ಮಂಗಳವಾರ, ಏಪ್ರಿಲ್ 29, 2025
HomeNationalDigital Voter ID Card : ಮೊಬೈಲ್‌ ನಲ್ಲೇ ಸಿಗುತ್ತೆ ಡಿಜಿಟಲ್‌ ವೋಟರ್‌ ಐಡಿ :...

Digital Voter ID Card : ಮೊಬೈಲ್‌ ನಲ್ಲೇ ಸಿಗುತ್ತೆ ಡಿಜಿಟಲ್‌ ವೋಟರ್‌ ಐಡಿ : ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

- Advertisement -

ನವದೆಹಲಿ : (Digital Voter ID Card)ವೋಟರ್‌ ಐಡಿ ಈಗ ಸುರಕ್ಷಿತ ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್) ಆವೃತ್ತಿಯಾಗಿದ್ದು, ಇದನ್ನು ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಸ್ವಯಂ-ಮುದ್ರಣ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಮತದಾರರು ತನ್ನ ಮೊಬೈಲ್‌ನಲ್ಲಿ ಗುರುತಿನ ಚೀಟಿ ಕಾರ್ಡ್‌ನ್ನು ಪಡೆದುಕೊಳ್ಳಹುದಾಗಿದೆ. ಡಿಜಿ ಲಾಕರ್‌ನ ಮೂಲಕ ಪಿಡಿಎಫ್ ಪೈಲ್‌ನ್ನು ಡೌನ್‌ಲೋಡ್ ಮಾಡಿಕೊಂಡು, ಅದರ ಪತ್ರಿಯನ್ನು ತೆಗೆದುಕೊಳ್ಳಬಹುದಾಗಿದೆ. ಹಾಗೆ ಅದನ್ನು ಮತದಾರರು ಸ್ವಯಂ-ಲ್ಯಾಮಿನೇಟ್ ಮಾಡಿಕೊಳ್ಳಬಹುದಾಗಿದೆ. ಮತದಾರರು ಮನೆಯಲ್ಲೇ ಕುಳಿತು ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿ, ಗುರುತಿನ ಚೀಟಿಯನ್ನು ಪಡೆಯಲು ಭಾರತ ಸರ್ಕಾರವು ರಾಷ್ಟ್ರೀಯ ಮತದಾರರ ಪೋರ್ಟಲ್‌ನ್ನು ಪ್ರಾರಂಭಿಸಿರುತ್ತದೆ.

ಮತದಾರರ ಗುರುತಿನ ಚೀಟಿ ಡೌನ್‌ಲೋಡ್ ಮಾಡುವ ವಿಧಾನ :

  • ಮತದಾರರು ಅಧಿಕೃತ ವೆಬ್‌ಸೈಟ್‌ ಆದ voterportal.eci.gov.in ಅಥವಾ nvsp.in ನಲ್ಲಿ ಮತದಾರರ ಪೋರ್ಟಲ್‌ನ್ನು ನೋಂದಾಯಿಸಿ ಅಥವಾ ಲಾಗಿನ್ ಆಗುವುದರ ಮೂಲಕ ಈ ಕೆಳಗೆ ತಿಳಿಸಿರುವ ಕ್ರಮವನ್ನು ಅನುಸರಿಸಬೇಕಾಗಿದೆ.
  • ಮೆನು ನ್ಯಾವಿಗೇಶನ್‌ನಿಂದ “ಡೌನ್‌ಲೋಡ್ ಇ-ಇಪಿಐಸಿ” ಮೇಲೆ ಕ್ಲಿಕ್ ಮಾಡಬೇಕು.
  • EPIC ಸಂಖ್ಯೆ ಅಥವಾ ಫಾರ್ಮ್ ಉಲ್ಲೇಖ ಸಂಖ್ಯೆಯನ್ನು ನಮೂದಿಸಬೇಕು.
  • ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ OTP ಯೊಂದಿಗೆ ಪರಿಶೀಲಿಸಬೇಕಾಗಿದೆ(ಮೊಬೈಲ್ ಸಂಖ್ಯೆಯನ್ನು Eroll ನಲ್ಲಿ ನೋಂದಾಯಿಸಿದ್ದರೆ).
  • “ಡೌನ್‌ಲೋಡ್ e-EPIC” ಮೇಲೆ ಕ್ಲಿಕ್ ಮಾಡಬೇಕು.
  • ಮೊಬೈಲ್ ಸಂಖ್ಯೆಯನ್ನು Eroll ನಲ್ಲಿ ನೋಂದಾಯಿಸದಿದ್ದರೆ, KYCನ್ನು ಭರ್ತಿಗೊಳಿಸಲು e-KYC ಮೇಲೆ ಕ್ಲಿಕ್ ಮಾಡಬೇಕು.
  • ಮುಖವನ್ನು ಸ್ಕ್ಯಾನ್‌ ಮಾಡಬೇಕು.
  • KYC ಪೂರ್ಣಗೊಳಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಬೇಕು.
  • e-EPIC ಡೌನ್‌ಲೋಡ್ ಮಾಡಬೇಕು.


ಇಲ್ಲವಾದರೆ, ಮತದಾರರ ಸಹಾಯವಾಣಿಯ ಮೂಲಕ ಮೊಬೈಲ್ ಅಪ್ಲಿಕೇಶನ್‌ನ್ನು ಬಳಸಿಕೊಂಡು ಮತದಾರರು ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗಿದೆ.

ಆಂಡ್ರಾಯ್ಡ್ (Android)- ಗೂಗಲ್ ಪ್ಲೇ ಸ್ಟೋರ್‌

ಐಒಎಸ್ (iOS)- ಆಪಲ್ ಸ್ಟೋರ್

ಈ ಹಿಂದೆ ಸ್ಥಳೀಯ ಅಥವಾ ರಾಷ್ಟ್ರೀಯ ಚುನಾವಣೆಗೆ ಮೊದಲು ಮಾತ್ರ ಮತದಾರರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತಿತ್ತು. ಆದರೆ ಈಗ(Digital Voter ID Card) ಆನ್‌ಲೈನ್ ಅರ್ಜಿ ಪ್ರಕ್ರಿಯೆಯ ಮೂಲಕ ಎಲ್ಲಾ ಸಮಯದಲ್ಲಿ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ಸುಲಭವಾಗಿರುತ್ತದೆ.

ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸುವ ವಿಧಾನ :

  • ಮೊದಲಿಗೆ ಮತದಾರರು ಅಧಿಕೃತ ಚುನಾವಣಾ ವೆಬ್‌ಸೈಟ್‌ ಆದ nvsp.in ಲಾಗಿನ್‌ ಆಗಬೇಕು ನಂತರ ಕೆಳಗೆ ತಿಳಿಸಿರುವ ಕ್ರಮವನ್ನು ಅನುಸರಿಸಬೇಕಾಗಿದೆ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
  • ಲಾಗಿನ್ ಆದ ನಂತರ “ಹೊಸ ಮತದಾರರ ಗುರುತಿನ ನೋಂದಣಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು” ಫಾರ್ಮ್ 6 ಅನ್ನು ಕ್ಲಿಕ್ ಮಾಡಬೇಕು.
  • ನಿಮ್ಮ ಹೆಸರು, ವಯಸ್ಸು, ಲಿಂಗ, ವಸತಿ ವಿಳಾಸ ಮತ್ತು ವೈವಾಹಿಕ ಸ್ಥಿತಿ ಮುಂತಾದ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.
  • ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗಳಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ.
  • ನಿಮ್ಮ ಫೋನ್‌ನಲ್ಲಿ ನೀವು ಅಪ್ಲಿಕೇಶನ್ ಸಂಖ್ಯೆ ಮತ್ತು ನೋಂದಾಯಿತ ಇಮೇಲ್ ಐಡಿಯನ್ನು ಪಡೆಯಬಹುದಾಗಿದೆ.
  • ಹಲವಾರು ಬೇರೆ ಫಾರ್ಮ್‌ಗಳಿರುತ್ತದೆ ಅವುಗಳೆಂದರೆ, ಎನ್‌ಆರ್‌ಐ ಮತದಾರರಿಗೆ ಫಾರ್ಮ್ 6ಎ, ಹೆಸರು, ವಯಸ್ಸು, ವಿಳಾಸ, ಫೋಟೋ, ಡಿಒಬಿ ಮುಂತಾದ ದಾಖಲೆಗಳನ್ನು ಬದಲಾಯಿಸಲು ಫಾರ್ಮ್ 8, ಅದೇ ಕ್ಷೇತ್ರದಲ್ಲಿ ನಿವಾಸಿ ವಿಳಾಸವನ್ನು ಬದಲಾಯಿಸಲು ಫಾರ್ಮ್ 8 ಎ ನ್ನು ಕ್ಲಿಕ್‌ ಮಾಡಬೇಕಾಗುತ್ತದೆ.

ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023 : ಕಾಪು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ Vs ರಾಜಶೇಖರ ಕೋಟ್ಯಾನ್ ಫೈಟ್

ಇದನ್ನೂ ಓದಿ : Honnali Chandrashekar Death : ಹೊನ್ನಾಳಿ : ಚಂದ್ರಶೇಖರ್ ಸಾವು, ಕೊಲೆ ಪ್ರಕರಣ ದಾಖಲು

ಮತದಾರರ ತಮ್ಮ ಗುರುತಿನ ಸ್ಥಿತಿಯನ್ನು ಪರಿಶೀಲಿಸಲು ಅಪ್ಲಿಕೇಶನ್ ಸಂಖ್ಯೆಯನ್ನು ಬಳಸಬಹುದಾಗಿದೆ. ಮುಖ್ಯವಾಗಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು ಮತ್ತು ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕಾಗಿರುತ್ತದೆ.

Digital Voter ID available on mobile: Click here to download

RELATED ARTICLES

Most Popular