Fishing boat collision: ಬಂಡೆಗೆ ಅಪ್ಪಳಿಸಿದ ಮೀನುಗಾರಿಕಾ ಹಡಗು: 15 ಮಂದಿ ಮೀನುಗಾರರ ರಕ್ಷಣೆ

ಮಹಾರಾಷ್ಟ್ರ: (Fishing boat collision) ಮಹಾರಾಷ್ಟ್ರದ ಪಾಲ್ಘರ್‌ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯೊಂದು ಬಂಡೆಗೆ ಢಿಕ್ಕಿ ಹೊಡೆದು ನಂತರದಲ್ಲಿ ಮಗುಚಿ ಬಿದ್ದಿದೆ. 15 ಮಂದಿ ಮೀನುಗಾರಿಕಾ ಸಿಬ್ಬಂದಿಗಳಿದ್ದು, ಸುತ್ತಮುತ್ತಲಿದ್ದ ದೋಣಿಗಳಲ್ಲಿದ್ದ ಮೀನುಗಾರರು ಇವರನ್ನು ರಕ್ಷಿಸಿದ್ದಾರೆ.

ಬೋಯಿಸರ್‌ ಮುರ್ಬೆ ಗ್ರಾಮದ ಬಳಿಯಲ್ಲಿ ಸೋಮವಾರ ಈ ಘಟನೆ (Fishing boat collision) ನಡೆದಿದ್ದು, ವೀಣ್ ತಾರೆ ಎಂಬವರಿಗೆ ಸೇರಿದ ಜಯ್‌ ಸಾಗರಿಕಾ ಮೀನುಗಾರಿಕಾ ಹಡಗು ಬಂಡೆಗೆ ಅಪ್ಪಳಿಸಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿದ್ದ ಮೀನುಗಾರಿಕಾ ಹಡಗಿನಲ್ಲಿದ್ದ ಸಿಬ್ಬಂದಿಗಳು ಮಗುಚಿ ಬಿದ್ದ ಮೀನುಗಾರಿಕಾ ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ.

ಸದ್ಯ ನಡೆದ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಹಡಗಿನ ಮಾಲೀಕರಾದ ಪ್ರವೀಣ್‌ ತಾರೆ ಅವರು ಅಪಘಾತದ ಬಗ್ಗೆ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿಯ ಸಿಬ್ಬಂದಿಗಳು ಅಪಘಾತದ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: Andhra government: ಸಾರ್ವಜನಿಕ ರಸ್ತೆಯಲ್ಲಿ ರಾಲಿ, ಸಭೆಗಳಿಗೆ ನಿಷೇಧ : ಆಂಧ್ರ ಸರಕಾರದ ಮಹತ್ವದ ಆದೇಶ

ಮೈಸೂರಿನಲ್ಲಿ ಸಿಲಿಂಡರ್‌ ಸ್ಫೋಟ: 6 ಮಂದಿಗೆ ಗಾಯ

ಮೈಸೂರು: ಅಗ್ನಿಶಾಮಕ ವಸತಿ ಗೃಹದಲ್ಲಿ ಬೆಳ್ಳಂಬೆಳಗ್ಗೆಯೇ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ಸುಮಾರು 10 ಜನರಿಗೆ ಗಾಯವಾಗಿದ್ದು ಇದರಲ್ಲಿ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಬನ್ನಿಮಂಟಪದ ವಸತಿಗೃಹದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಹೀಗಾಗಿ ಅಕ್ಕಪಕ್ಕದ ಮನೆಯವರಿಗೂ ಬೆಂಕಿ ತಗುಲಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಹಾಗೂ ಕೆಲವರು ಸೇರಿದಂತೆ ಮಂದಿಗೆ ಗಾಯಗಳಾಗಿವೆ.

ಘಟನೆಯಲ್ಲಿ ಒಟ್ಟು 10 ಮಂದಿ ಗಾಯಗೊಂಡಿದ್ದು 6 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನ ಸ್ಥಳೀಯ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಎನ್​ಆರ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : Suhail Sameer: ಭಾರತ್‌ ಪೇ ಸಿಇಒ ಹುದ್ದೆಯಿಂದ ಕೆಳಗಿಳಿದ ಸುಹೇಲ್‌ ಸಮೀರ್‌

ಇದನ್ನೂ ಓದಿ : Competition Commission Of India : ಗೂಗಲ್‌ ಕಂಪೆನಿಗೆ 1337 ಕೋಟಿ ರೂ. ದಂಡ ವಿಧಿಸುವಂತೆ ಸಿಸಿಐ ಆದೇಶ

ಇದನ್ನೂ ಓದಿ : Ration Card Holder : ಪಡಿತರದಾರರಿಗೆ ಗುಡ್‌ನ್ಯೂಸ್ : ಕೇವಲ 500 ರೂ.ಗೆ‌ ಲಭ್ಯವಾಗಲಿದೆ ಗ್ಯಾಸ್ ಸಿಲಿಂಡರ್

The incident took place near Boisar Murbe village on Monday when the fishing vessel Jai Sagarika belonging to Veen Tare hit a rock and capsized.

Comments are closed.