ಮುಂಬೈ: (Domino’s Pizza) ಮೊಬೈಲ್ ಮೂಲಕ ಒಂದು ಟಚ್ ನಲ್ಲೇ ಸುಲಭವಾಗಿ ಬೇಕಾದನ್ನು ಕುಳಿತುಕೊಂಡ ಜಾಗದಲ್ಲೆ ತರಿಸಿಕೊಳ್ಳಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್ ಲೈನ್ ನಲ್ಲಿ ತಿನಿಸುಗಳನ್ನು ತರಿಸುತ್ತಾರೆ. ಆನ್ ಲೈನ್ ನಲ್ಲಿ ತರಿಸಿದ ತಿಂಡಿ ಎಷ್ಟು ಶುಚಿತ್ವವಾಗಿರುತ್ತದೆ ಎಂಬ ಅರಿವು ಕೂಡ ಇರುವುದಿಲ್ಲ. ಹೀಗೆ ಒಬ್ಬ ವ್ಯಕ್ತಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿದ ಡೊಮಿನೋಸ್ ಪಿಝಾದಲ್ಲಿ ಗಾಜಿನ ಚೂರುಗಳು ಪತ್ತೆಯಾಗಿದೆ.
ಮಹಾರಾಷ್ಟ್ರ ಅರುಣ್ ಎಂಬುವರು ಡೊಮಿನೋಸ್ ಪಿಝಾವನ್ನು ಝೊಮ್ಯಾಟೋ ಮೂಲಕ ಆರ್ಡರ್ ಮಾಡಿ ತರಿಸಿದ್ದಾರೆ. ಇದನ್ನು ತಿನ್ನುವಾಗ ಎರಡರಿಂದ ಮೂರು ಗಾಜಿನ ಚೂರುಗಳು ಕಾಣಿಸಿಕೊಂಡಿದೆ. ತಕ್ಷಣವೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೊಟೋವನ್ನು ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಪರಿಶೀಲಿಸುವಂತೆ ಡೋಮಿನೋಸ್ ಇಂಡಿಯಾ, ಮುಂಬೈ ಪೊಲೀಸ್ ಹಾಗೂ ಇದಕ್ಕೆ ಸಂಬಂಧಿಸಿದ ಇತರರಿಗೆ ಟ್ಯಾಗ್ ಮಾಡಿದ್ದಾರೆ. ಟ್ವಿಟ್ ಮಾಡಿದ ಸ್ವಲ್ಪ ಸಮಯದ ನಂತರ ಝೊಮ್ಯಾಟೋ ಅವರು ಪ್ರತಿಕ್ರಿಯಿಸಿದ್ದಾರೆ.”ಬಾಕ್ಸ್ ಡ್ಯಾಮೇಜ್ ಆಗಿತ್ತೇ? ಎಂಬ ಪ್ರಶ್ನೆ ಕೇಳಿದ್ದಾರೆ. ಅರುಣ್ ಬಾಕ್ಸ್ ಸುಸ್ಥಿತಿಯಲ್ಲಿತ್ತು ಎಂದು ಉತ್ತರಿಸಿದ್ದಾರೆ. ಝೊಮ್ಯಾಟೊದವರು ಕ್ಷಮೆಯಾಚಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಮತ್ತೊಂದು ಪಿಝಾ ತಲುಪಿಸುತ್ತೇವೆ ಎಂದಿದ್ದಾರೆ.
Please write to customer care first. If they don’t reply or give unsatisfactory reply, then you can think of legal remedy.
— मुंबई पोलीस – Mumbai Police (@MumbaiPolice) October 8, 2022
ಈ ವಿಷಯವನ್ನು ಅರಿತ ಮುಂಬೈ ಪೋಲಿಸರು ಕೂಡ ಟ್ವಿಟ್ ನ ಮೂಲಕ ಅರುಣ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಡೊಮಿನೋಸ್ ಕಸ್ಟಮರ್ ಕೇರ್‌ಗೆ ಈ ಕುರಿತು ಮಾಹಿತಿ ನೀಡಿ ಎಂದಿದ್ದಾರೆ. ಒಂದು ವೇಳೆ ಅವರು ನಿಮಗೆ ಸಮರ್ಪಕವಾಗಿ ಸ್ಪಂದಿಸದಿದ್ದರೆ ನೀವು ಕಾನೂನಿನ ಮೊರೆಗೆ ಹೋಗಬಹುದು ಎಂದಿದ್ದಾರೆ. ಅದರಂತೆ ಅರುಣ್ ಕಸ್ಟಮರ್ ಕೇರ್ ಗೆ ಸಂಪರ್ಕವನ್ನು ಮಾಡಿದ್ದಾರೆ. ಡೋಮಿನೋಸ್ ಸಿಬ್ಬಂದಿ ಇದರ ಕುರಿತು ತನಿಖೆಯನ್ನು ನಡೆಸಲಾಗಿದೆ ಎಂದು ಅರುಣ್ ಅವರನ್ನು ಸಂಪರ್ಕ ಮಾಡಿ ತಿಳಿಸಿದೆ . ನಮ್ಮಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಇಲ್ಲಿ ಯಾವುದೇ ಗಾಜಿನ ವಸ್ತುವನ್ನು ಬಳಕೆ ಮಾಡುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ:BBK Season9 : ಬಿಗ್ ಬಾಸ್ ಮನೆಯಿಂದ ನವಾಜ್ ಔಟ್
ಡೊಮಿನೋಸ್ ನ ಮೇಲೆ ಈ ಹಿಂದೆ ಕೂಡ ಶುಚಿತ್ವದ ಮೇಲೆ ಹಲವಾರು ದೂರುಗಳು ಇದ್ದವು. ಆದರೂ ಕೂಡ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಿದೆ. ಅದರಲ್ಲೂ ಇವರು ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂಬ ಕೊಟ್ಟಿರುವ ಉತ್ತರಕ್ಕೆ ಅರುಣ್ ಕಾನೂನಿನ ಮೊರೆ ಹೋಗುತ್ತಾರಾ ಎಂದು ಕಾದು ನೋಡಬೇಕಿದೆ.
Big shock for pizza orderer :glass found in Domino’s pizza