Instagram Like 2 Murder : ಇನ್ಸ್ಟಾಗ್ರಾಂ ನಲ್ಲಿ ಲೈಕ್‌,ಕಮೆಂಟ್‌ ವಿಚಾರಕ್ಕೆ ಜಗಳ: ಇಬ್ಬರ ಕೊಲೆ

ನವದೆಹಲಿ : ( Instagram Like 2 Murder) ಇನ್ಸ್ಟಾಗ್ರಾಂನಲ್ಲಿ ಲೈಕ್‌ ಮತ್ತು ಕಮೆಂಟ್‌ ವಿಚಾರವಾಗಿ ಆರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಕಾರಣದಿಂದ ಅನೇಕ ಕೆಟ್ಟ ಘಟನೆಗಳು ನಮ್ಮ ಸುತ್ತಮುತ್ತಲಲ್ಲಿ ನಡೆಯುತ್ತದೆ. ಇನ್ಸ್ಟಾಗ್ರಾಂಂ‌ , ಫೇಸ್ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಸಹವಾಸದಿಂದ ಅದೆಷ್ಟೋ ಜನ ತಮ್ಮ ಜೀವ ಮತ್ತು ಜೀವನವನ್ನು ಕಳೆದುಕೊಂಡಿದ್ದಾರೆ. ಅಂತಹದೇ ಒಂದು ಘಟನೆ ನವದೆಹಲಿಯಲ್ಲಿ ನಡೆದಿದೆ. ಇನ್ಸ್ಟಾಗ್ರಾಂನಲ್ಲಿ ಲೈಕ್‌ ಮತ್ತು ಕಮೆಂಟ್‌ ವಿಚಾರವಾಗಿ ಜಗಳ ನಡೆದು ಇಬ್ಬರು ಕೊಲೆಯಾದ ಘಟನೆಯೊಂದು ನಡೆದಿದೆ.

ಸಾಮಾಜಿಕ ಜಾಲತಾಣವಾಗಿರುವ ಇನ್ಸ್ಟಾಗ್ರಾಂ( Instagram Like 2 Murder) ನಲ್ಲಿ ಪರಿಚಯವಾದ ಮಹಿಳೆ ವಿಚಾರವಾಗಿ ದೆಹಲಿ ಹೊರಭಾಗದ ಭಾಲ್ಸ್ವಾ ಡೈರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಮುಕುಂದಪುರ ಭಾಗ-2 ಪ್ರದೇಶದಲ್ಲಿ ಮಹಿಳೆಯು ತನ್ನನ್ನು ಭೇಟಿ ಮಾಡುವುದಾಗಿ ಇಬ್ಬರಿಗೂ ತಿಳಿಸಿದ್ದಳು. ಆದರೆ ಆ ಸ್ಥಳಕ್ಕೆ ಇಬ್ಬರು ವ್ಯಕ್ತಿಗಳು ಬಂದಾಗ ಅವರಿಬ್ಬರ ಮೇಲೆ ಹಲ್ಲೆ ನಡೆದಿದೆ. ಅನೇಕ ಬಾರಿ ಅವರನ್ನು ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಇಬ್ಬರು ಒದ್ದಾಡುತ್ತಿದ್ದರು . ಅರೋಪಿಗಳು ಚಾಕುವಿನಿಂದ ಇಬ್ಬರಿಗೆ ಇರಿಯುವ ಮೊದಲೇ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : Good Bye Arun Bali : ಗುಡ್‌ ಬೈ ರಿಲೀಸ್ ದಿನವೇ ಬಾಲಿವುಡ್ ಖ್ಯಾತ ನಟ ಆಕ್ಟರ್ ಅರುಣ್‌ ಬಾಲಿ ವಿಧಿವಶ

ಇದನ್ನೂ ಓದಿ : LED TV Blast : ಎಲ್‌ಇಡಿ ಟಿವಿ ಸ್ಪೋಟ : 16 ವರ್ಷದ ಬಾಲಕ ಸಾವು, ಛಿದ್ರವಾಯ್ತು ಕಾಂಕ್ರೀಟ್‌ ಗೋಡೆ

ಇದನ್ನೂ ಓದಿ : Big Breaking : Cheetah Helicopter Crashes : ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ; ಪೈಲಟ್ ಸಾವು

ಘಟನೆ ನಡೆದ ಸ್ಥಳಕ್ಕೆ ಪೋಲೀಸರು ಧಾವಿಸಿದ್ದು, ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯದಲ್ಲಿಯೇ ಇಬ್ಬರೂ ಸಾವನ್ನಪ್ಪಿದ್ದಾರೆ. ಇನ್ಸ್ಟಾಗ್ರಾಂನ ಲೈಕ್ ಮತ್ತು ಕಮೆಂಟ್ ವಿಚಾರದಲ್ಲಿ ಇಬ್ಬರು ಕೊಲೆಯಾಗಿರುವುದು ನಿಜಕ್ಕೂ ದುರಂತ.

(Instagram Like 2 Murder) An incident which started with a like and comment on Instagram ended in a murder in New Delhi.

Comments are closed.