185 people died : ಇರಾನ್‌ ನಲ್ಲಿ ಉಗ್ರಸ್ವರೂಪ ತಾಳಿತು ಹಿಜಾಬ್‌ ವಿರೋಧಿ ಪ್ರತಿಭಟನೆ ; 19 ಮಕ್ಕಳು ಸೇರಿ 185 ಮಂದಿ ಬಲಿ

ಇರಾನ್ : (185 people died) ಕೆಲ ದಿನಗಳ ಹಿಂದೆ ಇರಾನ್‌ ನ ಕುರ್ದಿಶ್‌ ಮಹಿಳೆ ಮಾಶಾ ಅಮೀನಿ ಅವರು ಹಿಜಾಬ್‌ ಸರಿಯಾಗಿ ಧರಿಸಿರಲಿಲ್ಲ, ಇದರಿಂದಾಗಿ ತಲೆ ಕೂದಲು ಕಾಣುವಂತಿತ್ತು ಎಂಬ ಕಾರಣಕ್ಕೆ ಪೋಲೀಸರು ಆಕೆಯನ್ನು ಬಂಧಿಸಿದ್ದರು. ಪೋಲೀಸರು ನಡೆಸಿದ ಹಲ್ಲೆಗೆ ಒಳಗಾದ ಮಾಶಾ ಅಮೀನಿ ಅವರು ಪೋಲೀಸ್‌ ವಶದಲ್ಲಿರುವಾಗಲೆ ಮೃತಪಟ್ಟಿದ್ದರು. ಪೋಲೀಸರೇ ಅಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎನ್ನುವ ಕಾರಣದಿಂದಾಗಿ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ದೇಶದಾದ್ಯಂತ ಶುರುವಾದವು. ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆಗಳು ಆರಂಭಗೊಂಡವು.ಇದೀಗ ಇಪ್ಪತ್ತನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಕೊನೆಗಾಣುವಂತೆ ಕಾಣುತ್ತಿಲ್ಲ.ಹಿಂಸಾತ್ಮಕ ಅವಧಿಯನ್ನು ಮುಂದುವರಿಸಿದ ಇರಾನ್‌ ಇದುವರೆಗೆ 19 ಮಕ್ಕಳು ಸೇರಿ 185 ಜನರನ್ನು ಬಲಿ (185 people died) ಪಡೆದುಕೊಂಡಿದೆ.

ಇರಾನ್‌ ನಲ್ಲಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಅನೇಕ ಜನರು ತಮ್ಮ ಜೀವವನ್ನು ತ್ಯಜಿಸಿದ್ದಾರೆ. ಇದು ಪಶ್ಚಿಮ ರಾಷ್ಟ್ರಗಳ ಪಿತೂರಿ ಎಂದ ಇರಾನ್ ಅಧಿಕಾರಿಗಳು ಪ್ರತಿಭಟನೆಗಳನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಇರಾನ್‌ನ ಶತ್ರುಗಳ ಪಿತೂರಿ ಎಂದು ಕರೆದಿದ್ದಾರೆ.ಪಾಶ್ಚಿಮಾತ್ಯ ದೇಶಗಳು ಆಯುಧಗಳನ್ನು ನೀಡುವ ಮೂಲಕ ರಾಜ್ಯದ ವಿರುದ್ಧ ಹಿಂಸಾಚಾರ ನಡೆಸಲು ಜನರನ್ನು ಪ್ರೇರೇಪಿಸುತ್ತಿವೆ ಎಂದು ಇರಾನ್ ಆರೋಪಿಸಿದೆ. ರಾಜ್ಯ ಮಾಧ್ಯಮಗಳ ಪ್ರಕಾರ, ಈ ಹಿಂಸಾಚಾರದಲ್ಲಿ ಕನಿಷ್ಠ 20 ಭದ್ರತಾ ಪಡೆಗಳು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Miracle about Babiya : ಬ್ರಿಟಿಷ್ ಅಧಿಕಾರಿಗಳಿಗೆ ಪವಾಡ ತೋರಿಸಿತ್ತು ಬಬಿಯಾ ಮೊಸಳೆ

ಇದನ್ನೂ ಓದಿ : Babiya crocodile died : ಅನಂತಪದ್ಮನಾಭ ದೇವಸ್ಥಾನದ ದೇವರ ಮೊಸಳೆ ಬಬಿಯಾ ಇನ್ನಿಲ್ಲ

ಇರಾನ್ ತನ್ನ ಅರೇಬಿಕ್ ಭಾಷೆಯ ಅಲ್-ಅಲಂ ಟಿವಿಯಲ್ಲಿ ಇಬ್ಬರು ಫ್ರೆಂಚ್ ಗೂಢಚಾರರ ವೀಡಿಯೊವನ್ನು ಬಿಡುಗಡೆ ಮಾಡಿದೆ, ಪಾಶ್ಚಿಮಾತ್ಯ ದೇಶಗಳ ಮೇಲಿನ ಹಿಂಸಾಚಾರವನ್ನು ದೂಷಿಸಿದೆ.ಇರಾನ್‌ ಬಿಡುಗಡೆ ಮಾಡಿದ ವಿಡಿಯೋದಲ್ಲಿ , ಇಸ್ಲಾಮಿಕ್ ಗಣರಾಜ್ಯದಲ್ಲಿ ಕ್ರಾಂತಿಯನ್ನು ಹುಟ್ಟುಹಾಕುವ ಮತ್ತು ಇರಾನ್ ಸರ್ಕಾರವನ್ನು ಉರುಳಿಸಲು ಅಡಿಪಾಯ ಹಾಕುವ ಮುಖ್ಯ ಉದ್ದೇಶದಿಂದ ತಾನು ಮತ್ತು ಅವರ ಸಹಚರರು ಇರಾನ್‌ಗೆ ಬಂದರು ಎಂದು ಕೊಹ್ಲರ್ ಹೇಳುತ್ತಿರುವುದು ಕೇಳಿಬರುತ್ತಿದೆ.

ಇದನ್ನೂ ಓದಿ : hamsalekha admitted to hospital:ನಾದಬ್ರಹ್ಮ ಹಂಸಲೇಖ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

(185 people died) A few days ago, Masha Amini, a Kurdish woman from Iran, was arrested by the police because she was not wearing hijab properly, due to which her head hair was visible.

Comments are closed.