ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವಿಶ್ವದ ಜನರ ಮನ ಗೆದ್ದಿದ್ದಾರೆ. ಕೊರೊನಾ ಸಂಕಷ್ಟದಲ್ಲಿಯೂ ಮೋದಿ ಜನಪ್ರಿಯತೆ ಯಲ್ಲಿ ಜಾಗತಿಕ ನಾಯಕರನ್ನೇ ಮೀರಿಸಿದ್ದಾರೆ. ಅಮೇರಿಕಾದ ಮಾರ್ನಿಂಗ್ ಕನ್ಸಲ್ಟಿಂಗ್ ಪೋಲಿಟಿಕಲ್ ಇಂಟೆಲಿಜೆನ್ಸಿ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ನಮೋ ಎಂದೇ ಖ್ಯಾತಿ ಪಡೆದಿರೋ ಪ್ರಧಾನಿ ನರೇಂದ್ರ ಮೋದಿ ಹಲವು ಜನಪ್ರಿಯ ಯೋಜನೆಗಳ ಮೂಲಕ ದೇಶದ ಜನರಷ್ಟೇ ಅಲ್ಲಾ ವಿಶ್ವದ ಜನರ ಮನಗೆದ್ದಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗಳು ಕೇಂದ್ರ ಸರಕಾರದ ವಿರುದ್ದ ಕೇಳಿಬರುತ್ತಿದ್ದರೂ ಕೂಡ, ಮೋದಿ ಅದೆಲ್ಲವನ್ನೂ ಮೆಟ್ಟಿನಿಂತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಹು ಜನಪ್ರಿಯತೆಯನ್ನು ಪಡೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸಿ ಆಸ್ಟ್ರೇಲಿಯಾ, ಬ್ರಿಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೋರಿಯಾ, ಯುನೈಟೆಡ್ ಕಿಂಗ್ ಡಮ್, ಅಮೇರಿಕಾ ಸೇರಿದಂತೆ ಹಲವು ದೇಶಗಳ ರಾಜಕೀಯ ನಾಯಕರ ರೇಟಿಂಗ್ ಪತ್ತೆ ಮಾಡಿ ಅದನ್ನು ತನ್ನ ಪೋರ್ಟಲ್ ನಲ್ಲಿ ಪ್ರಕಟಿಸುತ್ತಿದೆ.
ಇದೀಗ ಸಮೀಕ್ಷೆಯಲ್ಲಿ ಜಾಗತಿಕ ನಾಯಕರನ್ನೇ ಮೀರಿಸಿದ್ದಾರೆ. ವಿಶ್ವದ ಮೂವರು ನಾಯಕರ ರೇಟಿಂಗ್ ಶೇ.60ಕ್ಕಿಂತ ಹೆಚ್ಚಿದ್ದು, ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಮೋದಿ ದೇಶದಲ್ಲಷ್ಟೇ ಅಲ್ಲಾ ವಿಶ್ವದಲ್ಲೂ ಮಹಾ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.