Ayodhya Sarayu River : ಅಯೋಧ್ಯೆಯ ಸರಯೂ ನದಿಯಲ್ಲಿ ತೀರ್ಥಸ್ನಾನದ ನಡುವಲ್ಲೇ ರೋಮ್ಯಾನ್ಸ್‌ ಮಾಡಿದ ದಂಪತಿಗೆ ಧರ್ಮದೇಟು

ಅಯೋಧ್ಯೆ : ಸುತ್ತಲೂ ಭಕ್ತರು ನದಿಯಲ್ಲಿ ತೀರ್ಥಸ್ನಾನ ಮಾಡುತ್ತಿದ್ದರು. ಆದರೆ ತೀರ್ಥಸ್ನಾನಕ್ಕೆಂದು ನದಿಗೆ ಇಳಿದಿದ್ದ ದಂಪತಿ ಮಾತ್ರ ಪುಣ್ಯಕ್ಷೇತ್ರ ಅನ್ನೋದನ್ನೂ ಮರೆತು ನದಿಯಲ್ಲಿ ರೋಮ್ಯಾನ್ಸ್‌ ಆರಂಭಿಸಿದ್ದರು. ದಂಪತಿ ಚುಂಬನ ಶುರುವಿಡುತ್ತಲೇ ಅಲ್ಲಿದ್ದ ಭಕ್ತರು ದಂಪತಿಯನ್ನು ನದಿಯಿಂದ ಹೊರ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಈ ಘಟನೆ ನಡೆದಿರೋದು ಅಯೋಧ್ಯೆಯ ಸರಯೂ ( Ayodhya Sarayu River) ನದಿಯಲ್ಲಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಯೋಧ್ಯೆಯ ಸರಯೂ ನದಿಯ ರಾಮ್‌ ಕಿ ಪೌಡಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಯಾವಾಗ ನಡೆದಿದೆ ಅನ್ನೋದು ಖಚಿತವಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿರುವ ಕುರಿತು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ವಿಡಿಯೋದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯ ಜೊತೆಗೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ. ಈ ವೇಳೆಯಲ್ಲಿ ಸುತ್ತಲೂ ಇದ್ದವರು ತೀರ್ಥಸ್ನಾನದಲ್ಲಿ ಮಗ್ನರಾಗಿದ್ದರು. ಆದರೆ ದಂಪತಿ ಕ್ರಮೇಣ ರೊಮ್ಯಾನ್ಸ್‌ ಮಾಡುವುದಕ್ಕೆ ಆರಂಭಿಸಿದ್ದಾರೆ. ಇದನ್ನು ಕಂಡ ಅಲ್ಲಿಯೇ ಇದ್ದ ಗುಂಪೊಂದು ದಂಪತಿಯ ಮೇಲೆ ಹಲ್ಲೆ ನಡೆಸಿದೆ.

cupple kisses in Ayodhya saryu river piligrimege Arround Viral video

ಪತಿಯ ಮೇಲೆ ಅಲ್ಲಿದ್ದ ಗುಂಪು ಹಲ್ಲೆ ಮಾಡಿರುವುದನ್ನು ಕಂಡ ಪತ್ನಿ ಕಂಗಾಲಾಗಿದ್ದಾಳೆ. ಅಲ್ಲಿದ್ದ ಕೆಲ ಭಕ್ತರು ಘಟನೆಯ ಕುರಿತು ವಿಡಿಯೋ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣ ದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದು, ಪರ ವಿರೋಧದ ಚರ್ಚೆ ಆರಂಭವಾಗಿದೆ.

ಘಟನೆಯ ಕುರಿತು ಇದೀಗ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೊಂದು ನೈತಿಕ ಪೊಲೀಸ್‌ ಗಿರಿ ಅನ್ನೋ ಆರೋಪ ಕೇಳಿಬರುತ್ತಿದೆ. ಆದರೆ ಈ ಕುರಿತು ಯಾವುದೇ ಪಕರಣ ದಾಖಲಾಗಿಲ್ಲ, ಆದರೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಶೈಲೇಶ್‌ ಪಾಂಡೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಆದರೆ ಅಯೋಧ್ಯೆಯಲ್ಲಿ ಇಂತಹ ಸಭ್ಯತೆಯನ್ನು ಎಂದಿಗೂ ಸಹಿಸುದಿಲ್ಲ. ನದಿಯಲ್ಲಿ ಸ್ನಾನ ಮಾಡುವಾಗ ಪತ್ನಿಯನ್ನು ಚುಂಬಿಸಿರುವುದು ಸರಿಯಲ್ಲ ಎಂದು ವ್ಯಕ್ತಿಯೋರ್ವರು ಹೇಳಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : 10 ರೂಪಾಯಿಯಲ್ಲಿ ದೃಷ್ಟಿ ತೆಗೆದು 25 ಸಾವಿರಕ್ಕೆ ಡಿಮ್ಯಾಂಡ್‌ : ಗೃಹ ಪ್ರವೇಶದ ಮನೆಯಲ್ಲಿ ಮಂಗಳಮುಖಿಯರ ದಾಂಧಲೆ

ಇದನ್ನೂ ಓದಿ : ಡೇಟಿಂಗ್ ಆ್ಯಪ್‌ ಮೋಹ : ಚೆಲುವೆ ಅಂದಕ್ಕೆ ಮರುಳಾಗಿ 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌

Cupple kisses in Ayodhya Sarayu River pilgrimage Around Viral video

Comments are closed.