Saudi Arabia : ಎಟಿಎಂ ಮಷಿನ್ಗಳನ್ನು ದೋಚುವ ಯತ್ನದಲ್ಲಿ ವಿಫಲನಾದ ಸುಡಾನ್ ವಲಸಿಗನನ್ನು ಸೌದಿ ಅರೇಬಿಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಯತ್ನದಲ್ಲಿ ಈತ ಎಟಿಎಂ ಯಂತ್ರಕ್ಕೆ ಹಾನಿ ಮಾಡಿದ್ದಾನೆ ಎನ್ನಲಾಗಿದೆ.
ಮಧ್ಯ ಸೌದಿ ಅರೇಬಿಯಾದ ಬುರೈದಾ ನಗರದಲ್ಲಿ ಆರೋಪಿಯು ಎಟಿಎಂ ಯಂತ್ರದಿಂದ ಹಣವನ್ನು ಕದಿಯಲು ಯತ್ನಿಸಿದ್ದ. ಇದಕ್ಕಾಗಿ ಆತ ವಿದ್ಯುತ್ ಗರಗಸವನ್ನು ಬಳಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಈತನ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಗಿತ್ತಿದೆ. ಮತ್ತು ಈತನ ವಿರುದ್ಧ ಸಾರ್ವಜನಿಕ ಕಾನೂನು ಕ್ರಮಕ್ಕೆ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ.
ಸೌದಿ ಅರೇಬಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಎಟಿಎಂ ಧ್ವಂಸ ಪ್ರಕರಣಗಳು ಹೆಚ್ಚುತ್ತಿವೆ. ಎಟಿಎಂ ಯಂತ್ರಗಳನ್ನು ಧ್ವಂಸಗೊಳಿಸಲು ಯತ್ನಿಸಿದ ಆರೋಪದ ಅಡಿಯಲ್ಲಿ ಸೌದಿ ಪೊಲೀಸರು ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸೌದಿ ಪೊಲೀಸರು ದಕ್ಷಿಣ ಗಡಿ ಪ್ರದೇಶವಾದ ಅಸಿರ್ನಲ್ಲಿ ಹಣವನ್ನು ದೋಚುವ ಸಲುವಾಗಿ ಎಟಿಎಂ ಯಂತ್ರ ಹಾನಿಗೊಳಿಸಿದ್ದ ಇಬ್ಬರನ್ನು ಬಂಧಿಸಿದ್ದರು.
2020ರ ಮಾರ್ಚ್ ತಿಂಗಳಲ್ಲಿ ಸೌದಿ ಪೊಲೀಸರು ರಾಜಧಾನಿ ರಿಯಾದ್ನಲ್ಲಿ ಎಟಿಎಂ ಯಂತ್ರವನ್ನು ಸ್ಫೋಟಗೊಳಿಸಲು ಮುಂದಾಗಿದ್ದ 11 ಸದಸ್ಯರನ್ನು ಬಂಧಿಸಿದ್ದರು .
ಅರಬ್ ರಾಷ್ಟ್ರದಲ್ಲಿ ಕೋವಿಡ್ ವಿರುದ್ಧ 6 ತಿಂಗಳ ಹೋರಾಟ ನಡೆಸಿ ಗೆದ್ದ ಭಾರತೀಯ
ನವದೆಹಲಿ : ಗಡಿಯಲ್ಲಿ ನಿಂತು ದೇಶವನ್ನು ಕಾಯುವವರದ್ದು ಒಂದು ರೀತಿಯಲ್ಲಿ ಜೀವದ ಜೊತೆಯಲ್ಲಿ ಆಟವಾದರೆ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಜನರನ್ನು ರಕ್ಷಿಸುತ್ತಿರುವ ಮುಂಚೂಣಿ ಕಾರ್ಯಕರ್ತರ ಕಾಯಕ ಕೂಡ ಯಾವುದೇ ಹೋರಾಟಕ್ಕೆ ಕಡಿಮೆಯೇನಿಲ್ಲ. ಸೋಂಕಿನ ಭಯವಿದ್ದರೂ ಜನರಿಗಾಗಿ ಅವರ ಆರೋಗ್ಯಕ್ಕಾಗಿ ಹೋರಾಡುವ ಇವರ ಕಾರ್ಯವನ್ನು ಮೆಚ್ಚುವಂತದ್ದೇ. ಅದೇ ರೀತಿ ಅರಬ್ ರಾಷ್ಟ್ರದಲ್ಲಿಯೂ ಮುಂಚೂಣಿ ಸಿಬ್ಬಂದಿಯಾಗಿದ್ದ (miraculous recovery from COVID) ಭಾರತೀಯ ವ್ಯಕ್ತಿ ಬರೋಬ್ಬರಿ ಆರು ತಿಂಗಳುಗಳ ಬಳಿಕ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ .
ಕೇರಳ ಮೂಲದವರಾದ 38 ವರ್ಷದ ಅರುಣ್ ಕುಮಾರ್ ನಾಯರ್ ಕೋವಿಡ್ ಸೋಂಕಿಗೆ ಒಳಗಾದ ಬಳಿಕ ಅವರ ಶ್ವಾಸಕೋಶ ತೀವ್ರವಾಗಿ ಹಾನಿಗೊಳಗಾಗಿತ್ತು. ಹೀಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅರುಣ್ಕುಮಾರ್ ನಾಯರ್ ಸರಿ ಸುಮಾರು ಆರು ತಿಂಗಳುಗಳ ಕಾಲ ಲೈಫ್ಸಪೋರ್ಟಿಂಗ್ ಸಿಸ್ಟಂನಲ್ಲಿಯೇ ಇದ್ದರು. ಒಟಿ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಕುಮಾರ್ ಕೋವಿಡ್ ಹೋರಾಟದ ಹಾದಿ ಕೂಡ ದುರ್ಗಮವಾಗಿತ್ತು. ಇವರಿಗೆ ಕೇವಲ ಕೋವಿಡ್ ಸೋಂಕಿನಿಂದ ಶ್ವಾಸಕೋಶ ಮಾತ್ರ ಹಾನಿಗೊಳಗಾಗಿರಲಿಲ್ಲ. ಈ ಅವಧಿಯಲ್ಲಿ ಅವರಿಗೆ ಹೃದಯ ಸ್ತಂಭನ ಕೂಡ ಉಂಟಾಗಿತ್ತು.
ಆದರೆ ಅರುಣ್ ಕುಮಾರ್ ನಾಯರ್ ತಮ್ಮ ಹೋರಾಟವನ್ನು ಕೈ ಬಿಡಲಿಲ್ಲ. ಸುಮಾರು ಐದು ತಿಂಗಳುಗಳ ಕಾಲ ಆಸ್ಪತ್ರೆಯ ಐಸಿಯುವಿನಲ್ಲಿ ಲೈಫ್ ಸಪೋರ್ಟಿಂಗ್ ಸಿಸ್ಟಂನಲ್ಲಿಯೇ ಇದ್ದ ಅರುಣ್ ಕುಮಾರ್ ಟ್ರಾಕಿಯೋಸ್ಟೊಮಿ ಹಾಗೂ ಬ್ರಾಂಕೋಸ್ಕೋಪಿಯೋದಂತಹ ಚಿಕಿತ್ಸೆಗಳನ್ನು ಮಾಡಿಸಿಕೊಂಡರು. ಕೃತಕ ಶ್ವಾಸಕೋಶದಿಂದ ಉಸಿರಾಡುತ್ತಿದ್ದ ಅರುಣ್ ಕುಮಾರ್ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿರುವ ಅರುಣ್ ಕುಮಾರ್ ನಾಯರ್, ಬರೋಬ್ಬರಿ ಅರ್ಧ ವರ್ಷಗಳ ಕಾಲ ಜಗತ್ತಿನಲ್ಲಿ ಏನಾಯ್ತು ಎಂಬುದೇ ನನಗೆ ತಿಳಿದಿಲ್ಲ. ನನಗೆ ಈ ಮರುಜನ್ಮ ಸಿಕ್ಕಿದೆ. ನಾನು ಸಾವಿನ ದವಡೆಯಿಂದ ಬಚಾವಾಗಿ ಬಂದಿದ್ದೇನೆ ಎಂದು ಹೇಳಿದರು,
ಇನ್ನು ಆಸ್ಪತ್ರೆಯಲ್ಲಿ ಮುಂಚೂಣಿ ಸಿಬ್ಬಂದಿಯ ಕೋವಿಡ್ ಹೋರಾಟವನ್ನು ಗಮನಿಸಿದ ಬಹುರಾಷ್ಟ್ರೀಯ ಆರೋಗ್ಯ ಸೇವಾ ಗುಂಪು ವಿಪಿಎನ್ ಹೆಲ್ತ್ ಕೇರ್ ಅರುಣ್ ಕುಮಾರ್ರಿಗೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ಪವಾಡದ ರೀತಿಯಲ್ಲಿ ಕೋವಿಡ್ನಿಂದ ಪಾರಾದ ಅರುಣ್ ಕುಮಾರ್ರಿಗೆ ಬುರ್ಜಿಲ್ ಆಸ್ಪತ್ರೆಯಲ್ಲಿ ಗುರುವಾರ ನಡೆದ ಸಮಾರಂಭ ದಲ್ಲಿ ಅರುಣ್ ಕುಮಾರ್ರ ಎಮಿರೇಟ್ಸ್ ಸಹೋದ್ಯೋಗಿಗಳು ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದ್ದಾರೆ.
Expat arrested for sawing off ATM in Saudi Arabia
ಇದನ್ನು ಓದಿ : Chinese Soldiers : ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ತನಿಖಾ ವರದಿಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ
ಇದನ್ನೂ ಓದಿ : Rahul Gandhi hits out at Modi govt :‘ಭಾರತವನ್ನು ಸಾಮ್ರಾಜ್ಯದಂತೆ ಆಳಲು ಸಾಧ್ಯವಿಲ್ಲ’ : ಮೋದಿ ಸರ್ಕಾರಕ್ಕೆ ರಾಹುಲ್ ಟಾಂಗ್