ಭಾನುವಾರ, ಏಪ್ರಿಲ್ 27, 2025
HomeNationalElephant kills woman : ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಂದ ಆನೆ : ಅಂತ್ಯಕ್ರಿಯೆ ವೇಳೆ...

Elephant kills woman : ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಂದ ಆನೆ : ಅಂತ್ಯಕ್ರಿಯೆ ವೇಳೆ ಶವ ಛಿದ್ರಗೊಳಿಸಿದ ಗಜರಾಜ

- Advertisement -

ಒಡಿಶಾ : ಆನೆಗಳು ಮನುಷ್ಯರ ಮೇಲೆ ದಾಳಿ ನಡೆಸುವ ಸುದ್ದಿಗಳನ್ನು ನಾವು ಆಗಾಗ ಕೇಳುತ್ತಿರುತ್ತೀವಿ . ಗ್ರಾಮೀಣ ಭಾಗಗಳಲ್ಲಿ ಇಂತಹ ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಆದರೆ ಓಡಿಶಾದ ಗ್ರಾಮವೊಂದರಲ್ಲಿ ನಡೆದ ಆನೆಯ ದಾಳಿ ಘಟನೆ ಮಾತ್ರ ಬೆಚ್ಚಿ ಬೀಳಿಸುವಂತಿದೆ. ಜೂನ್​ 10ರಂದು ನಡೆದ ಘಟನೆ ಇದಾಗಿದ್ದು ಮಯೂರ್​ಭಂಜ್​ ಜಿಲ್ಲೆಯ ರೈಪಾಲ್​ ಎಂಬ ಗ್ರಾಮದಲ್ಲಿ ಆನೆಯೊಂದು 70 ವರ್ಷದ ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ (Elephant kills woman) ನಡೆಸಿದೆ.

ತೀವ್ರ ರಕ್ತಸ್ರಾವದಿಂದಾಗಿ ಗಂಭೀರ ಸ್ಥಿತಿ ತಲುಪಿದ್ದ ವೃದ್ಧೆಯನ್ನು ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯ ಬಳಿಕ ಆಸ್ಪತ್ರೆ ಸಿಬ್ಬಂದಿ ಶವವನ್ನು ಕಳುಹಿಸಿಕೊಟ್ಟಿದ್ದಾರೆ. ಮನೆಗೆ ಆಗಮಿಸಿದ ಬಳಿಕ ವೃದ್ಧೆಯ ಅಂತ್ಯಕ್ರಿಯೆಗೆ ಸಕಲ ತಯಾರಿಯನ್ನು ನಡೆಸಲಾಗಿತ್ತು. ಆದರೆ ವೃದ್ಧೆಯ ಶವ ಮನೆಗೆ ಆಗಮಿಸುತ್ತಿದ್ದಂತೆಯೇ ಅತ್ಯಂತ ಆಕ್ರೋಶದಿಂದ ಆಕೆಯ ಮನೆಗೆ ನುಗ್ಗಿದ ಆನೆಯು ಶವದ ಮೇಲೆ ಹಿಗ್ಗಾ ಮುಗ್ಗಾ ದಾಳಿ ನಡೆಸಿದೆ. ಸೊಂಡಿಲಿನಿಂದ ಆನೆಯು ಶವಕ್ಕೆ ತಿವಿಯುತ್ತಿದ್ದ ಭಯಾನಕ ದೃಶ್ಯವನ್ನು ಕಂಡ ಗ್ರಾಮಸ್ಥರು ಅಂತ್ಯಕ್ರಿಯೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘೀಳಿಡಲು ಆರಂಭಿಸಿದ ಆನೆಯು ಸೊಂಡಿಲಿನಿಂದ ಶವವನ್ನು ಎತ್ತಿ ನೆಲಕ್ಕೆ ಕುಟ್ಟಿದೆ . ಗ್ರಾಮದಲ್ಲಿನ ಅನೇಕ ಮನೆಗಳ ಮೇಲೆಯೂ ಆನೆಯು ದಾಳಿ ನಡೆಸಿದೆ. ಕೊಟ್ಟಿಗೆಗಳಲ್ಲಿ ಇದ್ದ ಮೇಕೆಗಳನ್ನು ಕೊಂದು ಹಾಕಿದೆ. ಮನೆಗಳಿಗೆ ದಾಳಿ ಮಾಡಿ ದವಸ ಧಾನ್ಯಗಳನ್ನು ತಿಂದಿದೆ. ಗ್ರಾಮಸ್ಥರು ನೋಡ ನೋಡುತ್ತಿದ್ದಂತೆಯೇ ವೃದ್ಧೆಯ ಶವವನ್ನು ಛಿದ್ರ ಛಿದ್ರ ಮಾಡಿದೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಈ ವಿಚಾರವಾಗಿ ಮಾತನಾಡಿದ ಗ್ರಾಮಸ್ಥರು ನಮ್ಮ ಭಾಗದಲ್ಲಿ ಆನೆಗಳು ದಾಳಿ ನಡೆಸುವುದು ಸರ್ವೇ ಸಾಮಾನ್ಯ. ಆದರೆ ಈ ವೃದ್ಧೆಯ ಮೇಲೆ ಆನೆಗೇಕೆ ಅಷ್ಟು ಕೋಪವಿತ್ತು ಎನ್ನುವುದು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : Shopian Encounter Update : ಬ್ಯಾಂಕ್‌ ಮ್ಯಾನೇಜರ್‌ ಹತ್ಯೆ, ಉಗ್ರನನ್ನು ಹೊಡೆದುರುಳಿಸಿದ ಕಾಶ್ಮೀರ ಪೊಲೀಸರು

ಇದನ್ನೂ ಓದಿ : Sachin Tendulkar World Record : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಗೆ ಕಾದಿದೆ ದೊಡ್ಡ ಸಂಚಕಾರ

Elephant kills woman in Odisha, tramples her body at funeral

RELATED ARTICLES

Most Popular