೊಂದಾಯಿತ ರೈತರಿಗೆ eKYC ಕಡ್ಡಾಯವಾಗದೆ. ಫಲಾನುಭವಿಗಳು ದಯವಿಟ್ಟು ತಮ್ಮ ಹತ್ತಿರದ CSC ಕೇಂದ್ರಗಳಿಗೆ ಹೋಗಿ ಬಯೋಮೆಟ್ರಿಕ್‌ ದೃಢೀಕರಣವನ್ನು ನೀಡತಕ್ಕದ್ದು. OTP ದೃಢೀಕರಣದ ಮೂಲಕ ಆದಾರ್‌ ಆದಾರಿತ eKYC ಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪಿ ಎಮ್‌ ಕಿಸಾನ್‌ ಫಲಾನುಭವಿಗಳು eKYC ನೀಡಲು ಗಡುವನ್ನು 31 ಮೇ 2022 ರವರೆಗೆ ವಿಸ್ತರಿಸಲಾಗಿದೆ.

11 ನೇ ಕಂತಿಗೆ eKYC ಕಡ್ಡಾಯವಾಗಿದೆ:

ಪಿ ಎಮ್‌ ಕಿಸಾನ್‌ ಯೋಜನೆಯ ಫಲಾನುಭವಿಗಳು 2000 ರೂಪಾಯಿಗಳ 11ನೇ ಕಂತಿಗಾಗಿ eKYC ಯನ್ನು ಅಪ್ಡೇಟ್‌ ಮಾಡಲೇಬೇಕಾಗಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಪ್ರತಿಯೊಬ್ಬ ರೈತರಿಗೂ ವಾರ್ಷಿಕ 6000 ರೂಪಾಯಿಗಳನ್ನು 3 ಕಂತುಗಳಲ್ಲಿ 2000 ರೂಪಾಯಿಗಳಂತೆ ಒದಗಿಸಿದೆ. ಈ ಯೋಜನೆಯು ಫಲಾನುಭವಿಗಳ ಆಧಾರ್‌ಗೆ ಲಿಂಕ್‌ ಆಗಿರುತ್ತದೆ. ಮತ್ತು ಅದರ ಡೇಟಾಬೇಸ್‌ ರೈತರ ಪ್ರಮುಖ ಮಾಹಿತಿ ಮತ್ತು ಭೂ ದಾಖಲೆಗಳಲ್ಲಿರುವ ಕುಟುಂಬದ ಎಲ್ಲಾ ಸದಸ್ಯರುಗಳ ಹೆಸರುಗಳ ವಿವರ ಹೊಂದಿರುತ್ತದೆ.

ಪೂರ್ವ ಭಾರತದ ಕೆಲವು ರಾಜ್ಯಗಳಲ್ಲಿ ಭೂ ಮಾಲಿಕತ್ವವು ಜಾತಿಯ ಆಧಾರದ ಮೇಲೆಯೇ ಇರುವುದರಿಂದ ಭೂಮಿ ಹೊಂದಿದ ರೈತರ ಮೌಲ್ಯಮಾಪನ ಮಾಡುವುದು ಸಾಧ್ಯವಾಗುತ್ತಿಲ್ಲ. ಅಂತಹ ರಾಜ್ಯ ಅಥವಾ ಪ್ರದೇಶಗಳಲ್ಲಿ ಪರ್ಯಾಯ ಮಾರ್ಗಗಳ ಮೂಲಕ ಯೋಜನೆ ಜಾರಿಗೊಳಿಸಬೇಕಾಗಿದೆ. ಇದೇ ವೇಳೆ ಲೋಕಸಭೆಯಲ್ಲಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌ ಅವರು ಸರ್ಕಾರವು ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಮ್‌ ಕಿಸಾನ್‌ ಯೋಜನೆ ಜಾರಿಗೆ ತರಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳತ್ತದೆ ಎಂದು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ಇದನ್ನೂ ಓದಿ : Agrifi App Farmers Loan : ಕೃಷಿ ವ್ಯಾಪಾರಸ್ಥರಿಗೆ ಸಾಲ ಒದಗಿಸಲಿದೆ ‘ಅಗ್ರಿ ಫೈ’ ಆ್ಯಪ್; ಸಾಲ ಪಡೆಯಲು ಏನು ಮಾಡಬೇಕು?

ಇದನ್ನೂ ಓದಿ : Arecanut Farming : ಭಾರೀ ಬೇಡಿಕೆ ಪಡೆದುಕೊಂಡ ಈ ಅಡಿಕೆ ಗಿಡ! ಕುಬ್ಜ ತಳಿ ಅಡಿಕೆ ಗಿಡದ ಬಗ್ಗೆ ನಿಮಗೆ ತಿಳಿದಿದೆಯೇ?

(PM Kisan Aadhaar based ekyc via otp authentication temporarily suspended)

Comments are closed.