ದಿಂಡೋರಿ, ಮಧ್ಯಪ್ರದೇಶ : DSO suspended ಉಜ್ವಲ ಯೋಜನೆಯಡಿ ಕಾರ್ಡ್‌ಗಳನ್ನು ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಡಿಎಸ್‌ಒ ರನ್ನ ಕಾರ್ಯಕ್ರಮದ ವೇದಿಕೆಯಲ್ಲೇ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಅಮಾನತು ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿಂಡೂರಿನ ಜೋಗಿ ಟಿಕಾರಿಯಾದಲ್ಲಿ ‘ಮುಖ್ಯಮಂತ್ರಿ ಜನಸೇವಾ ಅಭಿಯಾನ’ದಡಿ ಗುರುವಾರ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಸಹ ಭಾಗಿಯಾಗಿದ್ರು. ಅಲ್ದೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ವೇದಿಕೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವೇದಿಕೆಯಲ್ಲಿಯೇ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಉಜ್ವಲ ಯೋಜನೆಯಡಿ ಇದುವರೆಗೂ ಎಲ್ಲರಿಗೂ ಕಾರ್ಡ್ ವಿತರಣೆ ಆಗಿಲ್ಲ ಅನ್ನೋ ಸಂಗತಿ ಗೊತ್ತಾಗಿತ್ತು. ಈ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕಾರ್ಡ್ ಏಕೆ ಬಂದಿಲ್ಲ ಎಂದು ಡಿಎಫ್‌ಒ ಅವರನ್ನು ಪ್ರಶ್ನಿಸಿದರು. ಈ ಬಗ್ಗೆ ಸರಿಯಾದ ಉತ್ತರ ಸಿಗದ ಹಿನ್ನೆಲೆಯಲ್ಲಿ ಡಿಎಸ್‌ಒ ರನ್ನ ವೇದಿಕೆಗೆ ಕರೆಸಿದ್ರು. ಸಿಎಂ ಕೇಳಿದ ಪ್ರಶ್ನೆಗೆ ಡಿಎಸ್ಒ ಟಿಕಾರಾಂ ಅಹಿರ್ವಾರ್ ತಡಬಡಾಯಿಸಿದ್ರು. ಆಗ ತುಂಬಿದ ವೇದಿಕೆಯಲ್ಲೇ ಸಾವಿರಾರು ಜನರ ಎದುರಿನಲ್ಲಿ ಡಿಎಸ್ಒ ಜಿಲ್ಲಾ ನಾಗರಿಕ ಆಹಾರ ಸರಬರಾಜು ಅಧಿಕಾರಿ ಟಿಕಾರಾಂ ರನ್ನ ಅಮಾನತುಗೊಳಿಸಿ ಮುಖ್ಯಮಂತ್ರಿಗಳು ಆದೇಶಿಸಿದರು.
ಬಳಿಕ ಮಾತನಾಡಿದ ಸಿಎಂ ಎಲ್ಲಾ ಅರ್ಹ ಫಲಾನುಭವಿಗಳು ಎಲ್ಲಾ ಜನಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು, ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಸಿಎಂ ಅಮಾನತು ಆದೇಶ ಹೊರಡಿಸ್ತಿದ್ದಂತೆ ನೆರೆದಿದ್ದ ಜನರೆಲ್ಲ ಘೋಷಣೆಗಳನ್ನ ಕೂಗಿದ್ರು.
ಇದನ್ನೂ ಓದಿ: October Bank Holidays 2022 : ಗ್ರಾಹಕರ ಗಮನಕ್ಕೆ ; ಅಕ್ಟೋಬರ್‌ನಲ್ಲಿ 21 ದಿನ ಬ್ಯಾಂಕ್ ರಜೆ
ಇದನ್ನೂ ಓದಿ: SP Balasubrahmanyam : ಸಂಗೀತ ಮಾಂತ್ರಿಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಹಿಂದಿದೆ ರೋಚಕ ಕಹಾನಿ
dso suspended cm shivraj singh chouhan suspended dso while addressing a public rally