shoes and socks : ಶಾಲಾ ಮಕ್ಕಳಿಗೆ ಗುಡ್​ ನ್ಯೂಸ್​ : ಶೂ,ಸಾಕ್ಸ್​ ಖರೀದಿಗೆ ಸರ್ಕಾರದಿಂದ ಹಣ ಬಿಡುಗಡೆ

ಬೆಂಗಳೂರು : shoes and socks : ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಈ ಬಾರಿ ಶೂ ಹಾಗೂ ಸಾಕ್ಸ್​ ಭಾಗ್ಯ ಸಿಗುವುದು ಡೌಟು ಎಂದೇ ವಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಶೂ ಹಾಗೂ ಸಾಕ್ಸ್​ಗಳ ಖರೀದಿಗೆ ಅನುದಾನ ಬಿಡುಗಡೆ ಮಾಡಿದೆ. ಪ್ರಸಕ್ತ ಬಜೆಟ್​ನಲ್ಲಿ ಸಾಕ್ಸ್​ ಹಾಗೂ ಶೂಗಳ ಖರೀದಿಗೆ ಅನುದಾನ ಮೀಸಲಿಡದ ಹಿನ್ನೆಲೆಯಲ್ಲಿ ಈ ಬಾರಿ ಮಕ್ಕಳಿಗೆ ಶೂ ಸಾಕ್ಸ್​ ಸಿಗೋದಿಲ್ಲ ಎಂದು ಹೇಳಲಾಗ್ತಿತ್ತು.


ಆದರೆ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದು ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಶಾಲಾ ಮಕ್ಕಳಿಗೆ ಸಮವಸ್ತ್ರ ಖರೀದಿಗೆ ಈಗಾಗಲೇ ಅನುಮೋದನೆಯನ್ನು ನೀಡಲಾಗಿದೆ. ಅಂತೆಯೇ ಮಕ್ಕಳ ಶೂ ಹಾಗೂ ಸಾಕ್ಸ್​ ಖರೀದಿಗೆ 132 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದೇವೆ. ಈ ವಿಚಾರವಾಗಿ ಯಾರೂ ಗೊಂದಲವನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಸಿದ್ದಾರೆ.


8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್​ ಹಾಗೂ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಹಾಗೂ ಸಾಕ್ಸ್​ಗಳನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಆದರೆ 2019-20ನೇ ಸಾಲಿನಿಂದ ಈ ಯೋಜನೆಯನ್ನು ಕೈ ಬಿಡಲಾಗಿತ್ತು. ಇದೀಗ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಈ ಯೋಜನೆಗಳಿಗೆ ಮತ್ತೆ ಮರುಜೀವ ನೀಡಿದೆ.


ರಾಜ್ಯ ಸರ್ಕಾರವು ಈ ಬಾರಿ ಶೂ ಹಾಗೂ ಸಾಕ್ಸ್​ಗಳನ್ನು ಮಕ್ಕಳಿಗೆ ವಿತರಿಸುವುದು ಡೌಟು ಎಂಬ ಗುಮಾನಿ ಹೊರ ಬೀಳುತ್ತಿದ್ದಂತೆಯೇ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ರಾಜ್ಯ ಸರ್ಕಾರದ ಬಳಿ ಮಕ್ಕಳಿಗೆ ಶೂ ಹಾಗೂ ಸಾಕ್ಸ್​ ಖರೀದಿ ಮಾಡಲು ಹಣವಿಲ್ಲವೆಂದರೇ ನಾವೇ ಭಿಕ್ಷೆ ಮಾಡಿ ಹಣ ಸಂಗ್ರಹಣೆ ಮಾಡಿ ಮಕ್ಕಳಿಗೆ ಶೂ ಹಾಗೂ ಸಾಕ್ಸ್​ ಖರೀದಿಗೆ ಅನುದಾನ ಸಂಗ್ರಹಿಸುತ್ತೇವೆ ಎಂದು ಹೇಳಿದ್ದರು. ಡಿಕೆಶಿಯ ಈ ಹೇಳಿಕೆಗೆ ಟಾಂಗ್​ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಡಿ.ಕೆ ಶಿವಕುಮಾರ್ ಈ ಹಿಂದೆ ಕೋವಿಡ್​ ಸಂದರ್ಭದಲ್ಲಿಯೂ ಇದೇ ರೀತಿ ನಾವು ಭಿಕ್ಷೆ ಬೇಡಿ ಹಣ ಸಂಗ್ರಹಣೆ ಮಾಡುತ್ತೇವೆ ಎಂದು ಹೇಳಿದ್ದರು. ಮೊದಲು ಆ ಹಣ ಎಲ್ಲಿದೆ ಎಂದು ಹೇಳಲಿ ಎಂದು ವ್ಯಂಗ್ಯವಾಡಿದರು.

ಇದನ್ನು ಓದಿ : Chandrasekhar Guruji : ಗುರೂಜಿ ಇನ್ನಿಲ್ಲದ ಕಿರುಕುಳ ನೀಡಿದ್ದರು,ಸಾಯಿಸದೇ ಬೇರೆ ವಿಧಿಯಿರಲಿಲ್ಲ :ಕೊಲೆ ಹಿಂದಿನ ಕಾರಣ ಬಿಚ್ಚಿಟ್ಟ ಹಂತಕರು

ಇದನ್ನೂ ಓದಿ : Uttar Pradesh : ಹಿಂದೂ ದೇವರ ಫೋಟೋ ಇರುವ ಕಾಗದದ ಮೇಲೆ ಮಾಂಸ ಮಾರಾಟ : ಆರೋಪಿ ಬಂಧನ

shoes and socks 132 crores will release

Comments are closed.