ಹಿರಿಯ ಸಂಶೋಧಕ ಹ.ಕ.ರಾಜೇಗೌಡ ನಿಧನ : ಕಂಬನಿ ಮಿಡಿದ ಆದಿಚುಂಜನಗಿರಿ ಶ್ರೀಗಳು

ಮೈಸೂರು : ಹಿರಿಯ ಸಂಶೋಧಕ ಹ.ಕ.ರಾಜೇಗೌಡ ನಿಧನರಾಗಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಿರಿಯ ಸಂಶೋಧಕರರಾಗಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೈಸೂರು ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಜಾನಪದ ಅಧ್ಯಯನದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರು, ಕನಕಪುರ ಕಾಲೇಜುಗಳಲ್ಲಿಯೂ ಉಪನ್ಯಾಸಕರಾಗಿ, ಮೈಸೂರು ವಿಶ್ವವಿದ್ಯಾಯಲದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ಭಾಷೆಗಳಲ್ಲಿ ಪ್ರಾವಿಣ್ಯತೆಯನ್ನು ಹೊಂದಿದ್ದ ರಾಜೇಗೌಡರು, ಮರಾಠಿ, ಪಂಜಾಬಿ, ಒಡಿಯಾ, ತಮಿಳು, ಮಲಯಾಳಂ, ಹಿಂದಿ ಭಾಷೆಗಳ ಕಥೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ, ಸಂಶೋಧಕರ ಸಂಘದ ಅಧ್ಯಕ್ಷರಾಗಿ ರಾಜೇಗೌಡರು ಜಾನಪದ ಸಂಶೋಧನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಅವರಿಗೆ ಜಿಶಂಪ ಜಾನಪದ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಮ್.ಎಲ್.ಶ್ರೀಕಂಠೇಗೌಡ ಸಂಶೋಧನಾ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಎಚ್.ಡಿ.ಚೌಡಯ್ಯ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿದೆ.

ಜಗತ್ತಿನ ಜನಪದ ಕಥೆಗಳು, ಮಳೆ ಹುಯ್ಯುತ್ತಿದೆ, ವಿಮರ್ಶಾಕೃತಿಗಳು, ವಿವೇಚನೆ, ಸಂಪಾದನೆ, ಕುವೆಂಪು ಸಾಹಿತ್ಯ ಲೋಕ, ಕರಿಭಂಟನ ಕಾಳಗ, ಕೊಡಗದ ಮಾರಯ್ಯನ ಚರಿತ್ರೆ, ಕಲ್ಯಾಣಕೀರ್ತಿಯ ಕೃತಿಗಳು, ಪರೋಪಕಾರಿ: ಶ್ರೀ ಎನ್. ಜಿ. ಗುಜ್ಜೇಗೌಡ, ಸಾಹಸಯಾತ್ರಿ ಶ್ರೀ ಪಿ. ಎನ್. ಜವರಪ್ಪ ಗೌಡ, ಸಾವನ ದುರ್ಗ, ಆದಿ ಚುಂಚನಗಿರಿ, ಸಂಶೋಧನ ದರ್ಶನ ಕೃತಿಗಳನ್ನು ಬರೆದಿದ್ದಾರೆ.

Comments are closed.