Ek Bharath shresht bharath: ರಾಷ್ಟ್ರ ನಿರ್ಮಾಣದಲ್ಲಿ ಕನ್ನಡಿಗರ ಕೊಡುಗೆ ಸಾಕಷ್ಟಿದೆ: ಪ್ರಧಾನಿ ಮೋದಿ

ನವದೆಹಲಿ: (Ek Bharath shresht bharath) ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಕೊಡುಗೆ ಅಪಾರವಾಗಿದ್ದು, ದೇಶ ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡಿಗರಿಗೆ ನಮಿಸುತ್ತೇನೆ ಎಂದು ದೆಹಲಿ ಕರ್ನಾಟಕ ಸ‍ಂಘದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಉತ್ಸವನುದ್ದೇಶಿಸಿ ಪ್ರಧಾನಿ ಮೋದಿ ಅವರು ಹೇಳಿದರು. ಪೌರಾಣಿಕ ಕಾಲದಿಂದಲೂ ಕರ್ನಾಟಕವೂ ದೇಶದ ಅತ್ಯಂತ ಪ್ರಮುಖ ಭಾಗವಾಗಿದ್ದು, ಈ ದೇಶವನ್ನು ಮುನ್ನಡೆಸಲು ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದಿದ್ದಾರೆ.

ದೆಹಲಿ ಕರ್ನಾಟಕ ಸ‍ಂಘದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಉತ್ಸವನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕರ್ನಾಟಕದ ರಾಜ್ಯ ಐತಿಹಾಸಿಕ ಚರಿತ್ರೆ ಹೊಂದಿದ್ದು, ದೇವರ ದಾಸಿಮಯ್ಯ, ಬಸವಣ್ಣನವರ ಅನುಭವ ಮಂಟಪ, ವಚನಗಳು, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಕುವೆಂಪು ಬರೆದ ರಾಮಾಯಣ ದರ್ಶನಂ, ಕರ್ನಾಟಕದ ಕಂಸಾಳೆ, ಯಕ್ಷಗಾನ ಸೇರಿದಂತೆ ಕರ್ನಾಟಕದಲ್ಲಿ ವಿವಿಧತೆಯಿದೆ. ಭಾರತದ ಸಂಪ್ರದಾಯವಾಗಲಿ ಅಥವಾ ಭಾರತದ ಸ್ಪೂರ್ತಿಯಾಗಲಿ, ಕರ್ನಾಟಕವಿಲ್ಲದೇ ನಾವು ಭಾರತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಹನುಮಂತನಿಲ್ಲದೇ ರಾಮನೂ ಇಲ್ಲ, ರಾಮಾಯಣವೂ ಇಲ್ಲ.” ಎಂದು ರಾಜ್ಯದ ಐತಿಹಾಸಿಕ ಚರಿತ್ರೆಯನ್ನು ಕೊಂಡಾಡಿದ್ದಾರೆ.

ಕರ್ನಾಟಕದ ಏಳಿಗೆಯೆಂದರೆ ದೇಶ-ವಿದೇಶದ ಏಳಿಗೆ
ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರಭಾವ ದೇಶ-ವಿದೇಶಗಳಿಗೆ ಹರಡಿದೆ. ಕರ್ನಾಟಕದ ಏಳಿಗೆ ಎಂದರೆ ದೇಶ-ವಿದೇಶಗಳ ಏಳಿಗೆಯಾಗಿದೆ. ಕರ್ನಾಟಕದ ಅಭಿವೃದ್ದಿ ನಮ್ಮ ಸರ್ಕಾರದ ಪರಮೋಚ್ಚ ಉದ್ದೇಶವಾಗಿದೆ. ಕನ್ನಡಿಗರು ಕಷ್ಟಪಟ್ಟು ದುಡಿದ ಹಣ ಕರ್ನಾಟಕದ ಅಭಿವೃದ್ದಿಗೆ ನೀಡಲಾಗುತ್ತಿದೆ ಎಂದು ಮೋದಿಯವರು ಕರ್ನಾಟಕದ ಅಭಿವೃದ್ದಿ ಬಗ್ಗೆ ಸಾರಿ ಸಾರಿ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕಕ್ಕೆ ವಾರ್ಷಿಕ ಮೂವತ್ತು ಸಾವಿರ ಕೋಟಿ ರೂ ಅನುದಾನ ನೀಡಲಾಗುತ್ತಿದೆ. ಭದ್ರಾ ಮೇಲ್ದಂಡೆ ಮೂಲಕ ಕಿತ್ತೂರು ಕರ್ನಾಟಕದ ಅಭಿವೃದ್ದಿ ಮಾಡುತ್ತಿದೆ. ಇದರಿಂದ ಕರ್ನಾಟಕದ ವಿಕಾಸ ಬದಲಾಗಿದ್ದು, ಮುಂದಿನ ಇಪ್ಪತ್ತೈದು ವರ್ಷ ಮಹತ್ವದ್ದಾಗಿದೆ ಎಂದಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಹೊಗಳಿದ ಪ್ರಧಾನಿ
ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆ ಅದ್ಭುತವಾಗಿದ್ದು, ಅದರಲ್ಲಿ ಭಾರತದ ಸಭ್ಯತೆಯನ್ನು ಉಲ್ಲೇಖಿಸಲಾಗಿದೆ. ಇಡೀ ಭಾರತ ಹಾಗೂ ಕರ್ನಾಟಕದ ವಿವರಣೆಯನ್ನು ಒಳಗೊಂಡಿದ್ದು, ಏಕ್‌ ಭಾರತ್‌ ಶ್ರೇಷ್ಠ ಭಾರತ್‌ ಸಂದೇಶವನ್ನು ಸಾರುತ್ತಿದೆ ಎಂದು ಕುವೆಂಪು ಅವರ ನಾಡಗೀತೆಯನ್ನು ಪ್ರಧಾನಿ ಮೋದಿ ಅವರು ಹೊಗಳಿದ್ದಾರೆ.

ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ರೈತರಿಗೆ ಲಾಭ ಸಿಗಲಿದೆ;
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಿರಿಧಾನ್ಯಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದು, ಸಿರಿಧಾನ್ಯದ ಪ್ರಮುಖ ಕೇಂದ್ರ ಕರ್ನಾಟಕವಾಗಿದೆ. ರಾಗಿ ಕರ್ನಾಟಕದ ಸಂಸ್ಕೃತಿಯಾ ಭಾಗವಾಗಿದೆ. ಜೊತೆಗೆ ಯಡಿಯೂರಪ್ಪ ಅವರ ಕಾಲದಿಂದಲೂ ಸಿರಿಧಾನ್ಯ ಪ್ರಚಾರ ಮಾಡಲು ಆರಂಭಿಸಿದ್ದು, ವಿಶ್ವದಲ್ಲಿ ಅವರ ಬೇಡಿಕೆ ಆರಂಭವಾಗಿದೆ. ಇದು ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ರೈತರಿಗೆ ಲಾಭ ತಂದು ಕೊಡಲಿದೆ ಎಂದಿದ್ದಾರೆ.

ಇದನ್ನೂ ಓದಿ : Extremists arrested: ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ತೆರಳಲು ಯತ್ನಿಸುತ್ತಿದ್ದ ಇಬ್ಬರ ಬಂಧನ

ಇದನ್ನೂ ಓದಿ : ನಿಮ್ಮ ಆನ್‌ಲೈನ್ ಪಾವತಿ ವಹಿವಾಟುಗಳ ಸುರಕ್ಷಿತೆಗಾಗಿ ಈ ಸಲಹೆಗಳನ್ನು ಅನುಸರಿಸಿ

ದೆಹಲಿ ಕರ್ನಾಟಕ ಸಂಘದ 75 ನೇ ವಾರ್ಷಿಕೋತ್ಸವದ ಎರಡು (25 ಮತ್ತು 26) ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಏಕ ಭಾರತ ಶ್ರೇಷ್ಠ ಭಾರತ’ದ ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗಿದೆ.

Ek Bharath shresht bharath: Contribution of Kannadigas in nation building is enough: PM Modi

Comments are closed.