Covishield Boosterದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಭಾನುವಾರದಿಂದ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ನ್ನು ಸ್ವೀಕರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ಲಸಿಕೆಯ 2ನೇ ಡೋಸ್ ಸ್ವೀಕರಿಸಿ 9 ತಿಂಗಳು ಪೂರೈಸಿದವರು ಮೂರನೇ ಡೋಸ್ ಲಸಿಕೆಗೆ ಅರ್ಹರಿರಲಿದ್ದಾರೆ. ಕೊರೊನಾ ಲಸಿಕೆ ಬೂಸ್ಟರ್ ಡೋಸ್ ವಿಚಾರದಲ್ಲಿ ಕೇಂದ್ರದ ನಡೆಯನ್ನು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದರ್ ಪೂನವಲ್ಲಾ ಸ್ವಾಗತಿಸಿದ್ದಾರೆ .
ಪ್ರಸ್ತುತ ಸಂದರ್ಭದಲ್ಲಿ ಕೇಂದ್ರವು ಕೊರೊನಾ ಲಸಿಕೆಗಳ ವಿಚಾರದಲ್ಲಿ ಸಮಯೋಚಿತ ನಿರ್ಧಾರವನ್ನು ಕೈಗೊಂಡಿದೆ. ಹಲವಾರು ದೇಶಗಳು ಬೂಸ್ಟರ್ ಡೋಸ್ ಪಡೆಯದವರಿಗೆ ತಮ್ಮ ದೇಶಕ್ಕೆ ಎಂಟ್ರಿ ನೀಡಲು ನಿರ್ಬಂಧ ಹೇರುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರವು ಈ ನಿರ್ಧಾರವನ್ನು ಕೈಗೊಂಡಿರುವುದರಿಂದ ಅನೇಕರಿಗೆ ರಿಲೀಫ್ ಸಿಕ್ಕಂತಾಗಿದೆ ಎಂದು ಹೇಳಿದರು.
ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಬೂಸ್ಟರ್ ಡೋಸ್ಗಳನ್ನು ನೀಡಿತ್ತು. ಆದರೆ 18 ವರ್ಷ ಮೇಲ್ಪಟ್ಟವರು ಮಾತ್ರ ಮೂರನೇ ಡೋಸ್ ಲಸಿಕೆಯನ್ನು ಹಣ ಕೊಟ್ಟು ಸ್ವೀಕರಿಸಬೇಕು. ಈ ಬಗ್ಗೆ ಪೂನವಲ್ಲಾ ಮಾಹಿತಿ ನೀಡಿದ್ದು ಕೋವಿಶೀಲ್ಡ್ ಮೂರನೇ ಡೋಸ್ ಲಸಿಕೆಯು 600 ರೂಪಾಯಿ ಮತ್ತು ತೆರಿಗೆಯ ಮೊತ್ತವನ್ನು ಸೇರಿದೆ ಹಾಗೂ ಅನುಮೋದನೆ ಪಡೆದ ಬಳಿಕ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ಗಳು 900 ರೂಪಾಯಿ ಹಾಗೂ ತೆರಿಗೆ ಹಣವನ್ನು ಒಳಗೊಂಡಿರಲಿದೆ ಎಂದು ಹೇಳಿದ್ದಾರೆ.
ಕೋವಿಶೀಲ್ಡ್ ಈಗಾಗಲೇ ಬೂಸ್ಟರ್ ಡೋಸ್ಗೆ ಅನುಮೋದನೆ ಪಡೆದಿದೆ. ಅದೇ ರೀತಿ ಕೋವ್ಯಾಕ್ಸಿನ್ ಕೂಡ ಅನುಮೋದನೆ ಪಡೆಯುವ ಹಂತದಲ್ಲಿದೆ ಎಂದು ಪೂನವಲ್ಲಾ ಹೇಳಿದರು. ಬೂಸ್ಟರ್ ಡೋಸ್ಗಳನ್ನು ನೀಡುವ ಆಸ್ಪತ್ರೆಗಳು ಹಾಗೂ ವಿತರಕರಿಗೆ ಸೀರಂ ಇನ್ಸ್ಟಿಟ್ಯೂಟ್ ದೊಡ್ಡ ಮಟ್ಟದಲ್ಲಿ ರಿಯಾಯಿತಿ ನೀಡುತ್ತದೆ ಎಂದು ಪೂನವಲ್ಲಾ ಹೇಳಿದರು.
ಇದನ್ನು ಓದಿ : Covid-19 booster dose : ದೇಶದಲ್ಲಿ ಭಾನುವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್
ಇದನ್ನೂ ಓದಿ : Shashi Tharoor : ಸಂಸತ್ತಿನಲ್ಲಿ ಸುಪ್ರಿಯಾ ಸುಳೆ ಜೊತೆಗಿನ ಸಂಭಾಷಣೆಗೆ ತರೂರ್ ಸ್ಪಷ್ಟನೆ
Covishield Booster At ₹ 600 Plus Tax: Adar Poonawalla