ಸೋಮವಾರ, ಏಪ್ರಿಲ್ 28, 2025
HomeNationalಇಲ್ಲಿ ಸಮೋಸಾ ತಿಂದರೇ ಸಿಗುತ್ತೇ 51 ಸಾವಿರ ರೂಪಾಯಿ : ಸಖತ್ ಆಫರ್ ಗೆ ಮುಗಿಬೀಳ್ತಿದ್ದಾರೆ...

ಇಲ್ಲಿ ಸಮೋಸಾ ತಿಂದರೇ ಸಿಗುತ್ತೇ 51 ಸಾವಿರ ರೂಪಾಯಿ : ಸಖತ್ ಆಫರ್ ಗೆ ಮುಗಿಬೀಳ್ತಿದ್ದಾರೆ ಜನ

- Advertisement -

ಅಬ್ಬಾ ಜುಲೈ ತಿಂಗಳಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಈ ಚಳಿ ಚಳಿ ವೆದರ್ ನಲ್ಲಿ ಯಾರಾದ್ರೂ ರುಚಿ ರುಚಿಯಾದ ಸಮೋಸಾ ಮಾಡಿಕೊಟ್ರೇ ಆಹಾ.. ಅಂತ ನೀವಂದ್ರುಕೊಳ್ತಿದ್ದೀರಾ ಹಾಗಿದ್ದರೇ ನೀವೊಮ್ಮೆ ಉತ್ತರ ಪ್ರದೇಶಕ್ಕೆ ಹೋಗಬಹುದು. ಅಲ್ಲಿ ನೀವು ಸಮೋಸಾ ತಿನ್ನೋದು ಮಾತ್ರವಲ್ಲ ಸಮೋಸಾ ತಿಂದು ಶ್ರೀಮಂತರಾಗಬಹುದು. ಯಾಕಂದ್ರೇ ಇಲ್ಲಿ ಸಮೋಸಾ ತಿಂದೋರಿಗೆ ಬಹುಮಾನ (Eating Samosa win 51000 rupees) ಕೂಡ ಕಾದಿದೆ.

ಹೌದು, ಉತ್ತರ ಪ್ರದೇಶದ ಮೀರತ್ ನ‌ ಕುರ್ತಿ ಬಜಾರ್ ನಲ್ಲಿರೋ ಸಮೋಸಾ ಅಂಗಡಿಯೊಂದು ತಮ್ಮ ಸಮೋಸಾ ಅಡ್ಡಾದಲ್ಲಿ ಸಮೋಸಾ ತಿಂದೋರಿಗೆ ಭರ್ಜರಿ 51 ಸಾವಿರ ರೂಪಾಯಿಗಳ ಬಹುಮಾನ ಘೋಷಿಸಿದೆ. ಆರೇ ಇದರಲ್ಲೇನು ಮಹಾ ನಾನು ತಿಂದು ಮುಗಿಸುತ್ತೇನೆ ಅಂತ‌‌ನೀವಂದುಕೊಂಡ್ರೇ ಅದು ಅಷ್ಟು ಸುಲಭವಿಲ್ಲ. ಯಾಕಂದ್ರೇ ಇದು ಅಷ್ಟಿಷ್ಟಲ್ಲ ಬರೋಬ್ಬರಿ 8 ಕೆಜಿ ತೂಕದ ಸಮೋಸಾ. ಗ್ರಾಹಕರನ್ನು ತಮ್ಮ ಅಂಗಡಿಯತ್ತ ಸೆಳೆಯೋ ಉದ್ದೇಶದಿಂದ ಈ ಅಂಗಡಿ ಮಾಲೀಕರು ಇಂತಹದೊಂದು ಸ್ಪರ್ಧೆ ಒಡ್ಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 1100 ರೂಪಾಯಿ ಖರ್ಚು ಮಾಡಿ 8 ಕೆಜಿ ತೂಕದ ಸಮೋಸಾ ಸಿದ್ಧಪಡಿಸಲಾಗಿದೆ. ಈ ಬೃಹತ್ ಗಾತ್ರದ ಸಮೋಸಾಕ್ಕೆ ಬಾಹುಬಲಿ ಸಮೋಸಾ ಎಂದು ಹೆಸರಿಡಲಾಗಿದ್ದು, ಇದನ್ನು 30 ನಿಮಿಷದಲ್ಲಿ ತಿಂದವರಿಗೆ 51 ಸಾವಿರ ರೂಪಾಯಿ ಬಹುಮಾನವಿದೆ.

ಮೀರತ್ ನ ಈ ಸಮೋಸಾ ಆಫರ್ ಅಂಗಡಿಯ ಮಾಲೀಕ ಶುಭಂ ಈ ಬಗ್ಗೆ ಮಾಹಿತಿ ನೀಡಿದ್ದು ಕೊರೋನಾ ಬಳಿಕ ಅಂಗಡಿ ಗ್ರಾಹಕರ ಸಮಸ್ಯೆ ಎದುರಿಸತೊಡಗಿದೆ. ಹೀಗಾಗಿ ಗ್ರಾಹಕರನ್ನು ನಮ್ಮ ಅಂಗಡಿಯತ್ತ ಸೆಳೆಯಲು ನಾವು ಈ ಸರ್ಕಸ್ ಆರಂಭಿಸಿದ್ದೇವೆ. ಮೊದಲು ನಾಲ್ಕು ಕೆಜಿಯ ಸಮೋಸಾ ಸಿದ್ಧಪಡಿಸಿ ಸವಾಲು ನೀಡಲಾಗಿತ್ತು. ಆದರೆ ಈಗ ಈ ಸಮೋಸಾವನ್ನು 8 ಕೆಜಿಗೆ ಹೆಚ್ಚಿಸಿದ್ದೇವೆ ಎಂದಿದ್ದಾರೆ. ಈ ಬಾಹುಬಲಿ ಸಮೋಸಾವನ್ನು ವಿಶೇಷವಾಗಿ ಆಲೂಗಡ್ಡೆ, ಬಟಾಣಿ,ಕಾಟೇಜ್ ಚೀಸ್,ಡ್ರೈ ಪೂಟ್ಸ್ ನ್ನು ತುಂಬಿ ಸಿದ್ಧಪಡಿಸಲಾಗುತ್ತದೆ. ಇದುವರೆಗೂ ಅಂಗಡಿಯ ಎಂಟು ಕೆಜಿ ಸಮೋಸಾ ತಿನ್ನುವ ಚಾಲೆಂಜ್ ನ್ನು ಯಾರು ಪೂರ್ತಿಗೊಳಿಸಿಲ್ಲವಂತೆ. ಸದ್ಯದಲ್ಲೇ ಅಂಗಡಿಯು ಈ ಸವಾಲನ್ನು‌‌ ಮತ್ತಷ್ಟು ಕಠಿಣವಾಗಿಸಲು 10 ಕೆಜಿಯ ಸಮೋಸಾ ಸಿದ್ಧಪಡಿಸುವ ಲೆಕ್ಕಾಚಾರದಲ್ಲಿದೆಯಂತೆ.

ಇನ್ನೂ ಕೊರೋನಾ ಬಳಿಕ ಡಲ್ ಆಗಿದ್ದ ಶುಭಂ ಅಂಗಡಿಯ ವ್ಯಾಪಾರ ಈ ಬಾಹುಬಲಿ ಸಮೋಸಾದಿಂದ ಫೇಮಸ್ ಆಗಿದ್ದು ದೇಶದ ಎಲ್ಲೆಡೆಯಿಂದ ಫುಡ್ ಬ್ಲಾಗರ್ ಗಳು ಈ ಸಮೋಸಾ ನೋಡಲು ಬರ್ತಿದ್ದಾರಂತೆ. ಇನ್ಯಾಕೇ ತಡ ನೀವೊಮ್ಮೇ ಈ ಬಾಹುಬಲಿ ಸಮೋಸಾ ನೋಡಿ ತಿನ್ನಲು ಟ್ರೈ ಮಾಡಿ.

ಇದನ್ನೂ ಓದಿ : Salary Slip Details : ನಿಮಗಿದು ಗೊತ್ತೇ? ಸ್ಯಾಲರಿ ಸ್ಲಿಪ್‌ ಏನೆಲ್ಲಾ ಒಳಗೊಂಡಿರುತ್ತದೆ ಎಂದು !!

ಇದನ್ನೂ ಓದಿ : ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ : ಭರ್ತಿಯಾದ ಜಲಾಶಯದಿಂದ ಜನರಿಗೆ ಆತಂಕ

Eating Samosa win 51000 rupees, people have fallen for the tough offer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular