ದೆಹಲಿ :Gang-Raped : ರಾಷ್ಟ್ರ ರಾಜಧಾನಿ ದೆಹಲಿಯ ಕೇಂದ್ರೀಯ ವಿದ್ಯಾಲಯದಲ್ಲಿ 11 ವರ್ಷದ ವಿದ್ಯಾರ್ಥಿನಿಯರ ಮೇಲೆ ಇಬ್ಬರು ಸೀನಿಯರ್ಗಳು ಸಾಮೂಹಿಕ ಅತ್ಯಾಚಾರವೆಸಗಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕೇಂದ್ರೀಯ ವಿಶ್ವ ವಿದ್ಯಾಲಯದ ಶೌಚಾಲಯದಲ್ಲಿ ಈ ಕೃತ್ಯ ಎಸಗಲಾಗಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆ ಜುಲೈ ತಿಂಗಳಲ್ಲಿಯೇ ನಡೆದಿದೆ. ದೆಹಲಿ ಮಹಿಳಾ ಆಯೋಗವು ಈ ವಿಚಾರದ ಬಗ್ಗೆ ಬೆಳಕು ಚೆಲ್ಲಿದ ಬಳಿಕ ಈ ವಾರದ ಆರಂಭದಲ್ಲಿ ಬಾಲಕಿಯ ಕುಟುಂಬವು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಈ ಪ್ರಕರಣ ಸಂಬಂಧ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರು ಹಾಗೂ ಶಾಲಾ ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಜುಲೈ ತಿಂಗಳಲ್ಲಿ ಇಬ್ಬರು ಸೀನಿಯರ್ಗಳು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಬಾಲಕಿ ಮಾಹಿತಿ ನೀಡಿದ್ದಾಳೆ.ನಾನು ತನ್ನ ತರಗತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದೆ. ಅಲ್ಲದೇ ಈ ಬಗ್ಗೆ ನಾನು ಅವರ ಬಳಿಯಲ್ಲಿ ಕ್ಷಮೆಯಾಚನೆ ಕೂಡ ಮಾಡಿದ್ದೆ. ಆದರೆ ನನ್ನನ್ನು ನಿಂದಿಸಿದ ಸೀನಿಯರ್ಗಳು ನನ್ನನ್ನು ವಾಶ್ರೂಮ್ನ ಒಳಗೆ ಕರೆದುಕೊಂಡು ಹೋದರು. ವಾಶ್ರೂಮ್ಗೆ ಒಳಗಿನಿಂದ ಬೀಗವನ್ನು ಹಾಕಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
ಈ ಘಟನೆ ಬಗ್ಗೆ ಬಾಲಕಿಯು ಶಿಕ್ಷಕಿಗೆ ದೂರನ್ನು ನೀಡಿದ್ದಳು . ಇದಾದ ಬಳಿಕ ಬಾಲಕರನ್ನು ಶಾಲೆಯಿಂದ ಹೊರಕಳಿಸಲಾಯ್ತು ಹಾಗೂ ಈ ಪ್ರಕರಣವನ್ನು ಅಲ್ಲಿಯೇ ಮುಚ್ಚಿ ಹಾಕಲಾಗಿತ್ತು. ಆದರೆ ಹೇಗೋ ಈ ಘಟನೆಯ ಬಗ್ಗೆ ದೆಹಲಿ ಮಹಿಳಾ ಆಯೋಗ ಮಾಹಿತಿ ತಿಳಿದುಕೊಂಡಿತ್ತು. ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡ ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರು ಹಾಗೂ ಶಾಲಾ ಪ್ರಾಂಶುಪಾಲರಿಗೆ ಈ ಪ್ರಕರಣ ಸಂಬಂಧ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವರದಿಯನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಮಹಿಳಾ ಆಯೋಗವು ಎಫ್ಐಆರ್ ಪ್ರತಿ ಹಾಗೂ ಈ ವಿಷಯದಲ್ಲಿ ಈವರೆಗೆ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರನ್ನು ಕೇಳಿದೆ. ಇದರ ಜೊತೆಯಲ್ಲಿ ಈ ವಿಚಾರವನ್ನು ಪೊಲೀಸರಿಂದ ಮುಚ್ಚಿಟ್ಟ ಶಾಲಾ ಶಿಕ್ಷಕರು ಹಾಗೂ ಇತರೆ ಯಾವುದೇ ಸಿಬ್ಬಂದಿ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿಯನ್ನು ಕೇಳಿದೆ.
ಇದನ್ನು ಓದಿ : India vs South Africa 1st ODI: ಪದಾರ್ಪಣೆಯ ಪಂದ್ಯದಲ್ಲೇ ಭಾರತವನ್ನು ಸೋಲಿಸಿದ ಧೋನಿ ಶಿಷ್ಯ
ಇದನ್ನೂ ಓದಿ : Priyanka chopra:ಇರಾನ್ ಹಿಜಾಬ್ ವಿವಾದ :ಮಹಿಳೆಯರಿಗೆ ಬೆಂಬಲ ನೀಡಿದ ಪ್ರಿಯಾಂಕ ಚೋಪ್ರಾ