ಗುವಾಹತಿ : ಪಾನಿಪೂರಿ ಪ್ರಿಯರೇ ಹುಷಾರ್. ಕಂಡ ಕಂಡಲ್ಲಿ ಪಾನಿಪೂರಿ ತಿನ್ನುವ ಮುನ್ನ ಎಚ್ಚರವಾಗಿರಿ. ಯಾಕೆಂದ್ರೆ ಪಾನಿಪೂರಿ ರುಚಿ ಹೆಚ್ಚಿಸೋಕೆ ವ್ಯಾಪಾರಿಯೋರ್ವ ಮೂತ್ರ ಮಿಕ್ಸ್ ಮಾಡುತ್ತಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಸ್ಸಾಂ ರಾಜ್ಯದ ಗುವಾಹತಿಯಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೋರ್ವ ಮೂತ್ರವನ್ನು ಪಾನಿಪೂರಿಗೆ ಬಳಸುವ ನೀರಿಗೆ ಮಿಕ್ಸ್ ಮಾಡಿದ್ದಾನೆ. ವ್ಯಾಪಾರಿಯ ಪಕ್ಕದಲ್ಲಿಯೇ ಗ್ರಾಹಕನೋರ್ವ ಕುಳಿತಿದ್ದಾನೆ. ಆದರೆ ಆತನಿಗೆ ಇದು ಗಮನಕ್ಕೆ ಬಂದಿಲ್ಲ.
ವ್ಯಾಪಾರಿಯ ಕಳ್ಳಾಟವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದ್ದು, ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯರು ಹೆಚ್ಚಾಗಿ ಪಾನಿಪೂರಿಗೆ ಮನಸೋಲುತಿದ್ದಾರೆ. ಇನ್ಮುಂದೆಕಂಡ ಕಂಡಲ್ಲಿ ಪಾನಿಪೂರಿ ತಿನ್ನುವ ಮುನ್ನ ಎಚ್ಚರವಾಗಿರಿ. ಇಲ್ಲವಾದ್ರೆ ನಿಮಗೂ ಕಿರಾತಕರು ಮೂತ್ರ ಕುಡಿಸಬಹುದು. ಯಾವುದಕ್ಕೂ ಎಚ್ಚರವಾಗಿರಿ.