IND vs SA Test Day 4 Score: ದಕ್ಷಿಣ ಆಫ್ರಿಕಾದ ವಿಧ್ವಂಸಕ ಬೌಲಿಂಗ್ ದಾಳಿಯನ್ನು ಅನುಸರಿಸಿದರೆ ಮಾತ್ರ ಭಾರತ ಗೆಲ್ಲಬಹುದು! 4ನೇ ದಿನದಾಟದ ಅಂತ್ಯಕ್ಕೆ 305 ಟಾರ್ಗೆಟ್

ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ (IND vs SA 1st Test Day 4) ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ 50.3 ಓವರ್‌ಗಳ ಮುಕ್ತಾಯಕ್ಕೆ ಕೇವಲ 174 ರನ್‌ಗಳಿಗೆ ಆಲೌಟ್ ಆಗಿದೆ. ಈಮೂಲಕ ನಾಲ್ಕನೇಯ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 305 ರನ್‌ಗಳ ಗುರಿ ನೀಡಿದಂತಾಗಿದೆ. ಮುಂದುವರೆದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತನ್ನ ಒಂದು ವಿಕೆಟ್ ನಷ್ಟಕ್ಕೆ 7 ರನ್ ಗಳಿಸಿದೆ. ಪಂದ್ಯವನ್ನು ತನ್ನೆಡೆಗೆ ಎಳೆದುಕೊಳ್ಳಲು ಪ್ರಯತ್ನ ( IND vs SA 1st Test Day 4 Live Score) ನಡೆಸುತ್ತಿದೆ.

ಇದಕ್ಕೂ ಮುನ್ನ ಭಾರತ ತಂಡ ಗಳಿಸಿದ್ದ 327 ರನ್‌ಗಳಿಗೆ ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಬೌಲರ್ ಮೊಹಮ್ಮದ್ ಶಮಿ ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿ ಮೆರೆದು ಐದು ವಿಕೆಟ್ ಕೀಳುವ ಮೂಲಕ ಆಪ್ತರಕ್ಷಕರಾದರು. ಹೀಗಾಗಿ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಗಳಿಸಿ ಬೀಗಿತು.

ಇಂದಿನ ದಿನದಾಟದ ವಿವರ
ಇಂದಿನ ದಿನದಾಟ ಮುಂದುವರಿಸಿದ ಭಾರತ ಕ್ರಿಕೆಟ್ ತಂಡವನ್ನು ಕಗಿಸೊ ರಬಾಡ, ಮಾರ್ಕೊ ಜಾನ್ಸನ್ ಹಾಗೂ ಲುಂಗಿ ಗಿಡಿ ಶಾಕ್ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಪ್ರತಿಭಾನ್ವಿತ ಆಟಗಾರ ಕೆ.ಎಲ್. ರಾಹುಲ್ 23 ರನ್ ಗಳಿಸಿ ಔಟ್ ಆಗಿದ್ದು ಸಹ ಭಾರತಕ್ಕೆ ಕೊಂಚ ಆಘಾತ ನೀಡಿತು. ಜೊತೆಗೆ ಕೆ.ಎಲ್. ರಾಹುಲ್ ಅಷ್ಟೇ ಅಲ್ಲದೇ ಚೇತೇಶ್ವರ ಪೂಜಾರ (16) ಹಾಗೂ ನಾಯಕ ವಿರಾಟ್ ಕೊಹ್ಲಿ (18) ಸಹ ಕಡಿಮೆ ಮೊತ್ತಕ್ಕೆ ಔಟ್ ಆಗಿಬಿಟ್ಟರು.

.ದಕ್ಷಿಣ ಆಫ್ರಿಕಾ ತಂಡಕ್ಕೆ ನೆರವಾದವರು ಬೌಲರ್‌ಗಳಾದ ರಬಾಡ ಹಾಗೂ ಜಾನ್ಸನ್. ಅನುಕ್ರಮವಾಗಿ ನಾಲ್ಕು ಎರಡು ವಿಕೆಟ್ ತೆಗೆದು ಭಾರತದ ಬ್ಯಾಟರ್‌ಗಳನ್ನು ಕಂಗೆಡಿಸಿದರು. ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ ಈ ಪ್ರಮುಖ ಆಟಗಾರರ ವಿಫಲತೆಯಿಂದ ಕಂಗೆಡುವ ಹಂತದಲ್ಲಿದ್ದ ಬಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತವರು ರಿಷಭ್ ಪಂತ್.  34 ರನ್‌ಗಳನ್ನು ಬಾರಿಸುವ ಮೂಲಕ ನೆರವಾದರು ಆದರೆ ಮತ್ತೋರ್ವ ಆಟಗಾರ ಅಜಿಂಕ್ಯ ರಹಾನೆ ಅವರು 20 ರನ್‌ಗಳನ್ನಷ್ಟೇ ಗಳಿಸಲು ಶಕ್ತರಾದರು.

ಇದನ್ನೂ ಓದಿ: 5G in Bengaluru: ಬೆಂಗಳೂರಲ್ಲಿ 5ಜಿ ಇಂಟರ್‌ನೆಟ್ ಸೇವೆ ಆರಂಭವಾಗುವುದು ಯಾವಾಗ?

(India vs South Africa 1st Test 4rth day live India set target of 305 runs for South Africa)

Comments are closed.