Mudra Loan Fraud : ಮುದ್ರಾ ಲೋನ್‌ ಹೆಸರಲ್ಲಿ ಉಡುಪಿಯಲ್ಲಿ ವೈದ್ಯಾಧಿಕಾರಿಗೆ ವಂಚನೆ

ಉಡುಪಿ : ಮೋಸ ಹೋಗುವವರು ಇರೋ ತನಕ, ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋ ಮಾತು ಮತ್ತೊಮ್ಮೆ ನಿಜವಾಗಿದೆ. ಮುದ್ರಾ ಲೋನ್‌ ಮಾಡಿಸಿಕೊಡುವುದಾಗಿ ನಂಬಿಸಿ ವೈದ್ಯಾಧಿಕಾರಿಯೋರ್ವರಿಂದ ಹಣ ಪಡೆದು ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಅಜ್ಜರಕಾಡುವಿನಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಶಿರ್ವಾದ ವೈದ್ಯಾಧಿಕಾರಿಯಾಗಿರುವ ಡಾ. ಕೃಷ್ಣಮೂರ್ತಿ ಎಂಬವರೇ ವಂಚನೆಗೆ ಒಳಗಾದವರು. ಕೃಷ್ಣಮೂರ್ತಿ ಅವರಿಗೆ ಮಗನ ಶಿಕ್ಷಣಕ್ಕೆ ಹಣದ ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕ ಲೋನ್‌ ಆಪ್‌ಗಳ ಹುಡುಕಾಟ ನಡೆಸಿದ್ದಾರೆ. ಈ ವೇಳೆಯಲ್ಲಿ ಮುದ್ರಾ ಲೋನ್‌ ಹೆಸರಿನ ವೆಬ್‌ಸೈಟ್‌ ಕ್ಲಿಕ್ಕಿಸಿದ್ದಾರೆ. ಅದರಲ್ಲಿ ಮೊಬೈಲ್‌ ಸಂಖ್ಯೆ ಸೇರಿದಂತೆ ವೈಯಕ್ತಿಕ ವಿವರಗಳನ್ನು ದಾಖಲಿಸಿದ್ದಾರೆ.

ಸ್ವಲ್ಪ ಹೊತ್ತಲೇ ಅಪರಿಚಿತರಿಂದ ಕರೆ ಬಂದಿತ್ತು. ಸುಮಾರು 25 ಲಕ್ಷ ರೂಪಾಯಿ ಲೋನ್‌ ಮಾಡಿಸಿಕೊಡುವುದಾಗಿ ನಂಬಿಸಿದ್ದಾರೆ. ಲೋನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್‌ನಲ್ಲಿಯೇ ಅಪ್ಲೋಡ್‌ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೇ ಲೋನ್‌ ಪಡೆಯಲು ಪ್ರೊಸೆಸಿಂಗ್‌ ಫೀಸ್‌, ಇನ್ಶುರೆನ್ಸ್‌ ಗಳಿಗೆ ಹಣವನ್ನು ಪಾವತಿ ಮಾಡುವಂತೆಯೂ ಸೂಚನೆಯನ್ನು ನೀಡಿದ್ದಾರೆ.

ಸುಲಭವಾಗಿ ಲೋನ್‌ ಸಿಗುತ್ತೆ ಅಂತಾ ನಂಬಿದ ಡಾ.ಕೃಷ್ಣಮೂರ್ತಿ ಅವರು ಹಂತ ಹಂತವಾಗಿ ಸುಮಾರು 67,650 ರೂಪಾಯಿಯನ್ನು ಅಪರಿಚಿತರ ಖಾತೆಗೆ ವರ್ಗಾವಣೆಯನ್ನು ಮಾಡಿದ್ದಾರೆ. ಆದರೆ ಸಾಲ ಸಿಗದೇ ಇದ್ದಾಗ ತಾವು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಶ್ರೀಗಂಧ ಕಳ್ಳರಿಗೆ ಗುಂಡೇಟು : ಓರ್ವ ಸಾವು, ಮೂವರು ಎಸ್ಕೇಪ್‌

ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

Comments are closed.