BJP leader’s son arrested: ರಿಸೆಪ್ಸನಿಸ್ಟ್ ಮರ್ಡರ್..ಬಿಜೆಪಿ ನಾಯಕನ ಪುತ್ರ ಅರೆಸ್ಟ್..ರೆಸಾರ್ಟ್ ಢಮಾರ್

ಉತ್ತರಾಖಂಡ್ : BJP leader’s son arrested ರೆಸಾರ್ಟ್ ರಿಸೆಪ್ಸನಿಸ್ಟ್ ಕೊಲೆ ಆರೋಪದ ಮೇಲೆ ಉತ್ತರಾಖಂಡ್ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯನನ್ನ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲ ಪುಲ್ಕಿತ್ ಆರ್ಯಾ ಒಡೆತನದ ರೆಸಾರ್ಟ್ ಅನ್ನ ಸಿಎಂ ಪುಷ್ಕರ್ ಸಿಂಗ್ ಧಾಮಿ ಆದೇಶದಂತೆ ನೆಲಸಮಗೊಳಲಾಗಿದೆ. ಆ ಮೂಲಕ ಉತ್ತರ ಪ್ರದೇಶದ ಮಾದರಿಯಲ್ಲೇ ಕೊಲೆ ಆರೋಪಿಗಳ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಲಾಗಿದೆ.

ಏನಿದು ಕೊಲೆ ಪ್ರಕರಣ : ಉತ್ತರಾಖಂಡನ ರಿಷಿಕೇಶ ಜಿಲ್ಲೆಯ ಲಕ್ಷ್ಮಣ್ ಜುಲಾ ಪ್ರದೇಶದಲ್ಲಿನ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್ ಇದ್ದು,ಇಲ್ಲಿ 19 ವರ್ಷದ ಅಂಕಿತಾ ಭಂಡಾರಿ ಅನ್ನೋ ಯುವತಿ ರಿಸೆಪ್ಸನಿಸ್ಟ್ ಆಗಿ ಕೆಲಸ ಮಾಡುತ್ತಿದ್ಲು. ಸೆಪ್ಟೆಂಬರ್ 18 ರಂದು ಅಂಕಿತಾ ಭಂಡಾರಿ ನಾಪತ್ತೆಯಾಗಿದ್ಲು. ಪೊಲೀಸ್ ಮೂಲಗಳ ಪ್ರಕಾರ, ಸೆಪ್ಟೆಂಬರ್ 18 ರಂದು ರಾತ್ರಿ 8 ಗಂಟೆಗೆ ಅಂಕಿತಾ ಭಂಡಾರಿ ಕೊನೆಯದಾಗಿ ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಆರೋಪಿ ಪುಲ್ಕಿತ್  ಅವರೊಂದಿಗೆ ಹೋಗಿರೋದಾಗಿ ಗೊತ್ತಾಗಿತ್ತು. ಬಳಿಕ ಪುಲ್ಕಿತ್ ಸೇರಿ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳು  ತಾವೇ ಅಂಕಿತಾಳನ್ನ ಚಿಲ ಅನ್ನೋ ಪ್ರದೇಶದಲ್ಲಿ ಕಾಲುವೆಗೆ ತಳ್ಳಿ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ರು. ಸೆಪ್ಟೆಂಬರ್ 18 ರ ರಾತ್ರಿ ರೆಸಾರ್ಟ್ ಗೆ ಹೋಗೋ ದಾರಿಯಲ್ಲಿ ಮದ್ಯಪಾನ ಮಾಡಿ ಅಂಕಿತಾಳೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಯುವತಿ ಅಂಕಿತಾ ರೆಸಾರ್ಟ್ ನಲ್ಲಿ ನಡೆಸುತ್ತಿದ್ದ ಅಕ್ರಮ ಚಟುವಟಿಕೆಯನ್ನ ಬಯಲು ಮಾಡೋದಾಗಿ ಬೆದರಿಕೆ ಹಾಕಿದ್ಲಂತೆ. ಆಗ ಪುಲ್ಕಿತ್ ಆರ್ಯ ಮತ್ತು ರೆಸಾರ್ಟ್ ಮ್ಯಾನೇಜರ್ ಸೌರಭ್ ಇಬ್ಬರು ಸೇರಿ ಅಂಕಿತಾಳನ್ನ ಕಾಲುವೆಗೆ ತಳ್ಳಿರೋದಾಗಿ ಹೇಳಿಕೆ ನೀಡಿದ್ರು. ಹೀಗಾಗಿ ಪೊಲೀಸರು ಬಿಜೆಪಿ ನಾಯಕನ ಪುತ್ರನನ್ನ ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ರೆಸಾರ್ಟ್ ಮೇಲೆ ಬುಲ್ಡೋಜರ್ ಅಸ್ತ್ರ : ಯುವತಿ ನಾಪತ್ತೆ ಬೆನ್ನಲ್ಲೇ ಭಾರಿ ಪ್ರತಿಭಟನೆ ನಡೆದಿದ್ದವು. ರೆಸಾರ್ಟ್ ಮೇಲೆ ಜನರು ದಾಳಿ ನಡೆಸಿದ್ರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಉತ್ತಾರಾಖಂಡ್ ಸಿಎಂ  ಪುಷ್ಕರ್ ಸಿಂಗ್ ಧಾಮಿ ರೆಸಾರ್ಟ್ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದರು. ಅಕ್ರಮವಾಗಿ ನಡೆಸುತ್ತಿರುವ ರೆಸಾರ್ಟ್‌ಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು. ಇದ್ರ ಬೆನ್ನಲ್ಲೆ ಗುರುವಾರ ರಾತ್ರಿಯಿಂದ ರೆಸಾರ್ಟ್ ತೆರವು ಕಾರ್ಯಾಚಣೆ ನಡೆಸಲಾಗಿದ್ದು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ.

ಪುಲ್ಕಿತ್ ಆರ್ಯಾ ತಂದೆ ವಿನೋದ್ ಆರ್ಯ ಬಿಜೆಪಿ ನಾಯಕನಾಗಿದ್ದು, ಸಿಎಂ ಪುಷ್ಕರ್ ಸಿಂಗ್ ಧಾಮಿ ಸರ್ಕಾರದಲ್ಲಿ ಯಾವುದೇ ಹುದ್ದೆಯಿಲ್ಲದೆ ರಾಜ್ಯ ಸಚಿವ ಸ್ಥಾನವನ್ನು ಹೊಂದಿದ್ದಾರೆ.

ಇದನ್ನೂ ಓದಿ: DSO suspended: ವೇದಿಕೆಯಲ್ಲೇ DSO ಸಸ್ಪೆಂಡ್ ಮಾಡಿದ ಸಿಎಂ

ಇದನ್ನೂ ಓದಿ: October Bank Holidays 2022 : ಗ್ರಾಹಕರ ಗಮನಕ್ಕೆ ; ಅಕ್ಟೋಬರ್‌ನಲ್ಲಿ 21 ದಿನ ಬ್ಯಾಂಕ್‌ ರಜೆ

BJP leader’s son arrested over murder of Uttarakhand girl who worked at his resort 

Comments are closed.