ಪಣಜಿ : ಹೊಸ ವರ್ಷ ಸ್ವಾಗತಿಸೋ ಹೊತ್ತಿನಲ್ಲಿ ಜನರು ಎಲ್ಲಿ ಪಾರ್ಟಿ ಮಾಡೋದು, ಹೇಗೆ ಎಂಜಾಯ್ ಮಾಡೋದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಕೆಲವರು ರಾಜ್ಯದ ಗಡಿದಾಟಿ ಗೋವಾದಲ್ಲಿ ಪಾರ್ಟಿ ( Goa New Year Alert ) ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಆದರೆ ನ್ಯೂ ಇಯರ್ ಪಾರ್ಟಿ ಮಾಡೋಕೆ ಗೋವಾಕ್ಕೆ ಬರೋ ಪ್ರವಾಸಿಗರಿಗೆ ಗೋವಾ ಸರ್ಕಾರ ಶಾಕ್ ನೀಡಿದ್ದು, ಗಡಿಯಲ್ಲಿ ಭದ್ರತೆ ಹೆಚ್ಚಿಸಿರೋ ಸರ್ಕಾರ ಗೋವಾ ಎಂಟ್ರಿಗೆ ಖಡಕ್ ರೂಲ್ಸ್ ಜಾರಿ ಮಾಡಿದೆ.
ಗೋವಾದ ಬೀಚ್ ನಲ್ಲಿ ಎಣ್ಣೆ ಹೊಡೆಯುತ್ತಾ ದಡಕ್ಕೆ ಬರೋ ತೆರೆಗಳನ್ನು ಎಣಿಸುತ್ತಾ ರಿಲ್ಯಾಕ್ಸ್ ಮಾಡೋ ಪ್ಲ್ಗಾನ್ ನಲ್ಲಿದ್ದರೇ ನಿಮ್ಮ ಪ್ಲ್ಯಾನ್ ನ್ನು ಇನ್ನೊಮ್ಮೆ ಚೆಕ್ ಮಾಡ್ಕೊಳ್ಳಿ. ಯಾಕಂದ್ರೇ ಗೋವಾ ಸರ್ಕಾರ ಹೊರ ರಾಜ್ಯಗಳಿಂದ ಬರೋರಿಗೆ ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ. ಹೊಸ ವರ್ಷಾಚರಣೆಗೆ ಇನ್ನು ಮೂರು ದಿನ ಬಾಕಿ ಇರುವಂತೆಯೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೋವಾಕ್ಕೆ ಪ್ರವೇಶಿಸಲು ನೆಗೆಟಿವ್ ವರದಿ ಕಡ್ಡಾಯ. ಅಲ್ಲದೇ ರೆಸ್ಟೋರೆಂಟ್ ಗಳಿಗೆ ತೆರಳಲು ಎರಡು ಡೋಸ್ ವಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯ ಎಂದು ಆದೇಶಿಸಿದ್ದು, ವಿಸ್ಕೃತ ನಿಯಮಗಳ ಒಟ್ಟಿತ ಶೀಘ್ರದಲ್ಲೇ ಬಿಡುಗಡೆ ಮಾಡೋದಾಗಿ ವಿವರಣೆ ನೀಡಿದ್ದಾರೆ.
ಗೋವಾದಲ್ಲಿ ಬೀಚ್ ಹಾಗೂ ರೆಸಾರ್ಟ್ ಗಳಲ್ಲಿ ಹೊಸ ವರ್ಷಾಚರಣೆ ಸೆಲಿಬ್ರೇಶನ್ ಜೋರಾಗಿರುತ್ತೆ. ಹೀಗಾಗಿ ಮಹಾರಾಷ್ಟ್ರ,ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಂದಲೂ ಪ್ರವಾಸಿಗರು ಗೋವಾ ಕ್ಕೆ ಬರುತ್ತಾರೆ. ಹೀಗಾಗಿ ಗೋವಾ ಸರ್ಕಾರ ಕೂಡ ಕಠಿಣ ನಿಯಮ ರೂಪಿಸಿದೆ. ಈಗಾಗಲೇ ಗೋವಾದಲ್ಲೂ ಓಮೈಕ್ರಾನ್ ಹಾಗೂ ಕೊರೋನಾ ಪ್ರಕರಣಗಳು ಹೆಚ್ಚಾಗಿರೋದರಿಂದ ನೈಟ್ ಕರ್ಪ್ಯೂ ಜಾರಿಯಲ್ಲಿದೆ. ಹೀಗಿದ್ದರೂ ಗೋವಾದಲ್ಲಿ ನ್ಯೂ ಇಯರ್ ಸೆಲಿಬ್ರೇಶನ್ ಜೋರಾಗಿ ನಡೆಯೋ ಸಾಧ್ಯತೆ ಇದೆ.
ಹೀಗಾಗಿ ಜನಸಂದಣಿ ಹಾಗೂ ಕೊರೋನಾ ಸೋಂಕಿನ ಭಯದ ಹಿನ್ನೆಲೆಯಲ್ಲಿ ಸರ್ಕಾರ ಗೋವಾ ಪ್ರವೇಶಿಸುವ ಗಡಿಗಳಲ್ಲಿ ಪರಿಶೀಲನೆ ಚುರುಕುಗೊಳಿಸಿದೆ. ಮಾತ್ರವಲ್ಲ ಗೋವಾ ಪ್ರವೇಶಿಸಲು 48 ಗಂಟೆಗಳಲ್ಲಿ ನಡೆಸಿದ ಆರ್.ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ಹಾಗೂ ಎರಡು ಡೋಸ್ ವಾಕ್ಸಿನ್ ಪಡೆದ ರಿಪೋರ್ಟ್ ತೋರಿಸಬೇಕು. ಈ ಅದೇಶದಿಂದ ಸಾಕಷ್ಟು ಪ್ರವಾಸಿಗರು ಗೋವಾದತ್ತ ತೆರಳೋ ತಮ್ಮ ನ್ಯೂ ಇಯರ್ ಪ್ಲ್ಯಾನ್ ಕ್ಯಾನ್ಸಲ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಜನರು ಗೋವಾದ ಬೀಚ್ ಹಾಗೂ ರೆಸಾರ್ಟ್ ಗಳಲ್ಲಿ ಹೊಸವರ್ಷವನ್ನು ಸ್ವಾಗತಿಸಿ ಸಂಭ್ರಮಿಸುತ್ತಿದ್ದರು. ಆದರೆ ಎರಡು ವರ್ಷದಿಂದ ಕೊರೋನಾ ಈ ಖುಷಿಗೆ ಬ್ರೇಕ್ ಹಾಕಿತ್ತು.
ಇದನ್ನೂ ಓದಿ : Accused arrest :ದೈವಸ್ಥಾನ ,ಮಸೀದಿಗಳಲ್ಲಿ ಕಾಂಡೋಮ್ ಎಸೆಯುತ್ತಿದ್ದವನ ಬಂಧನ
ಇದನ್ನೂ ಓದಿ : ಈ ಲಕ್ಷಣಗಳಿದ್ದರೆ ಓಮಿಕ್ರಾನ್ ಸೋಂಕು ತಗುಲಿರಬಹುದು ಎಚ್ಚರ; ಓಮಿಕ್ರಾನ್ ಬಂದರೆ ದೇಹದಲ್ಲಿ ಆಗುವ ಬದಲಾವಣೆಗಳಿವು
(Goa New Year Alert : Before going to Goa be warned: tuff Rules implemented by Government)